Sai Pallavi: ಸಾಯಿ ಪಲ್ಲವಿ ಸೀತೆ ಆದ್ರೆ ನಾವು ಸಿನಿಮಾ ನೋಡಲ್ಲ; ನೆಟ್ಟಿಗರ ಸಿಟ್ಟು, ಆರಂಭದಲ್ಲೇ ನಟಿಗೆ ಕಾಡಿದ ಆತಂಕ

Written by Soma Shekar

Published on:

---Join Our Channel---

Sai Pallavi: ನಿತೇಶ್ ತಿವಾರಿ (Nitesh Tiwari) ನಿರ್ದೇಶನದಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ರಾಮಾಯಣ (Ramayana) ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಅಲ್ಲದೇ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಒಂದಷ್ಟು ಫೋಟೋಗಳು ಈಗಾಗಲೇ ಶೂಟಿಂಗ್ ಸೆಟ್ ನಿಂದ ಲೀಕ್ ಆಗಿ ವೈರಲ್ ಆಗಿವೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ (Sai Pallavi) ಸೀತಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಂದು ಸುದ್ದಿಗಳಾಗಿತ್ತು, ಆದರೆ ಅಧಿಕೃತವಾದ ಘೋಷಣೆ ಆಗಿರಲಿಲ್ಲ. ಈ ಸುದ್ದಿಯ ಸತ್ಯಾಸತ್ಯತೆ ಏನೆಂದು ಎಲ್ಲರೂ ಆಲೋಚಿಸುವಾಗಲೇ ಹೊಸ ಫೋಟೋಗಳು ವೈರಲ್ ಆಗಿದೆ.

ಹೊಸ ಫೋಟೋಗಳಲ್ಲಿ ರಣಬೀರ್ (Ranbir Kapoor) ಮತ್ತು ಸಾಯಿ ಪಲ್ಲವಿ ರಾಮ ಸೀತೆ ಗೆಟಪ್ ನಲ್ಲಿ ಇರುವುದು ಕಂಡಿದೆ. ಫೋಟೋ ವೈರಲ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ನಟಿಯ ಅಭಿಮಾನಿಗಳು ಸೀತಾ ಪಾತ್ರಕ್ಕೆ ಸಾಯಿ ಪಲ್ಲವಿ ಸರಿಯಾದ ಆಯ್ಕೆ ಎಂದು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.

ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇದಕ್ಕೆ ವಿರೋಧವನ್ನು ಸಹಾ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾಯಿ ಪಲ್ಲವಿ ಈ ಹಿಂದೆ ಕಾಶ್ಮೀರಿ ಫೈಲ್ಸ್ (The Kashmir Files) ಬಗ್ಗೆ ಮಾತನಾಡಿದ್ದ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ನಟಿ ಈ ಹಿಂದೆ ಮಾತನಾಡುತ್ತಾ, ನಾನು ತಟಸ್ಥ ವಾತಾವರಣದಲ್ಲಿ ಬೆಳೆದಿದ್ದೇನೆ. ನಾನು ಎಡ ಪಂಥೀಯ ಮತ್ತು ಬಲಪಂಥೀಯರ ಬಗ್ಗೆ ಕೇಳಿದ್ದೇನೆ.

ಆದ್ರೆ ಇಲ್ಲಿ ಯಾರು ಸರಿ, ಯಾರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಕಾಶ್ಮೀರಿ ಪಂಡಿತರನ್ನು ಹೇಗೆಲ್ಲಾ ಹತ್ಯೆ ಮಾಡಿದರು ಅನ್ನೋದನ್ನು ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ತೋರಿಸಿದ್ದಾರೆ. ಕೆಲವು ದಿನಗಳ ಹಿಂದೆ ಮುಸ್ಲಿಂ ವ್ಯಕ್ತಿಯೊಬ್ಬ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದಾನೆಂದು ಅವನನ್ನು ಹತ್ಯೆ ಮಾಡಲಾಗಿತ್ತು. ಅವನನ್ನು ಕೊಂದ ನಂತರ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ರು.

ಈ ಎರಡನ್ನು ನೋಡಿದಾಗ ಕಾಶ್ಮೀರಕ್ಕೂ ಮತ್ತು ಇಲ್ಲಿ ನಡೆದ ಘಟನೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂಬುದಾಗಿ ಹೇಳಿದ್ದರು. ಆಗ ಸಾಯಿ ಪಲ್ಲವಿ ಆಡಿದ ಮಾತಿಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಈಗ ಅದೇ ವೀಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈಗ ಮತ್ತೊಮ್ಮೆ ನೆಟ್ಟಿಗರು ಸಾಯಿ ಪಲ್ಲವಿ ಸೀತೆಯಾಗಿ ನಟಿಸುವ ಸಿನಿಮಾವನ್ನು ನಾವು ನೋಡಿದಿಲ್ಲ ಎಂದು ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆಯಲ್ಲೇ ಹೀಗೆ ವಿರೋಧ ವ್ಯಕ್ತವಾಗುತ್ತಿರುವುದು ಅಚ್ಚರಿಯನ್ನು ಮೂಡಿಸಿದೆ.‌

Leave a Comment