Mahesh Babu: ಅಲ್ಲಿ ಕಂಡ ಗೆಲುವಿನ ಬೆನ್ನಲ್ಲೇ ಈಗ ಬೆಂಗಳೂರಿನ ಮೇಲೆ ಕಣ್ಣಿಟ್ಟ ಮಹೇಶ್ ಬಾಬು

Written by Soma Shekar

Published on:

---Join Our Channel---

Mahesh Babu: ಟಾಲಿವುಡ್ ನ (Tollywood) ವಿಚಾರಕ್ಕೆ ಬಂದರೆ ಇಲ್ಲಿನ ಸ್ಟಾರ್ ನಟರು ಸಿನಿಮಾಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಸಿನಿಮಾಗಳ ಕೆಲಸಗಳ ಜೊತೆಗೆ ಅವರು ಉದ್ಯಮಿಗಳು ಸಹಾ ಆಗಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಅಲ್ಲು ಅರ್ಜುನ್ (Allu Arjun), ಮಹೇಶ್ ಬಾಬು ಇನ್ನೂ ಮೊದಲಾದ ನಾಯಕ ನಟರು ಮಲ್ಟಿಪ್ಲೆಕ್ಸ್ ನ ಉದ್ಯಮಕ್ಕೆ ಇಳಿದಿದ್ದಾರೆ. ಹೈದರಾಬಾದ್ ನಲ್ಲಿ ಈಗಾಗಲೇ ಮಲ್ಟಿಪ್ಲೆಕ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನಟರಲ್ಲಿ ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಈಗ ಮಹೇಶ್ ಬಾಬು (Mahesh Babu) ಅವರು ಇನ್ನೊಂದು ಹೆಜ್ಜೆ ಮುಂದೆ ಇಡಲು ಸಜ್ಜಾಗಿದ್ದು ತಮ್ಮ ಎಎಂಬಿ ಸಿನಿಮಾಸ್ ಅನ್ನು (AMB cinemas) ಬೆಂಗಳೂರಿಗೆ ವಿಸ್ತರಿಸಲು ನಟ ಸಿದ್ಧತೆಗಳನ್ನು ನಡೆಸಿದ್ದಾರೆ. ಏಪ್ರಿಲ್ 24 ರಂದು ಬೆಂಗಳೂರಿನಲ್ಲಿ ಎಎಂಬಿ ಸಿನಿಮಾಸ್ ನ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ವೇಳೆ ನಿರ್ಮಾಪಕ ರಾಕಲೈನ್ ವೆಂಕಟೇಶ್ ಅವರು ತಂಡಕ್ಕೆ ಶುಭವನ್ನು ಹಾರೈಸಿದ್ದಾರೆ. ಮಹೇಶ್ ಬಾಬು ಅವರ ಎಎಂಬಿ ಮಲ್ಟಿಪ್ಲೆಕ್ಸ್ ಅತ್ಯಾಧುನಿಕ ಶೈಲಿಯ ಮಲ್ಟಿಪ್ಲೆಕ್ಸ್ ಆಗಿದೆ.

ಇದಕ್ಕೆ ಜನರಿಂದ ಸಹಾ ಉತ್ತಮ ಪ್ರತಿಕ್ರಿಯೆ ಮತ್ತು ಮೆಚ್ಚುಗೆಗಳು ಹರಿದು ಬಂದಿದೆ. ಬೆಂಗಳೂರಿನಲ್ಲಿ ಎಎಂಬಿ ಸಿನಿಮಾಸ್ ಅನ್ನು ಆರಂಭಿಸುವ ಆಲೋಚನೆ ಮಹೇಶ್ ಬಾಬು ಅವರಿಗೆ ಬಹಳ ದಿನಗಳಿಂದಲೂ ಇತ್ತು. ಆದರೆ ಸರಿಯಾದ ಜಾಗದ ನಿರೀಕ್ಷೆಯಲ್ಲಿದ್ದ ನಟ, ಇದೀಗ ಸರಿಯಾದ ಸ್ಥಳ ಸಿಕ್ಕಿರುವ ಕಾರಣ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ಕಪಾಲಿ ಚಿತ್ರ ಮಂದಿರವನ್ನು ಈಗಾಗಲೇ ಕೆಡವಲಾಗಿದೆ. ಅದರ ಜಾಗದಲ್ಲಿ ಒಂದು ಮಲ್ಟಿಪ್ಲೆಕ್ಸ್ ತಲೆ ಎತ್ತಲಿದೆ ಎನ್ನುವ ಸುದ್ದಿ ಕೆಲವು ವರ್ಷಗಳ ಹಿಂದೆಯೇ ಆಗಿತ್ತು. ಈಗ ಅದೇ ಜಾಗದಲ್ಲಿ ಎಎಂಬಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು ಎನ್ನಲಾಗಿದೆ. ಇಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚು ಅವಕಾಶ ಸಿಗಲಿ ಎನ್ನುವುದು ಸಿನಿ ಪ್ರೇಮಿಗಳ ಆಶಯವಾಗಿದೆ.

Leave a Comment