Film Actor: ಸ್ಟಾರ್ ನಟಿಯರ ಜೊತೆ ಅಫೇರ್, ಹೆಂಡತಿ ದೂರ; ಲವ್ ಬಾಯ್ ಆಗಿದ್ದ ಸ್ಟಾರ್ ಈಗ ಒಬ್ಬಂಟಿ

Written by Soma Shekar

Published on:

---Join Our Channel---

Film Actor: ಸಿನಿಮಾ ಜಗತ್ತಿನಲ್ಲಿ ಒಂದು ಸ್ಥಾನವನ್ನು ಪಡೆಯೋದು, ಸ್ಟಾರ್ ನಟನಾಗೋದು (Film actor), ಸಿನಿಮಾ ರಂಗದಲ್ಲೊಂದು ನೆಲೆಯನ್ನು ಕಂಡುಕೊಳ್ಳೋದು ಬಹಳ ಕಷ್ಟವಾದ ವಿಚಾರವಾಗಿರುತ್ತೆ. ಕೆಲವು ಸ್ಟಾರ್ ಕಿಡ್ ಗಳೇ ಅವಕಾಶ ಸಿಕ್ಕಿದ್ರು ತಮ್ಮನ್ನ ತಾವು ಸ್ಟಾರ್ ಗಳಾಗಿ ಮಾಡಿಕೊಳ್ಳೋದು ಸಾಧ್ಯವಾಗಿಲ್ಲ ಅಂದಾಗ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಎಂಟ್ರಿ ಕೊಡೋರಿಗಂತೂ ಸಿನಿಮಾ ವರ್ಲ್ಡ್ ನಲ್ಲಿ ಸಕ್ಸಸ್ ಪಡೆಯೋದು ದೊಡ್ಡ ಸಾಧನೆ ಅಂತಾನೇ ಹೇಳಿದ್ರೆ ಅದು ಖಂಡಿತ ತಪ್ಪಾಗೋದೇ ಇಲ್ಲ.

ಇನ್ನೂ ಕೆಲವರಿಗೆ ಅದೃಷ್ಟ ಹೇಗಿರುತ್ತೆ ಅಂದರೆ ಮಾಡಿದ ಮೊದಲ ಸಿನಿಮಾದ ಸಕ್ಸಸ್ ನಿಂದಲೇ ರಾತ್ರೋರಾತ್ರಿ ಸ್ಟಾರ್ ಗಳಾಗಿ ಬಿಡ್ತಾರೆ. ಆದರೆ ಅನಂತರ ಅವರು ಹೆಚ್ಚು ಸಿನಿಮಾಗಳಲ್ಲಿ ಫ್ಲಾಪ್ ಆದ್ರೂ, ಕಡಿಮೆ ಸಿನಿಮಾಗಳನ್ನ ಮಾಡಿದ್ರು ಕೂಡಾ ಅವರ ಮೊದಲ ಸೂಪರ್ ಹಿಟ್ ಸಿನಿಮಾದಿಂದಲೇ ಗುರ್ತಿಸಲ್ಪಡ್ತಾರೆ. ಅಂತಹ ನಟರಲ್ಲಿ ಬಾಲಿವುಡ್ ನಟ ರಾಹುಲ್ ರಾಯ್ ಕೂಡಾ ಒಬ್ಬರು. ರಾಹುಲ್ ರಾಯ್ (Rahul Roy) ಆಶಿಕಿ (Aashiqui) ಸಿನಿಮಾದ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ನಟ.

ರಾಹುಲ್ ರಾಯ್ ಆಶಿಕಿ ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ಸಹಾ ಅವರಿಗೆ ಆಶಿಕಿ ಸಿನಿಮಾದ ಮೂಲಕ ಸಿಕ್ಕಂತಹ ಗೆಲುವು, ಕೀರ್ತಿ ಬೇರಾವ ಸಿನಿಮಾದಿಂದಲೂ ಸಿಗಲೇ ಇಲ್ಲ. ಇನ್ನು ಈ ನಟ ತಮ್ಮ ಸಿನಿಮಾ ಗಳಿಗಿಂತ ಹೆಚ್ಚು ಸುದ್ದಿಯಾಗಿದ್ದು ಮಾತ್ರ ತಮ್ಮ ವೈಯಕ್ತಿಕ ಜೀವನದಿಂದ ಅನ್ನೋದು ಕೂಡಾ ವಾಸ್ತವ. ಈ ನಟನ ಹೆಸರು ಒಂದಷ್ಟು ಜನ ನಟಿಯರ ಜೊತೆಗೆ ತಳಕು ಹಾಕಿಕೊಂಡು, ಸಾಕಷ್ಟು ಸುದ್ದಿಗಳಲ್ಲಿ ಈ ವಿಚಾರ ಹರಿದಾಡಿತ್ತು.

ಅದರಲ್ಲೂ ಮಹೇಶ್ ಭಟ್ ಪುತ್ರಿ ಪೂಜಾ ಭಟ್ (Pooja Bhat) ಜೊತೆ ಸಾಲು ಸಾಲು ಸಿನಿಮಾ ನಟಿಸಿದ್ದರಿಂದ ಪೂಜಾ ಜೊತೆ ರಾಹುಲ್ ಹೆಸರು ಹೆಚ್ಚು ಹರಿದಾಡಿತ್ತು. ನಂತರ ಬಾಲಿವುಡ್ ನ ಸ್ಟಾರ್ ನಟಿ ಮನೀಷಾ ಕೊಯಿರಾಲಾ ಜೊತೆಗೆ ನಟನ ಹೆಸರು ಕೇಳಿ ಬಂತು‌. ಇದಾದ ನಂತರ ನಟಿ, ಮಾಡೆಲ್ ಸುಮನ್ ರಂಗನಾಥನ್ (Suman Ranganathan) ಜೊತೆ ಸಹಾ ನಟ ಒಂದಷ್ಟು ಸಮಯ ಒಂದೇ ಫ್ಲಾಟ್ ನಲ್ಲಿ ಇದ್ದರು. ಆದರೆ ಅನಂತರ ಇಬ್ಬರೂ ದೂರ ದೂರವಾದರು.

ಕೊನೆಗೆ ರಾಜಲಕ್ಷ್ಮಿ ಖಾನ್ಸಿಲ್ಕರ್ ಜೊತೆಗೆ ಪ್ರೀತಿಯಲ್ಲಿ ಬಿದ್ದ ನಟ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಆದರೆ ಈ ಮದುವೆ ಕೂಡಾ ಹೆಚ್ಚು ದಿನ ಉಳಿಯಲಿಲ್ಲ. ಪತಿ, ಪತ್ನಿ ದೂರಾದರು. ಸದ್ಯಕ್ಕೆ ರಾಹುಲ್ ರಾಯ್ ಅವರು ಒಂಟಿಯಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಹೀಗೆ ತೆರೆಯ ಮೇಲೆ ಒಂದು ಪ್ರೇಮಕಥೆಯಿಂದಲೇ ಜನಪ್ರಿಯತೆ ಪಡೆದ ನಟನ ರಿಯಲ್ ಲೈಫ್ ನಲ್ಲಿ ಮಾತ್ರ ಪ್ರೇಮ ಅನ್ನೋದು ದೀರ್ಘ ಕಾಲ ಉಳೀಲೇ ಇಲ್ಲ.

Leave a Comment