Rajanikanth: ದಳಪತಿ ವಿಜಯ್ ಗೆ ಪ್ರತಿಸ್ಪರ್ಧೆ ನೀಡಲು ಮುಂದಾದ ತಲೈವಾ; ವಿಜಯ್ VS ರಜನೀಕಾಂತ್

Written by Soma Shekar

Published on:

---Join Our Channel---

Rajanikanth : ಪ್ಯಾನ್ ಇಂಡಿಯಾ ಸಿನಿಮಾಗಳ ಯುಗ ಆರಂಭವಾದ ಮೇಲೆ ಸಿನಿಮಾಗಳ ಯಶಸ್ಸು ಆ ಸಿನಿಮಾಗಳ ನಾಯಕರ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಹಾಗೂ ನಟರು ತಮ್ಮ ಸಿನಿಮಾಗಳಿಗೆ ಪಡೆಯುವ ಸಂಭಾವನೆ ಕೂಡಾ ಹೆಚ್ಚಾಗುತ್ತಿದೆ. ಈಗ ಪ್ಯಾನ್ ಇಂಡಿಯಾ ಸ್ಟಾರ್ ಗಳ (Pan India Stars) ಸಂಭಾವನೆ ಅನ್ನೋದು ನೂರಾರು ಕೋಟಿಗಳಲ್ಲೇ ಇದೆ‌. ಅದರಲ್ಲೂ ಕೆಲವು ನಾಯಕ ನಟರಂತೂ ಸಿನಿಮಾ ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆಯನ್ನೇ ಬರೆಯಲು ಮುಂದಾಗುತ್ತಿರುವ ವಿಚಾರವು ಸಹಾ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.

ಈಗಂತೂ ತಮಿಳು ಸಿನಿಮಾ ರಂಗದಲ್ಲಿ ನಾಯಕ ನಟರ ನಡುವೆ ಸಂಭಾವನೆ ವಿಚಾರದಲ್ಲೂ ಪೈಪೋಟಿ ಆರಂಭವಾಯ್ತಾ? ಅನ್ನೋ ಅನುಮಾನವನ್ನು ಹುಟ್ಟು ಹಾಕುವಂತಹ ಪರಿಸ್ಥಿತಿ ಉಂಟಾಗಿದೆ ಎಂದರೆ ನೀವು ನಂಬಲೇಬೇಕಾಗಿದೆ. ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ನೀಡಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಕೈಯಲ್ಲಿರುವ ಸಿನಿಮಾ ಬಿಟ್ಟು, ಇನ್ನೊಂದು ಸಿನಿಮಾ ಮಾಡಲಿದ್ದು ಅದೇ ಅವರ ಕಡೆಯ ಸಿನಿಮಾ ಎನ್ನಲಾಗಿದೆ.

ಕಡೆಯ ಸಿನಿಮಾಕ್ಕೆ ವಿಜಯ್ (Thalapathy Vijay) ಬರೋಬ್ಬರಿ 250. ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದು, ಇದು ನಟನೊಬ್ಬ ಪಡೆಯುತ್ತಿರುವ ಅತಿ ಹೆಚ್ಚು ಸಂಭಾವನೆ ಎಂದೇ ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಈಗ ಈ ರೇಸ್ ಗೆ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಜನೀಕಾಂತ್ ಅವರು ಕೂಡಾ ಎಂಟ್ರಿ ನೀಡಿದಂತೆ ಕಾಣ್ತಿದೆ. ಇಷ್ಟಕ್ಕೂ ಏನಿದು ವಿಚಾರ ಅಂತೀರಾ? ಇಲ್ಲಿದೆ ಅದಕ್ಕೆ ಉತ್ತರ.

ನಟ ರಜನೀಕಾಂತ್ (Rajanikanth) ಅವರ ಜೈಲರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಸದ್ದು ಮಾಡಿತ್ತು. ಈಗ ಜೈಲರ್ ಸಿನಿಮಾದ ಸೀಕ್ವೆಲ್ ನ ಘೋಷಣೆಯನ್ನು ಮಾಡಲಾಗಿದೆ. ಈ ಬಾರಿ ಜೈಲರ್ 2 ಗೆ (Jailer 2) ಹುಕುಂ (Hukum) ಎಂದು ಹೆಸರನ್ನು ಇಡಲಾಗಿದೆ. ಇನ್ನು ಈ ಸಿನಿಮಾಕ್ಕಾಗಿ ರಜನೀಕಾಂತ್ ಅವರು 250 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆನ್ನುವ ವಿಚಾರ ಈಗ ವೈರಲ್ ಆಗಿದೆ.

ಈ ಮೂಲಕ ಹಿರಿಯ ನಟ ರಜನೀಕಾಂತ್ ಅವರು ದಳಪತಿ ವಿಜಯ್ ಗೆ ಸಂಭಾವನೆ ವಿಚಾರದಲ್ಲಿ ಸರಿ ಸಮಾನ ಎನ್ನುವಂತೆ ಕಾಣುತ್ತಿದೆ. ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಲಿನಲ್ಲಿ ದಳಪತಿ ವಿಜಯ್ ಹಾಗೂ ಸೂಪರ್ ಸ್ಟಾರ್ ರಜನೀಕಾಂತ್ ಸಹಾ ಸೇರ್ಪಡೆ ಆಗಿದ್ದಾರೆ. ಆದರೆ ಪರಸ್ಪರರ ಫ್ಯಾನ್ ಗಳು ಮಾತ್ರ ಈ ವಿಚಾರದಲ್ಲಿ ತಮ್ಮ ಅಭಿಮಾನ ನಟನದ್ದೇ ಹೆಚ್ಚು ಸಂಭಾವನೆ, ಇನ್ನುಳಿದಂತೆ ಸುಳ್ಳು ಸುದ್ದಿ ಅಂತ ಹೇಳ್ತಿದ್ದಾರೆ.‌

Leave a Comment