Actor Yash: ರಣಬೀರ್ ಅಲ್ಲ, ರಾಮಾಯಣದ ಅಸಲಿ ನಾಯಕ ಯಶ್; ಮೌನ ಮುರಿದು ಬಾಲಿವುಡ್ ಗೆ ಶಾಕ್ ಕೊಟ್ಟ ಯಶ್

Written by Soma Shekar

Published on:

---Join Our Channel---

Actor Yash : ಬಾಲಿವುಡ್ ನಲ್ಲಿ ನಿರ್ಮಾಣ ಆಗ್ತಿರೋ ರಾಮಾಯಣ (Ramayana) ಸಿನಿಮಾದ ಕುರಿತಾಗಿ ಪ್ರತಿದಿನವೂ ಸಹಾ ಒಂದಲ್ಲಾ ಒಂದು ಸುದ್ದಿಯಾಗುತ್ತಲೇ ಇದೆ. ಈ ಸಿನಿಮಾದಲ್ಲಿ ನಟ ಯಶ್ (Actor Yash) ರಾವಣನ ಪಾತ್ರ ಮಾಡ್ತಾರೆ ಅಂತ, ಅವರು ಈ ಸಿನಿಮಾದ ನಿರ್ಮಾಪಕ ಆಗಿದ್ದಾರೆ ಅಂತೆಲ್ಲಾ ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ ಈ ಕುರಿತಾಗಿ ಸ್ಟಾರ್ ನಟ ಯಶ್ ಅವರು ಮಾತ್ರ ಯಾವುದೇ ವಿಚಾರವನ್ನು ಮಾತನಾಡಿರಲಿಲ್ಲವಾದ್ದರಿಂದ ಹರಡಿರುವ ಸುದ್ದಿಗಳಲ್ಲಿ ನಿಜ ಎಷ್ಟಿದೆ ಎನ್ನುವುದು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಈಗ ಈ ವಿಷಯಕ್ಕೆ ಸ್ಪಷ್ಟನೆ ಸಿಕ್ಕಿದೆ. ನಟ ಯಶ್ ಅವರು ರಾಮಾಯಣದ ಬಗ್ಗೆ ಮಾತನಾಡಿದ್ದಾರೆ.

ಅಂತರರಾಷ್ಟ್ರೀಯ ಪತ್ರಿಕೆಯೊಂದರ ಜೊತೆಗೆ ಮಾತನಾಡಿರುವ ಯಶ್ ಅವರು ಮೊದಲ ಬಾರಿಗೆ ರಾಮಾಯಣ ಸಿನಿಮಾದ ಕುರಿತಾಗಿ ಮಾತನಾಡಿದ್ದಾರೆ. ಭಾರತೀಯ ಸಿನಿಮಾವನ್ನು (Indian Cinema) ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಮಾಡೋದು ನನ್ನ ಬಹುದಿನಗಳ ಕನಸಾಗಿದ್ದು, ಅದರ ಹುಡುಕಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ವನ್ನು ಕಂಡುಕೊಂಡಿದ್ದೇನೆ. ಅದರ ಹಿಂದಿನ ಒಬ್ಬ ಭಾರತೀಯ ಪ್ರೇರಕ ಶಕ್ತಿಯಾಗಿದ್ದಾರೆ. ನಾವು ಸಿನಿಮಾ ವಿಚಾರವಾಗಿ ಚರ್ಚೆ ಮಾಡುವಾಗ ರಾಮಾಯಣ ವಿಷಯವು ಬಂದಿತ್ತು.

ರಾಮಾಯಣ ಸಿನಿಮಾ ನಮ್ಮ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಆಗಿದ್ದ, ಈ ಮಹಾಕಾವ್ಯ ಈಗ ಸಿನಿಮಾದ ರೂಪವನ್ನು ಪಡೆದುಕೊಳ್ಳುತ್ತಿದೆ. ನಾವು ಜಗತ್ತಿಗೆ ಆ ಅತ್ಯುತ್ತಮ ಅನುಭವವನ್ನು ನೀಡೋದಕ್ಕೆ ಕಾತರರಾಗಿದ್ದೇವೆ ಎನ್ನುವ ಮಾತುಗಳನ್ನು ಹೇಳಿದ್ದಾರೆ ಯಶ್. ಮತ್ತೊಂದು ವಿಶೇಷ ಏನೆಂದರೆ ಈ ರಾಮಾಯಣ ಸಿನಿಮಾವನ್ನು ರಾವಣನ ದೃಷ್ಟಿಕೋನದಲ್ಲಿ ಹೆಣೆಯಲಾಗುತ್ತಿದ್ದು, ಸಿನಿಮಾದ ನಿಜವಾದ ಹೀರೋ ಯಶ್ ಆಗಲಿದ್ದಾರೆ.

ರಾಮಾಯಣ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಈ ಸಿನಿಮಾದ ನಿರ್ಮಾಣಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಅವರು ನಮಿತ್ ಮಲ್ಹೋತ್ರಾ (Namtih Malhotra) ಜೊತೆಗೆ ಕೈಜೋಡಿಸಿದ್ದಾರೆ. ದಂಗಲ್ ಸಿನಿಮಾ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಈ ಸಿನಿಮಾವನ್ನು ಅದ್ದೂರಿಯಾಗಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನವನ್ನು ಮಾಡುತ್ತಿದ್ದು, ಸಿನಿಮಾದಲ್ಲಿ ದೊಡ್ಡ ಸ್ಟಾರ್ ಗಳ ದಂಡೇ ಇರಲಿದೆ ಎನ್ನುವುದು ವಿಶೇಷವಾಗಿದೆ.

Leave a Comment