Actor Yash: ರಾಮಾಯಣ (Ramayana) ಬಾಲಿವುಡ್ ನಲ್ಲಿ (Bollywood) ನಿರ್ಮಾಣ ಆಗ್ತಿರೋ ಭಾರೀ ಬಜೆಟ್ ಸಿನಿಮಾ ಆಗಿದೆ. ಬಹುಕೋಟಿ ವೆಚ್ಚದಲ್ಲಿ, ಅದ್ದೂರಿ ತಾರಾಗಣದೊಂದಿಗೆ ನಿರ್ಮಾಣ ಆಗ್ತಿರೋ ಈ ಸಿನಿಮಾವನ್ನು ದಂಗಲ್ ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನವನ್ನು ಮಾಡ್ತಿದ್ದಾರೆ. ಈ ಸಿನಿಮಾ ಘೋಷಣೆ ಆದ ನಂತರ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor) ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ (Actor Yash) ರಾವಣನಾಗಿ ನಟಿಸಲಿದ್ದಾರೆ ಅಂತ ಸಾಕಷ್ಟು ಸುದ್ದಿಗಳಾಗಿದೆ. ಯಶ್ ತಮ್ಮ ಪಾತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆನ್ನುವ ಸುದ್ದಿಗಳು ಸಹಾ ವೈರಲ್ ಆಗಿದ್ದವು.
ಆದರೆ ಈಗ ಹೊಸ ಅಪ್ಡೇಟ್ ಗಳ ಪ್ರಕಾರ ನಟ ಯಶ್ ಅವರು ರಾವಣನ ಪಾತ್ರವನ್ನು ತಿರಸ್ಕರಿಸಿದ್ದಾರೆ ಎನ್ನುವ ಸುದ್ದಿಯೊಂದು ಎಲ್ಲರಿಗೂ ಸಹಾ ಅಚ್ಚರಿಯನ್ನು ಮೂಡಿಸಿದೆ. ಇದೇ ವೇಳೆ ಯಶ್ ಅವರು ಹೊಸ ನಿರ್ಧಾರವೊಂದನ್ನು ಸಹಾ ಮಾಡಿದ್ದಾರೆ ಎನ್ನುವುದು ವಿಶೇಷವಾಗಿದೆ. ಹೌದು, ರಾಕೀ ಬಾಯ್ ರಾಮಾಯಣ ಸಿನಿಮಾಕ್ಕೆ ನಟನಾಗಿ ಅಲ್ಲ, ನಿರ್ಮಾಪಕನಾಗಲು ಮುಂದಾಗಿದ್ದಾರೆ ಎನ್ನುವುದು ಎಲ್ಲರ ಗಮನವನ್ನು ಸೆಳೆದಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ಈಗ ರಾಮಾಯಣ ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರಾ (Namith Malhotra) ಜೊತೆಗೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಸಿನಿಮಾ ನಿರ್ಮಾಣದ ಕುರಿತಾಗಿ ಮಾತನಾಡಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ರಾಮಾಯಣದಂತಹ ಅದ್ಭುತವಾದ ಕಥೆಗೆ ನ್ಯಾಯವನ್ನು ಒದಗಿಸಲು ನಾನು ಸಿದ್ಧವಾಗಿದ್ದೇನೆ. ನಮ್ಮ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸಬೇಕಾಗಿದೆ.
ಯಶ್ ಸಹಾ ನನ್ನ ಹಾಗೇ ಆಲೋಚನೆಯನ್ನು ಮಾಡಿದ್ದಾರೆ. ಅವರ ಪಯಣದಿಂದ ನಾನು ಸ್ಪೂರ್ತಿಯನ್ನು ಪಡೆದಿದ್ದೇನೆ. ಯಶ್ ಅವರಲ್ಲಿ ಇರುವಂತಹ ಯೋಜನೆಯನ್ನು ನಾನು ಅರಿತುಕೊಂಡಿದ್ದೇನೆ ಹಾಗೂ ರಾಮಾಯಣ ದೃಶ್ಯ ಕಾವ್ಯವನ್ನು ತೆರೆಗೆ ತರಲು ಸಿದ್ಧತೆಗಳನ್ನು ನಡೆಸಿದ್ದೇವೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ರಾಮಾಯಣ ಸಿನಿಮಾದ ಕುರಿತಾಗಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಮೂಡಿವೆ.