Yash : ಮುದ್ದಿನ ಮಕ್ಕಳೊಂದಿಗೆ ಔಟಿಂಗ್ ಮಾಡಿ ಎಂಜಾಯ್ ಮಾಡಿದ ಯಶ್ ರಾಧಿಕಾ ದಂಪತಿ ಪೋಟೋಗಳು

Written by Soma Shekar

Published on:

---Join Our Channel---

Yash : ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ದಂಪತಿ ತಮ್ಮ ಕುಟುಂಬ ಮತ್ತು ತಮ್ಮ ಇಬ್ಬರು ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಯಶ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿದ್ದರೂ ಸಹಾ ಅವರು ತಮ್ಮ ಪತ್ನಿ ಮತ್ತು ಮಕ್ಕಳಿಗೆ ಸಮಯವನ್ನು ನೀಡುತ್ತಾರೆ ಮತ್ತು ಅವರೊಟ್ಟಿಗೆ ಒಂದಷ್ಟು ಸಂತೋಷದ ಸಮಯವನ್ನು ಕಳೆಯುತ್ತಾರೆ.

ಪ್ರತಿಯೊಂದು ಹಬ್ಬ ಮತ್ತು ವಿಶೇಷ ದಿನಗಳನ್ನು ಬಹಳ ಸಂಭ್ರಮ ಮತ್ತು ಖುಷಿಯಿಂದ ಆಚರಿಸುತ್ತಾರೆ ಯಶ್ ಮತ್ತು ರಾಧಿಕಾ ದಂಪತಿ. ಆಗಾಗ ಅವರು ತಮ್ಮ ಮುದ್ದು ಮಕ್ಕಳ ಜೊತೆಗೆ ಔಟಿಂಗ್ ಸಹಾ ಹೋಗಿ ಎಂಜಾಯ್ ಮಾಡುತ್ತಾರೆ.

ಯಶ್ ಮತ್ತು ರಾಧಿಕಾ ಅವರು ತಮ್ಮ ಮಕ್ಕಳು ಆಯ್ರಾ ಮತ್ತು ಯಥರ್ವ್ ಜೊತೆಗೆ ಔಟಿಂಗ್ ಹೋಗಿದ್ದು, ಸುಂದರವಾರದ ಪರಿಸರದಲ್ಲಿ ಒಂದಷ್ಟು ಸಮಯವನ್ನ ಕಳೆದಿದ್ದಾರೆ. ಪ್ರಾಣಿ ಪಕ್ಷಿಗಳ ಜೊತೆಗೆ ಆನಂದದ ಕ್ಷಣಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.‌

ಪ್ರಸ್ತುತ ನಟ ಯಶ್ ಅವರು ತಮ್ಮ ಟಾಕ್ಸಿಕ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ರಾವಣನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ ಎನ್ನುವ ವಿಚಾರವು ಸಹಾ ದೊಡ್ಡ ಸುದ್ದಿಯಾಗಿದೆ.

ಕೆಜಿಎಫ್ 2 ಸಿನಿಮಾ ನಂತರ ಒಂದು ಲಾಂಗ್ ಬ್ರೇಕ್ ನಂತರ ಯಶ್ ಅವರು ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಶ್ ಸಿನಿಮಾ ಯಾವಾಗ ಎಂದು ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ಟಾಕ್ಸಿಕ್ ಘೋಷಣೆ ಒಂದಷ್ಟು ಸಮಾಧಾನವನ್ನು ನೀಡಿದೆ.

ಕುಟುಂಬದೊಂದಿಗೆ ಯಶ್ ಮತ್ತು ರಾಧಿಕಾ ಅವರು ಸಂತೋಷದ ಕ್ಷಣಗಳನ್ನು ಕಳೆದ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದು ಬಂದಿದ್ದು, ಕಾಮೆಂಟ್ ಗಳ ಮೂಲಕ ಸಹಾ ಮೆಚ್ಚುಗೆಗಳನ್ನು ನೀಡಿದ್ದಾರೆ.

Leave a Comment