Ramayan Movie: ರಾಮನ ಪಾತ್ರಕ್ಕೆ ರಣಬೀರ್ ಸಂಭಾವನೆ ಇಷ್ಟೊಂದಾ? ಆದ್ರೆ ಯಶ್ ಗೆ ಯಾಕಿಷ್ಟು ಕಡಿಮೆ ಸಂಭಾವನೆ?

Written by Soma Shekar

Published on:

---Join Our Channel---

Ramayan Movie : ಬಾಲಿವುಡ್ ಸಿನಿಮಾಗಳ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಮಾಯಣ (Ramayan Movie) ಸಿನಿಮಾದ ಚಿತ್ರೀಕರಣ ಆರಂಭವಾಗಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಕೆಲವೇ ದಿನಗಳ ಹಿಂದೆಯಷ್ಟೇ ಶೂಟಿಂಗ್ ಸ್ಪಾಟ್ ನಿಂದ ಲೀಕ್ ಆದ ಫೋಟೋಗಳ ಮೂಲಕ ಎಲ್ಲರಿಗೂ ಗೊತ್ತಾಗಿತ್ತು. ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರವನ್ನು ಬಾಲಿವುಡ್ ನ ಸ್ಟಾರ್ ನಟ ರಣಬೀರ್ ಕಪೂರ್ ಮಾಡ್ತಿರೋ ವಿಚಾರವು ಅಧಿಕೃತವಾಗಿದೆ. ಆದರೆ ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ನಟಿಸುತ್ತಿದ್ದಾರೆ ಎನ್ನುವ ವಿಚಾರ ಮಾತ್ರ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.

ಈಗ ಇವೆಲ್ಲವುಗಳ ನಡುವೆಯೇ ಹೊಸದೊಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ, ಅದ್ದೂರಿಯಾಗಿ ನಿರ್ಮಾಣ ಆಗಲಿರುವ ರಾಮಾಯಣ ಸಿನಿಮಾ ಮೂರು ಭಾಗಗಳಲ್ಲಿ ತೆರೆಗೆ ಬರಲಿದ್ದು, ತಾರಾಗಣ ಸಹಾ ಅದ್ದೂರಿಯಾಗೇ ಇರಲಿದೆ ಎನ್ನಲಾಗಿದ್ದು, ಈಗ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿರುವ ರಣಬೀರ್ ಕಪೂರ್,ಸಾಯಿ ಪಲ್ಲವಿ ಮತ್ತು ಯಶ್ ತಮ್ಮ ಪಾತ್ರಗಳಿಗಾಗಿ ಪಡೆಯುತ್ತಿರುವ ಸಂಭಾವನೆ ವಿಚಾರವೊಂದು ಈಗ ವೈರಲ್ ಆಗ್ತಿದೆ.

ಈಗ ಹೊರ ಬಂದಿರುವ ಸುದ್ದಿಗಳ ಪ್ರಕಾರ ಅನಿಮಲ್ ಸಿನಿಮಾದ ದೊಡ್ಡ ಸಕ್ಸಸ್ ನ ನಂತರ ರಣಬೀರ್ ಕಪೂರ್ (Ranbir Kapoor) ಅವರ ಬೇಡಿಕೆ ಹೆಚ್ಚಿದೆ. ಇದೇ ಹಿನ್ನೆಲೆಯಲ್ಲಿ ನಟನ ಸಂಭಾವನೆ ಮೊತ್ತ ಕೂಡಾ ಹೆಚ್ಚಾಗಿದೆ. ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ಬರೋಬ್ಬರೂ 200 ಕೋಟಿಗಳಿಗೂ ಅಧಿಕ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಇದೇ ಸಿನಿಮಾದಲ್ಲಿ ರಾವಣನ ಪಾತ್ರವನ್ನು ಮಾಡಲಿರುವ ರಾಕಿಂಗ್ ಸ್ಟಾರ್ ಯಶ್ (Yash) ಅವರ ಸಂಭಾವನೆಯ ವಿಚಾರಕ್ಕೆ ಬರುವುದಾದರೆ, ರಾಮಾಯಣ ಸಿನಿಮಾದಲ್ಲಿ ತಮ್ಮ ಪಾತ್ರಕ್ಕಾಗಿ ಯಶ್ ಅವರು 150 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಂದರೆ ಮೂರು ಭಾಗದ ಸಿನಿಮಾ ಅಂದಾಗ ಯಶ್ ಅವರು ಪ್ರತಿ ಭಾಗಕ್ಕೆ 50 ಕೋಟಿ ಪಡೆಯುತ್ತಾರೆ.‌

ಸೀತೆಯ ಪಾತ್ರವನ್ನು ಮಾಡಲಿರುವ ನಟಿ ಸಾಯಿ ಪಲ್ಲವಿ (Sai Pallavi) ದಕ್ಷಿಣದಲ್ಲಿ ಸಿನಿಮಾವೊಂದಕ್ಕೆ ಎರಡರಿಂದ ಮೂರು ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುತ್ತಾರೆ.. ಇದೇ ಮೊದಲ ಬಾರಿಗೆ ರಾಮಾಯಣ ಸಿನಿಮಾಕ್ಕಾಗಿ ಸಾಯಿ ಪಲ್ಲವಿ 10 ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಗಳು ಅಧಿಕೃತವಾಗಿ ಹೊರ ಬಂದರೆ ಎಲ್ಲರ ಅನುಮಾನ ಪರಿಹಾರ ಆಗಲಿದೆ.

Leave a Comment