Trisha: ನಯನತಾರಾ ದಾಖಲೆ ಧೂಳೀ ಪಟ ಮಾಡಿ, ನವ ಯುವ ನಟಿಯರನ್ನ ಬೆಚ್ಚಿ ಬೀಳಿಸಿದ ತ್ರಿಶಾ ಬರೆದರು ಹೊಸ ಇತಿಹಾಸ

Written by Soma Shekar

Published on:

---Join Our Channel---

Trisha: ದಕ್ಷಿಣ ಸಿನಿಮಾ ರಂಗದಲ್ಲಿ ಯುವ ನಟಿಯರಿಗಿಂತ ಸೀನಿಯರ್ ನಟಿಯರ ನಡುವೆಯೇ ಪೈಪೋಟೀ ಜೋರಾಗಿದೆ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಹೌದು, ದಕ್ಷಿಣದ ಇಬ್ಬರು ಸೀನಿಯರ್ ಮತ್ತು ಸ್ಟಾರ್ ನಟಿಯರಾದ ತ್ರಿಶಾ ಕೃಷ್ಣನ್ (Trisha Krishnan) ಮತ್ತು ನಯನತಾರ (Nayanthara) ನಡುವೆ ದೊಡ್ಡ ಸ್ಪರ್ಧೆಯೇ ನಡೆದಿದೆಯಾ ಎನ್ನುವ ಹಾಗೆ ಸಿನಿಮಾಗಳಲ್ಲಿ ಈ ಇಬ್ಬರು ನಟಿಯರು ಇಂದಿನ ಎಲ್ಲಾ ನವ, ಯುವ ನಟಿಯರನ್ನು ಹಿಂದೆ ಹಾಕಿ ಬೇಡಿಕೆಯನ್ನು ಪಡೆದುಕೊಂಡು ಸ್ಟಾರ್ ಗಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಪೊನ್ನಿಯನ್ ಸೆಲ್ವನ್ (Ponnina Selvan) ಸಿನಿಮಾದ ನಂತರ ತ್ರಿಶಾ ಬೇಡಿಕೆ ಹೆಚ್ಚಿದೆ. ದಳಪತಿ ವಿಜಯ್ ಜೊತೆಗೆ ಲಿಯೋ ಸಿನಿಮಾ ಮಾಡಿದ ನಂತರ ಇದೀಗ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ವಿಶ್ವಂಭರ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ ತ್ರಿಶಾ (Trisha). ವಿಷಯ ಇಷ್ಟಕ್ಕೆ ಮುಗಿದಿಲ್ಲ, ಈಗ ಸಂಭಾವನೆ ವಿಚಾರದಲ್ಲಿಯೂ ನಯನತಾರಾ ನ ಹಿಂದಿಕ್ಕುವ ಮೂಲಕ ಹೊಸದೊಂದು ದಾಖಲೆಯನ್ನು ಮಾಡಿದ್ದಾರೆ ತ್ರಿಶಾ.

ದಕ್ಷಿಣ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ ಎನ್ನಲಾಗಿತ್ತು. ನಟಿ ಸಿನಿಮಾವೊಂದಕ್ಕೆ ಹತ್ತು ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವುದು ಸುದ್ದಿ. ಆದರೆ ತ್ರಿಶಾ ಅವರು ಲಿಯೋ ಸಿನಿಮಾಕ್ಕೆ ಹತ್ತು ಕೋಟಿ ಸಂಭಾವನೆ ಪಡೆಯುವ ಮೂಲಕ ತಾನು ಕೂಡಾ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಸುದ್ದಿ ಮಾಡಿದರು.

ಆದರೆ ಈಗ ತ್ರಿಶಾ ಇನ್ನೊಂದು ಹೆಜ್ಜೆ ಮುಂದೆ ಇಟ್ಟು ತನ್ನದೇ ದಾಖಲೆಯನ್ನು ಮುರಿದು, ನಯನತಾರಾನ ಕೂಡಾ ಹಿಂದಿಕ್ಕಿದ್ದಾರೆ. ಹೌದು, ತ್ರಿಶಾ ತಮ್ಮ ಮುಂದಿನ ಸಿನಿಮಾ ಕಮಲ ಹಾಸನ್ ಜೊತೆಗಿನ ಥಗ್ ಲೈಫ್ ನಲ್ಲಿ (Thug Life) ನಟಿಸೋದಕ್ಕೆ ಬರೋಬ್ಬರಿ ಹನ್ನೆರಡು ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುವ ಮೂಲಕ ಸೌತ್ ಸಿನಿಮಾಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾಗಿ ಹೊಸ ದಾಖಲೆಯನ್ನು ಮಾಡಿದ್ದಾರೆ.

ದಕ್ಷಿಣ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ (Rashmika) ಸಂಭಾವನೆ ಮೂರು ಕೋಟಿ, ಸಮಂತಾ (Samantha) ಸಂಭಾವನೆ ಆರು ಕೋಟಿ ಆದರೆ ಸೀನಿಯರ್ ನಟಿಯಾಗಿರುವ ತ್ರಿಶಾ ಇವರೆಲ್ಲರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆಯೋ ಮೂಲಕ ತನ್ನ ಬೇಡಿಕೆಯೇನು ಎನ್ನುವುದನ್ನು ಸಾಬೀತು ಮಾಡುವ ಮೂಲಕ ತಾನೊಬ್ಬ ಯಶಸ್ವಿ ನಟಿ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

Leave a Comment