Sai Pallavi: ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿಯೇ ಸೀತೆ, ಶೂಟಿಂಗ್ ಸ್ಪಾಟ್ ನಿಂದ ಫೋಟೋ ಲೀಕ್

Written by Soma Shekar

Published on:

---Join Our Channel---

Sai Pallavi : ಬಾಲಿವುಡ್ ನಲ್ಲಿ (Bollywood) ನಿರ್ಮಾಣ ಆಗ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ರಾಮಾಯಣದ (Ramayana) ವಿಚಾರವಾಗಿ ಒಂದಲ್ಲಾ ಒಂದು ಸುದ್ದಿಗಳು ಆಗ್ತಾನೇ ಇದೆ. ಅದ್ದೂರಿ ನಿರ್ಮಾಣ, ಅದ್ದೂರಿ ತಾರಾಗಣದೊಂದಿಗೆ ಬರ್ತಿರೋ ಈ ಸಿನಿಮಾದ ವಿಶೇಷತೆ ಏನಂದ್ರೆ ಈ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ನಟಿಸ್ತಾ ಇರೋದು ಮತ್ತು ಈ ಸಿನಿಮಾದ ನಿರ್ಮಾಣದಲ್ಲೂ ಸಹಾ ಅವರು ತೊಡಗಿಕೊಂಡಿರೋದಾಗಿದೆ. ರಾಮಾಯಣ ಸಿನಿಮಾದ ಪಾತ್ರಗಳಲ್ಲಿ ಯಾರು ಯಾರು ನಟಿಸ್ತಾರೆ ಅನ್ನೋದು ಇನ್ನು ಅಧಿಕೃತ ಘೋಷಣೆ ಆಗಿಲ್ಲ‌.

ಆದರೆ ಸಿನಿಮಾ ಚಿತ್ರೀಕರಣ ಆರಂಭ ಆಗಿದ್ದು, ಚಿತ್ರೀಕರಣದ ಸ್ಥಳದಿಂದ ಹೊರ ಬರ್ತಾ ಇರೋ ಫೋಟೋಗಳನ್ನು ನೋಡಿ ಈಗಾಗಲೇ ನೆಟ್ಟಿಗರಿಗೆ ಸಿನಿಮಾದ ಕಲಾವಿದರ ಕುರಿತಾಗಿ ಮಾಹಿತಿಗಳು ಸಿಕ್ಕಿವೆ. ಅಲ್ಲದೇ ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸ್ತಾರೆ ಅನ್ನೋ ಸುದ್ದಿಗಳು ಆಗ್ತಾ ಇತ್ತೋ ಈಗ ಅದೇ ಸುದ್ದಿಗಳು ನಿಜ ಆಗ್ತಿದೆ ಅಂತಾನೇ ಹೇಳಬಹುದು.

ರಾಮಾಯಣ ಸಿನಿಮಾದಲ್ಲಿ ಟಾಲಿವುಡ್ ನ ಲೇಡಿ ಪವರ್ ಸ್ಟಾರ್ ಖ್ಯಾತಿಯ ನಟಿ ಸಾಯಿ ಪಲ್ಲವಿ (Sai Pallavi) ಸೀತಾ ಪಾತ್ರವನ್ನು ಮಾಡ್ತಾರೆ ಅನ್ನೋದು ಸಾಕಷ್ಟು ದಿನಗಳಿಂದಲೂ ಹರಿದಾಡ್ತಾ ಇರೋ ಸುದ್ದಿಗಳೇ ಆದರೂ ಈ ಬಗ್ಗೆ ನಟಿಯಾಗ್ಲೀ ಅಥವಾ ಚಿತ್ರತಂಡವಾಗ್ಲೀ ಯಾವುದೇ ರೀತಿಯ ಅಧಿಕೃತ ಸ್ಪಷ್ಟನೆಯನ್ನು ಖಂಡಿತ ನೀಡಿರಲಿಲ್ಲ.

ಆದ್ರೆ ಈಗ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರೇ ಸೀತಾ ಪಾತ್ರವನ್ನು ನಿರ್ವಹಿಸ್ತಾ ಇದ್ದಾರೆ ಅನ್ನೋದನ್ನ ಸಾಬೀತು ಮಾಡುವಂತ ಫೋಟೋಗಳು ಹೊರ ಬಂದಿವೆ. ಚಿತ್ರೀಕರಣ ಸ್ಥಳದಿಂದ ಹೊರ ಬಂದಿರುವ ಫೋಟೋಗಳಲ್ಲಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಪೌರಾಣಿಕ ಉಡುಗೆಗಳನ್ನು ಧರಿಸಿರೋದು ಕಂಡಿದ್ದು ಅಲ್ಲಿಗೆ ಸಾಯಿ ಪಲ್ಲವಿ ಸೀತಾ ಪಾತ್ರ ಮಾಡ್ತಿರೋದು ಪಕ್ಕಾ ಅಗಿದೆ.

Leave a Comment