ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ವಿನ್ನರ್

ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಸದ್ದನ್ನು ಮಾಡುತ್ತಿರುವ ಸ್ಪರ್ಧಿಗಳಲ್ಲಿ ನೀತು ವನಜಾಕ್ಷಿ ಅವರು ಸಹಾ ಒಬ್ಬರಾಗಿದ್ದಾರೆ.

ನೀತು ಒಬ್ಬ ಟ್ಯಾಟೂ ಆರ್ಟಿಸ್ಟ್ ಆಗಿದ್ದಾರೆ. ಅಲ್ಲದೇ ಅವರು ರೂಪದರ್ಶಿಯಾಗಿ ಹಾಗೂ ನಟಿಯಾಗಿಯೂ ಸಹಾ ಈಗಾಗಲೇ ಪರಿಚಯವನ್ನು ಪಡೆದುಕೊಂಡಿದ್ದಾರೆ.

ನೀತು ಹುಟ್ಟಿದ್ದು ಗಂಡಾಗಿ, ಅವರ ಮೂಲ ಹೆಸರು ಮಂಜುನಾಥ್ ಎಂದಾಗಿದೆ.

ಆದರೆ ಅವರು ತನ್ನ ದೈಹಿಕ ಬದಲಾವಣೆಗಳನ್ನು ಅರಿತು, ತನ್ನೊಳಗೆ ಒಬ್ಬ ಹೆಣ್ಣಿದ್ದಾಳೆ ಎಂದು ಅರಿತು ದಿಟ್ಟತನದಿಂದ ಹೆಣ್ಣಾಗಿ ಬದಲಾಗಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ.

ನೀತು ಅವರ ಇಂತಹುದೊಂದು ಬದಲಾವಣೆಗೆ ಅವರ ತಾಯಿ ವನಜಾಕ್ಷಿ ಅವರು ಬೆಂಬಲವಾಗಿ ನಿಂತರು. ಮಗನಲ್ಲಿ ಆದ ಬದಲಾವಣೆಯನ್ನು ಅವರು ಒಪ್ಪಿಕೊಂಡಿದ್ದಾರೆ.‌

ತಾಯಿ ಕೊಟ್ಟ ನೆರವು, ಬೆಂಬಲ ಹಾಗೂ ಧೈರ್ಯದಿಂದಲೇ ನೀತು ತಮ್ಮ ತಾಯಿಯ ಹೆಸರನ್ನು ಸೇರಿಸಿಕೊಂಡು ನೀತು ವನಜಾಕ್ಷಿ ಆಗಿದ್ದಾರೆ.

ನೀತು 2019 ರಲ್ಲಿ ಮಿಸ್ ಇಂಟರ್ ನ್ಯಾಶನಲ್ ಟ್ರಾನ್ಸ್ ಜೆಂಡರ್ ಕ್ವೀನ್ ಸೌಂದರ್ಯ ಕಿರೀಟವನ್ನು ಗೆದ್ದು, ಅಂತರರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲೂ ಗುರುತಿಸಿಕೊಂಡಿದ್ದಾರೆ.‌