Actor Yash: ಬಾಲಿವುಡ್ ನ ಪ್ರತಿಷ್ಠಿತ ಸಿನಿಮಾದ ಸೀಕ್ವೆಲ್; ಯಶ್, ಅಲ್ಲು ಅರ್ಜುನ್ ಯಾರಾಗ್ತಾರೆ ಹೀರೋ ?

Written by Soma Shekar

Published on:

---Join Our Channel---

Actor Yash : ಕೆಜಿಎಫ್ (KGF) ಸರಣಿ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ (Actor Yash) ಅವರ ಬೇಡಿಕೆ, ಜನಪ್ರಿಯತೆ ಮತ್ತು ಸ್ಟಾರ್ ಡಂ ಎಲ್ಲವೂ ಹೆಚ್ಚಿದೆ. ಬಾಲಿವುಡ್ ನಿಂದ ಸಾಕಷ್ಟು ಆಫರ್ ಗಳು ಅವರನ್ನು ಹುಡುಕಿ ಬರುತ್ತಿವೆ. ಯಶ್ ಈಗಾಗಲೇ ರಾಮಾಯಣ ಸಿನಿಮಾದಲ್ಲಿ ನಟಿಸ್ತಾರೆ, ಸಿನಿಮಾ ನಿರ್ಮಾಣದಲ್ಲೂ ಸಹಾ ತೊಡಗಿಸಿಕೊಂಡಿದ್ದಾರೆ ಎಂದು ಸುದ್ದಿಗಳಾಗಿದೆ.‌ ಈಗ ಅದರ ಬೆನ್ನಲ್ಲೇ ಬಾಲಿವುಡ್ ನಿಂದ ಮತ್ತೊಂದು ಹೊಸ ಆಫರ್ ಯಶ್ ಅವರನ್ನು ಅರಸಿ ಬಂದಿದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಯಶ್ ಅವರನ್ನು ಹುಡುಕಿ ಬಂದಿರುವ ಈ ಹೊಸ ಅವಕಾಶಕ್ಕೆ ನಟ ಗ್ರೀನ್ ಸಿಗ್ನಲ್ ಕೊಡ್ತಾರೋ ಇಲ್ವೋ ಅನ್ನೋದಂತೂ ಸದ್ಯಕ್ಕೆ ಕುತೂಹಲವನ್ನು ಮೂಡಿಸಿದೆ. ಅಭಿಮಾನಿಗಳು ಸಹಾ ನಟನ ನಿರ್ಧಾರ ತಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್ ನಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕೀಶ್ರಾಫ್ ನಟಿಸಿ, ಸುಭಾಷ್ ಘಾಯ್ ನಿರ್ದೇಶನ ಮಾಡಿದ್ದ ಖಳ್ ನಾಯಕ್ (Khalnayak) ಸಿನಿಮಾ ತೊಂಬತ್ತರ ದಶಕದಲ್ಲಿ ದೊಡ್ಡ ಸದ್ದನ್ನು ಮಾಡಿದ್ದ ಸಿನಿಮಾ ಆಗಿತ್ತು.

ಈಗ ಆ ಸಿನಿಮಾದ ಸೀಕ್ವೆಲ್ ಅನ್ನು ಮಾಡೋದಕ್ಕೆ ಆಲೋಚನೆಯನ್ನು ಮಾಡಲಾಗಿದ್ದು, ಹೊಸ ಪಾತ್ರವರ್ಗದೊಂದಿಗೆ ಸಿನಿಮಾ ಮಾಡಲು ನಿರ್ಧರಿಸಿದ್ದರು, ಸಿನಿಮಾದ ಸ್ಕ್ರಿಪ್ಟ್ ಕೂಡಾ ಫೈನಲ್ ಆಗಿದೆ. ಬರೋಬ್ಬರಿ 31 ವರ್ಷಗಳ ನಂತರ ಖಳ್ ನಾಯಕ್ ಸಿನಿಮಾದ ಸೀಕ್ವೆಲ್ ಎನ್ನುವ ಸುದ್ದಿ ಕೇಳಿ ಸಿನಿ ಪ್ರೇಮಿಗಳು ಸಹಾ ಸಾಕಷ್ಟು ಉತ್ಸುಕರಾಗಿದ್ದಾರೆ. ಸುಭಾಷ್ ಘಾಯ್ ಅವರ ಹೊಸ ಯೋಜನೆ ಎಲ್ಲರ ಗಮನ ಸೆಳೆದಿದೆ.

ಸುಭಾಷ್ ಘಾಯ್ (Subhash Ghai) ಅವರು ಖಳ್ ನಾಯಕ್ ನಲ್ಲಿ ನಾಯಕನ ಪಾತ್ರಕ್ಕೆ ರಣ್ವೀರ್ ಸಿಂಗ್ ಅಥವಾ ರಣಬೀರ್ ಕಪೂರ್ ನ ಅಪ್ರೋಚ್ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಅವರ ಲಿಸ್ಟ್ ನಲ್ಲಿ ಯಶ್ ಅವರ ಹೆಸರು ಕೂಡಾ ಇದೆ ಅನ್ನೋದು ವಿಶೇಷವಾಗಿದೆ. ಅಲ್ಲದೇ ಅವರು ಅಲ್ಲು ಅರ್ಜುನ್ (Allu Arjun) ಹೆಸರನ್ನು ಸಹಾ ಪ್ರಸ್ತಾಪ ಮಾಡಿದ್ದಾರೆ. ‌ಒಟ್ನಲ್ಲಿ ಅವಕಾಶ ಯಾರಿಗೆ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment