Samantha: ಬದಲಾಗುತ್ತಾ ಸಮಂತಾ ಲಕ್, ಸ್ಟಾರ್ ನಟನ ಜೊತೆಗೆ ಹೊಸ ಸಿನಿಮಾದಲ್ಲಿ ಸಮಂತಾ ನಾಯಕಿ; ಯಾರು ಆ ಹೀರೋ ?

Written by Soma Shekar

Published on:

---Join Our Channel---

Samantha : ಸೌತ್ ಸಿನಿಮಾ ಬ್ಯೂಟಿ ಸಮಂತಾಗೆ (Samantha) ಇತ್ತೀಚಿನ ವರ್ಷಗಳಲ್ಲಿ ಅದೃಷ್ಟ ಅದ್ಯಾಕೋ ಕೈ ಕೊಟಂತೆ ಇದೆ. ಒಂದು ಕಡೆ ಸಿನಿಮಾಗಳ ಸೋಲು, ಮತ್ತೊಂದು ಕಡೆ ಆರೋಗ್ಯ ಸಮಸ್ಯೆ ಹೀಗೆ ಸಮಂತಾ ತಮ್ಮ ವೈಯಕ್ತಿಕ ಜೀವನದಲ್ಲೊಂದು ಸವಲಾಗಿರುವ ಘಟ್ಟದಲ್ಲಿ ಸಕ್ಸಸ್ ಗಾಗಿ ಸಿಕ್ಕಾಪಟ್ಟೆ ಶ್ರಮ ಪಡುತ್ತಿದ್ದಾರೆ. ಪುಷ್ಪ (Pushpa) ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದರು ನಟಿ ಸಮಂತಾ. ನಟಿಯ ಹಾಟ್ ಅವತಾರ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು.

ಆದರೆ ನಟಿಯು ನಾಯಕಿಯಾಗಿದ್ದ ಸಿನಿಮಾಗಳು ಮಾತ್ರ ನಿರೀಕ್ಷಿತ ಗೆಲುವು ಕಾಣಲಿಲ್ಲ. ಯಶೋಧ ಸಿನಿಮಾ ಸಾಧಾರಣ ಗೆಲುವು ಕಂಡರೆ, ಶಾಕುಂತಲಂ ಸಿನಿಮಾ ಡಿಸಾಸ್ಟರ್ ಸಾಲಿಗೆ ಸೇರ್ಪಡೆಯಾಗಿತ್ತು. ಇದಾದ ನಂತರ ವಿಜಯ ದೇವರಕೊಂಡ ಜೊತೆಗೆ ನಟಿಸಿದ ಖುಷಿ ಸಿನಿಮಾ ಮೇಲೆ ನಿರೀಕ್ಷೆಗಳಿತ್ತಾದರೂ ಈ ಸಿನಿಮಾ ಕೂಡಾ ಜನರ ನಿರೀಕ್ಷೆಗಳನ್ನು ತಲುಪುವಲ್ಲಿ ವಿಫಲವಾಯಿತು.

ಖುಷಿ ನಂತರ ಸಮಂತಾ ಸಿನಿಮಾದಿಂದ ಬ್ರೇಕ್ ಪಡೆದಿದ್ದರು. ಈಗ ಮತ್ತೆ ಕಮ್ ಬ್ಯಾಕ್ ಮಾಡೋದಕ್ಕೆ ಸಜ್ಜಾಗಿರೋ ಸಮಂತಾ ಸ್ಟಾರ್ ನಟನ ಜೊತೆಗೆ ನಾಯಕಿಯಾಗಲು ಸಜ್ಜಾಗಿದ್ದಾರೆ. ಹೌದು, ಐಕಾನ್ ಸ್ಟಾರ್ ಖ್ಯಾತಿಯ ಅಲ್ಲು ಅರ್ಜುನ್ (Allu Arjun) ಹೊಸ ಸಿನಿಮಾಕ್ಕೆ ಸಮಂತಾ ನಾಯಕಿ ಎನ್ನಲಾಗಿದೆ. ಈ ಹಿಂದೆ ಅಲ್ಲು ಅರ್ಜುನ್ ಜೊತೆಗೆ ಸಮಂತಾ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ದೊಡ್ಡ ಸಕ್ಸಸ್ ಪಡೆದಿತ್ತು.

ನಂತರ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಕಿಚ್ಚು ಹೊತ್ತಿಸಿದ್ದ ಸಮಂತಾ ಇದೀಗ ಮತ್ತೆ ಅಲ್ಲು ಅರ್ಜುನ್ ಗೆ ನಾಯಕಿಯಾಗುತ್ತಿದ್ದಾರೆ. ಹೌದು, ಪುಷ್ಪ 2 ನಂತರ ಅಲ್ಲು ಅರ್ಜುನ್ ನಿರ್ದೇಶಕ ಅ್ಯಟ್ಲಿ ಜೊತೆಗೆ ಹೊಸ ಸಿನಿಮಾ ಮಾಡಲಿರುವ ವಿಷಯ ಈಗಾಗಲೇ ಸುದ್ದಿಯಾಗಿದ್ದು, ಆ್ಯಟ್ಲಿ (Atlee) ತಮ್ಮ ಹೊಸ ಸಿನಿಮಾಕ್ಕೆ ಸಮಂತಾನ ನಾಯಕಿಯಾಗಿ ಮಾಡಲು ನಿರ್ಧರಿಸಿದ್ಧು, ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗಿದೆ.

ಸಿನಿಮಾಗಳಲ್ಲಿ ಒಂದು ಸೂಪರ್ ಹಿಟ್ ಸಿನಿಮಾಕ್ಕಾಗಿ ಕಾದಿದ್ದ ಸಮಂತಾಗೆ ಈ ಹೊಸ ಸಿನಿಮಾ ಅದೃಷ್ಟ ತರುತ್ತಾ, ಅಲ್ಲು ಅರ್ಜುನ್ ಮತ್ತು ಸಮಂತಾ ಜೋಡಿ ಮತ್ತೊಮ್ಮೆ ಸಿನಿ ಪ್ರೇಮಿಗಳ ಮೇಲೆ ಮೋಡಿ ಮಾಡಲಿದ್ಯಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಪ್ರಸ್ತುತ ನಟಿ ತಮ್ಮ ವೆಬ್ ಸಿರೀಸ್ ನ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ಇದರಲ್ಲಿ ನಟಿ ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿಸಿದ್ದಾರೆ.

Leave a Comment