Pushpa 2: ಅಲ್ಲು ಅರ್ಜುನ ಪುಷ್ಪ 2 ಅಬ್ಬರಕ್ಕೆ ಹೆದರಿ ಬಾಲ ಮುದುರಿದ ಬಾಲಿವುಡ್ ನ ಸಿಂಗಂ

Written by Soma Shekar

Published on:

---Join Our Channel---

Pushpa 2 : ಟಾಲಿವುಡ್ ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಮತ್ತು ಬಹುನಿರೀಕ್ಷಿತ ಸಿನಿಮಾ ಸಹಾ ಆಗಿರುವ ಪುಷ್ಪ 2 (Pushpa 2) ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎನ್ನುವ ಅಧಿಕೃತ ಘೋಷಣೆ ಮಾಡಲಾಗಿದೆ. ಇದೇ ವೇಳೆ ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ (Ajay Devgan) ಅವರು ನಾಯಕನಾಗಿರುವ ಸಿಂಗಂ ಸಿನಿಮಾವನ್ನು ಸಹಾ ಆಗಸ್ಟ್ 15 ರಂದೇ ಬಿಡುಗಡೆ ಮಾಡುವುದಾಗಿ ಘೋಷಣೆ ಆಗಿತ್ತು. ಪುಷ್ಪಾಗೆ ಟಕ್ಕರ್ ಕೊಡೋದಕ್ಕೆ ಸಿಂಗಂ ಅಗೇನ್ (Singam Again) ಸಿದ್ಧವಾಗಿದೆ ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡು ತಮ್ಮ ಖುಷಿಯನ್ನು ಶೇರ್ ಮಾಡಿಕೊಂಡಿದ್ದರು.

ಆದರೆ ಈಗ ಎಲ್ಲಾ ವಿಚಾರಗಳು ತಲೆ ಕೆಳಗಾಗಿದೆ. ಸಿಂಗಂ ಸಿನಿಮಾದ ವೇಗ ಸೈಡ್ ಗೆ ಸರಿದಿದೆ ಎನ್ನುವ ಹೊಸ ವಿಷಯವೊಂದು ಹರಿದಾಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಪುಷ್ಪ ಸಿನಿಮಾದ ಟೀಸರ್ ಒಂದು ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಟೀಸರ್ ನೋಡಿದ ನಂತರ ಸಿನಿಮಾ ಕುರಿತಾದ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಟೀಸರ್ ಮತ್ತು ಅಲ್ಲು ಅರ್ಜುನ್ ಲುಕ್ ಬಗ್ಗೆ ನೂರಾರು ಪೋಸ್ಟ್ ಗಳು ಹರಿದಾಡಿದೆ.

ಪುಷ್ಪ 2 (Pushpa 2) ಬ್ಲಾಕ್ ಬಸ್ಟರ್ ಆಗೋದು ಪಕ್ಕಾ, ಗಳಿಕೆ ಸಹಾ ಸಾವಿರಾರು ಕೋಟಿಗಳಲ್ಲಿ ಇರುತ್ತೆ ಎಂದು ಸಿನಿಮಾ ತಜ್ಞರು ಅಂದಾಜು ಮಾಡಿದ್ದಾರೆ. ಹೀಗೆ ಪುಷ್ಪ 2 ಬಿಡುಗಡೆಗೆ ಮೊದಲೇ ಕ್ರಿಯೇಟ್ ಆಗುತ್ತಿರುವ ಹೈಪ್ ನೋಡಿದ ನಂತರ ಸಿಂಗಂ ಅಗೇನ್ ಸಿನಿಮಾ ತಂಡ ತಮ್ಮ ಸಿನಿಮಾದ ಬಿಡುಗಡೆಯ ವಿಚಾರವಾಗಿ ಮಾಡಿದ್ದ ನಿರ್ಧಾರವನ್ನು ಬದಲಾಯಿಸಿದೆ ಎನ್ನುವುದು ಈಗಿನ ಲೇಟೆಸ್ಟ್ ಅಪ್ಡೇಟ್ ಆಗಿದೆ.

ಬಾಲಿವುಡ್ ನಲ್ಲಿ ಆ್ಯಕ್ಷನ್ ಸಿನಿಮಾಗಳ ಮೂಲಕವೇ ಸೌಂಡ್ ಮಾಡೋ ರೋಹಿತ್ ಶೆಟ್ಟಿ (Rohit Shetty) ಸಿಂಗಂ ಸಿರೀಸ್ ಮೂಲಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈಗ ಸಿಂಗಂ ಅಗೇನ್ ನಲ್ಲಿ ಅಜಯ್‌ ದೇವಗನ್ ಸೇರಿದಂತೆ ಅದ್ದೂರಿ ತಾರಾಗಣವೇ ಇದೆ. ಆದರೆ ಪುಷ್ಪ 2 ಸಿನಿಮಾವನ್ನು ಅದ್ದೂರಿಯಾಗಿ ವಿವಿಧ ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಸಿಂಗಂ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗಿದೆ.

Leave a Comment