Vijay Devarakonda: ಫೋಟೋ ಲೀಕ್, ವೀಡಿಯೋ ಲೀಕ್ ಒಟ್ನಲ್ಲಿ ಈ ʼಲೀಕ್ʼ ಅನ್ನೋದು ಸಿನಿಮಾ ರಂಗ, ರಾಜಕೀಯ ರಂಗಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಸಿನಿಮಾ ರಂಗಕ್ಕೆ ಇದು ಹುಟ್ಟು ಹಾಕುತ್ತಿರವ ಸಮಸ್ಯೆಗಳು ಒಂದು ಎರಡಲ್ಲ. ಇಂತಹ ಲೀಕ್ ನಿಂದಾಗಿ ದೊಡ್ಡ ದೊಡ್ಡ ಸ್ಟಾರ್ ಗಳು ಸಹಾ ಟ್ರೋಲ್ ಆಗೋಕೆ ಶುರುವಾಗಿದೆ. ಎಲ್ಲಿಂದಲೋ ಹೇಗೋ ಫೋಟೋಗಳು ಲೀಕ್ ಆಗಿ ಸ್ಟಾರ್ ಗಳು ಮುಜುಗರ ಪಡುವ ಹಾಗೆ ಆಗಿದೆ.
ಇಂತದ್ದೇ ಒಂದು ಸಮಸ್ಯೆ ಈಗ ನಟ ವಿಜಯ ದೇವರಕೊಂಡಗೂ (Vijaya Devarakonda) ಎದುರಾಗಿದೆ. ಇತ್ತೀಚಿಗೆ ನಟ ವಿಜಯ್ ದೇವರಕೊಂಡ ಅವರ ಫೋಟೋ ಒಂದು ಲೀಕ್ ಆಗಿದೆ. ಅದರಲ್ಲಿ ನಟ ಮತ್ತು ಒಬ್ಭ ಹುಡುಗಿ ರೂಮ್ ನಲ್ಲಿರುವುದು ಕಂಡಿದೆ. ಈ ಫೋಟೋ ನೋಡಿ ಬಹಳಷ್ಟು ಜನ ಯಾರು ಆ ಹುಡುಗಿ? ಎಂದು ಪ್ರಶ್ನೆ ಮಾಡುವ ಜೊತೆಗೆ ಎಲ್ಲೆಡೆ ದೊಡ್ಡ ಚರ್ಚೆಗೆ ಇದು ಕಾರಣವಾಗಿದೆ.
ನಟ ವಿಜಯ ದೇವರಕೊಂಡ ಅವರಿಗೆ ಇತ್ತೀಚಿನ ದಿನಗಳಲ್ಲಿ ಯಾವುದೇ ಹೇಳಿಕೊಳ್ಳುವಂತಜ ಹಿಟ್ ಸಿನಿಮಾ ಸಿಕ್ಕಿಲ್ಲ. ಇದೇ ವೇಳೆ ಕಲ್ಕಿ (Kalki 2898 AD) ಸಿನಿಮಾದಲ್ಲಿ ಅರ್ಜುನನ ಪಾತ್ರ ಮಾಡಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದರು. ಪ್ರಸ್ತುತ ನಟ ಒಂದು ಸೂಪರ್ ಹಿಟ್ ಸಿನಿಮಾದ ನಿರೀಕ್ಷೆಯಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ವೈರಲ್ ಫೋಟೋ ಸಾಕಷ್ಟು ಗೊಂದಲವನ್ನು ಉಂಟು ಮಾಡಿದೆ.
ಪ್ರಸ್ತುತ ವಿಜಯ ದೇವರಕೊಂಡ ರೌಡಿ ಬೇಬಿ ಮತ್ತು ಜೆರ್ಸಿ ಸಿನಿಮಾಗಳ ನಿರ್ದೇಶಕ ಗೌತಮ್ ತಿನ್ನನೂರಿ ಜೊತೆಗೆ ಹೊಸ ಸಿನಿಮಾ ಮಾಡುತ್ತಿದ್ದು ಸಿನಿಮಾ ಚಿತ್ರೀಕರಣ ಸಹಾ ಭರದಿಂದ ಸಾಗುತ್ತಿದೆ.. ಅದೇ ಸಿನಿಮಾದ ಚಿತ್ರೀಕರಣದ ಒಂದು ಫೋಟೋ ಈಗ ವೈರಲ್ ಆಗಿದೆ ಎನ್ನಲಾಗಿದ್ದು, ನಿರ್ಮಾಪಕರು ಈ ವಿಚಾರ ತಿಳಿದು ಆತಂಕ ಪಡುವಂತಾಗಿದೆ.
ಇದೇ ವೇಳೆ ನಟ ವಿಜಯ ದೇವರಕೊಂಡ ಅವರು ಸಹಾ ಲೀಕ್ ಆ ಫೋಟೋವನ್ನು ಎಲ್ಲೂ ಸಹಾ ಶೇರ್ ಮಾಡಬೇಡಿ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅಭಿಮಾನಿಗಳು ಮತ್ತು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈಗ ಅನೇಕರಿಗೆ ಅದು ನಟನ ಖಾಸಗಿ ಫೋಟೋ ಅಲ್ಲ ಬದಲಾಗಿ ಮುಂದಿನ ಸಿನಿಮಾದ್ದು ಅನ್ನೋದು ಸ್ಪಷ್ಟವಾಗಿದೆ.
Yash Toxic: ಯಶ್ ಟಾಕ್ಸಿಕ್ ಸಿನಿಮಾಕ್ಕೆ ಎದುರಾಯ್ತು ಕಾನೂನಿನ ಸಂಕಷ್ಟ, ದಾಖಲಾಯ್ತು ದೂರು