Bollywood Actress: 6 ವರ್ಷದಿಂದ ಸಿನಿಮಾ ಮಾಡಿಲ್ಲ, ಆದ್ರೂ ಶಾರೂಖ್ ಅಮಿತಾಬ್ ಗಿಂತ ಫೇಮಸ್ ಈ ಸುಂದರಿ

Written by Soma Shekar

Published on:

---Join Our Channel---

Bollywood Actress: ಸಿನಿಮಾ ಲೋಕದಲ್ಲಿ ಸ್ಟಾರ್ ಕಿಡ್ ಗಳ ಹೊರತಾಗಿ ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಬಂದ ನಟ, ನಟಿಯರಿಗೆ ಒಂದು ಫ್ಲಾಪ್ ಎದುರಾದರೂ ನಂತರ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುವುದು ಬಹಳ ಕಷ್ಟ. ಸ್ಟಾರ್ ನಟರ ಸಿನಿಮಾಗಳು ಸೋತಾಗಲೂ ಇದು ಅವರ ವೃತ್ತಿ ಜೀವನದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಆದರೆ ಬಾಲಿವುಡ್ ನ ಈ ನಟಿಗೆ ದೊಡ್ಡ ಫ್ಲಾಪ್ ಎದುರಾದರೂ, ಕಳೆದ ಆರು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸದೇ ಹೋದರೂ ಸ್ಟಾರ್ ಡಂ ಮಾತ್ರ ಕಡಿಮೆಯಾಗಿಲ್ಲ.

ಅಲ್ಲದೇ ಈ ನಟಿ (Bollywood Actress) ಸ್ಟಾರ್ ಡಂ ಮತ್ತು ಜನಪ್ರಿಯತೆಯ ವಿಚಾರದಲ್ಲಿ ದೊಡ್ಡ ಸ್ಟಾರ್ ಗಳಾದ ಅಮಿತಾಬ್ ಬಚ್ಚನ್ ಮತ್ತು ಶಾರೂಖ್ ಖಾನ್ ರನ್ನೇ ಹಿಂದೆ ಹಾಕಿದ್ದಾರೆ ಎಂದರೆ ಅಚ್ಚರಿ ಆಗಬಹುದು. ಹಾಗಾದರೆ ಯಾರು ಆ ನಟಿ ಅನ್ನೋದಾದ್ರೆ, ಅವರೇ ಅನುಷ್ಕಾ ಶರ್ಮಾ (Anushka Sharma). ಮೊದಲ ಸಿನಿಮಾದಲ್ಲೇ ಕಿಂಗ್ ಖಾನ್ ಶಾರೂಖ್ ಖಾನ್ ಗೆ (Shah Rukh Khan) ಜೋಡಿಯಾಗಿ ಬಾಲಿವುಡ್ ಗೆ ಎಂಟ್ರಿಯನ್ನು ನೀಡಿದವರು ಅನುಷ್ಕಾ ಶರ್ಮಾ.

ಅನುಷ್ಕಾ ತಮ್ಮ ವೃತ್ತಿ ಜೀವನದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಅವರ ವೃತ್ತಿ ಜೀವನದಲ್ಲಿ ಅವರಿಗೆ ಎದುರಾದ ಎರಡು ದೊಡ್ಡ ಫ್ಲಾಪ್ ಸಿನಿಮಾಗಳು ಎಂದರೆ ಅವು 2015 ರಲ್ಲಿ ತೆರೆಗೆ ಬಂದಂತಹ ಬಾಂಬೆ ವೆಲ್ವೆಟ್ ಮತ್ತು 2018 ರಲ್ಲಿ ತೆರೆ ಕಂಡ ಶಾರೂಖ್ ಖಾನ್ ಜೊತೆಗೆ ನಟಿಸಿದ್ದ ಜೀರೋ ಸಿನಿಮಾಗಳಾಗಿವೆ.

ಇದಾದ ನಂತರ ಅನುಷ್ಕಾ ಯಾವುದೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಮನೆ, ಸಂಸಾರ ಮತ್ತು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಎರಡನೇ ಮಗುವಿನ ತಾಯಿಯಾಗಿದ್ದಾರೆ. ಹೀಗೆ ಸಿನಿಮಾಗಳಿಂದ ನಟಿ ದೂರವೇ ಉಳಿದಿದ್ದರಾಉ ಸಹಾ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ಹವಾ ಅಮಿತಾಬ್ ಬಚ್ಚನ್ ಮತ್ತು ಶಾರೂಖ್ ಗಿಂತ ಜೋರಾಗಿದೆ.

Leave a Comment