Toxic Movie: ಯಶ್ ಸಿನಿಮಾನ ರಿಜೆಕ್ಟ್ ಮಾಡಿದ ಕರೀನಾ? ನಟಿಯ ಶಾಕಿಂಗ್ ನಿರ್ಧಾರಕ್ಕೆ ಕಾರಣ ಇಲ್ಲಿದೆ

Written by Soma Shekar

Published on:

---Join Our Channel---

Toxic Movie: ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಶೀಘ್ರದಲ್ಲೇ ಒಂದು ಸೌತ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿಯಾಗಿತ್ತು. ಅಲ್ಲದೇ ನಟಿಯೂ ಸಹಾ ತಾನು ಯಶ್ (Yash) ಜೊತೆ ನಟಿಸುವ ಆಸೆಯನ್ನ ವ್ಯಕ್ತಪಡಿಸಿದ್ದರು. ಇವೆಲ್ಲವುಗಳ ನಡುವೆಯೇ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನಿಮಾ ಟಾಕ್ಸಿಕ್ ನಲ್ಲಿ ನಟಿಸುವ ಅವಕಾಶ ಕರೀನಾಗೆ ಸಿಕ್ಕಿದೆ ಎಂದು ಸುದ್ದಿಗಳಾಗಿದ್ದವು. ಕರೀನಾ ಕಪೂರ್ ಸಹಾ ತಾನೊಂದು ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನುವ ಸುಳಿವನ್ನು ಸಹಾ ನೀಡಿ ಅಚ್ಚರಿಯನ್ನು ಮೂಡಿಸಿದ್ದರು.

ಆದರೆ ಈಗ ಹೊಸ ವಿಷಯವೊಂದು ಮಾದ್ಯಮವೊಂದರಲ್ಲಿ ಹರಿದಾಡಿದೆ. ಕರೀನಾ ಕಪೂರ್ ಜೊತೆಗೆ ಟಾಕ್ಸಿಕ್ ನಿರ್ಮಾಪಕರ ಮಾತುಕತೆ ಪಾಸಿಟಿವ್ ಫಲಿತಾಂಶ ನೀಡಿಲ್ಲ ಎನ್ನಲಾಗಿದೆ. ನಟಿ ಕರೀನಾ ಕಪೂರ್ ಮತ್ತು ಯಶ್ ಅವರ ಡೇಟ್ಸ್ ಗಳು ಹೊಂದಾಣಿಕೆ ಆಗ್ತಿಲ್ಲ ಎನ್ನಲಾಗಿದೆ. ಇಬ್ಬರ ಡೇಟ್ಸ್ ಮತ್ತು ಶೆಡ್ಯೂಲ್ ಹೊಂದಾಣಿಕೆ ಆಗದ ಕಾರಣ ಕರೀನಾ ಕಪೂರ್ ಪ್ಯಾನ್ ಇಂಡಿಯಾ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.‌

ಟಾಕ್ಸಿಕ್ ನಲ್ಲಿ (Toxic Movie) ಕರೀನಾ ಕಪೂರ್ ಅಭಿನಯಿಸುತ್ತಾರೆ ಎಂದಾಗ ನಾಯಕಿಯಾಗಿ ಅವರು ಮಾಡೋದು ಚೆನ್ನಾಗಿರೋದಿಲ್ಲ. ಯಶ್ ಮತ್ತು ಕರೀನಾ ಜೋಡಿ ಮ್ಯಾಚ್ ಆಗೋದಿಲ್ಲ ಎಂದೆಲ್ಲಾ ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಅಸಮಾಧಾನವನ್ನು ಹೊರ ಹಾಕಿದ್ರು. ಆದರೆ ಅನಂತರ ಕರೀನಾ ನಾಯಕಿಯಲ್ಲ ಬದಲಾಗಿ ಯಶ್ ಅವರ ಸಹೋದರಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಅಪ್ಡೇಟ್ ಗಳು ಹರಿದಾಡಿದ್ದವು.

ಇನ್ನು ಇತ್ತೀಚಿನ ಸುದ್ದಿಗಳ ಪ್ರಕಾರ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಗೆ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನಲಾಗಿದೆ. ‌ಕಿಯಾರಾ ಮಾತ್ರವೇ ಅಲ್ಲ ಸಿನಿಮಾದಲ್ಲಿ ಮತ್ತೊಬ್ಬ ನಾಯಕಿ ಸಹಾ ಇರಲಿದ್ದಾರೆ ಎನ್ನಲಾಗಿದೆ‌. ಗೀತು ಮೋಹನ್ ದಾಸ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಕೆಜಿಎಫ್ ನಂತರ ಯಶ್ ಅವರ ಹೊಸ ಸಿನಿಮಾ ಇದಾಗಿದ್ದು ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

Leave a Comment