Tollywood Actor: ಆ ಸಿನಿಮಾ ನಂತ್ರ ಮಾಡಿದ್ದೆಲ್ಲಾ ಕೆಟ್ಟ ಪಾತ್ರಗಳೇ, ಸ್ಟಾರ್ ನಟನ ಶಾಕಿಂಗ್ ಮಾತುಗಳು

Written by Soma Shekar

Published on:

---Join Our Channel---

Tollywood Actor: ತೆಲುಗು ಸಿನಿಮಾ (Tolywood Actor) ರಂಗದಲ್ಲಿ ನಾಯಕ ನಟನಾಗಿ ಹೆಸರನ್ನು ಮಾಡಿದ್ದ ನಟ ಜಗಪತಿ ಬಾಬು (Jagapati Babu) ಈಗ ವಿಲನ್ ಪಾತ್ರಗಳಲ್ಲಿ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್ ನಲ್ಲಿ ಹಾಸ್ಯ ಪ್ರಧಾನ ಸಿನಿಮಾಗಳು, ಕೌಟುಂಬಿಕ ಕಥಾ ಸಿನಿಮಾಗಳಿಂದಲೇ ಹೆಚ್ಚು ಜನಪ್ರಿಯತೆಯನ್ನು ಪಡೆದ ಈ ನಟ ಆ್ಯಕ್ಷನ್ ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದು ಕೆಲವೇ ಸಿನಿಮಾಗಳಲ್ಲಿ ಮಾತ್ರ. ಸಿನಿಮಾ ರಂಗದಲ್ಲಿ ಒಂದು ಹಂತದ ನಂತರ ನಟನಿಗೆ ಅವಕಾಶಗಳು ಕಡಿಮೆಯಾದವು.

ಆರ್ಥಿಕ ಸಮಸ್ಯೆಗಳು ನಟನಿಗೆ ಕಾಡಿದ್ದವು. ಆ ದಿನಗಳಲ್ಲೇ ಜಗಪತಿ ಬಾಬು ಅವರ ವೃತ್ತಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಎನ್ನುವಂತೆ ನಂದಮೂರಿ ಬಾಲಕೃಷ್ಣ (Nandamuri Balakrishna) ಎದುರಿನಲ್ಲಿ ವಿಲನ್ ಪಾತ್ರದಲ್ಲಿ ಲೆಜೆಂಡ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಆರಂಭದಲ್ಲಿ ಜಗಪತಿ ಬಾಬು ವಿಲನ್ ಪಾತ್ರ ಮಾಡ್ತಾರಾ ಅಂತ ಎಲ್ಲರೂ ಅಚ್ಚರಿ ಪಟ್ಟಿದ್ದರಂತೆ. ಆದರೆ ಸಿನಿಮಾ ಬಿಡುಗಡೆ ನಂತರ ಜಗಪತಿ ಬಾಬು ಪಾತ್ರ ಎಲ್ಲರಿಗೂ ದೊಡ್ಡ ಶಾಕ್ ನೀಡಿತ್ತು.

ಲೆಜೆಂಡ್ ಸಿನಿಮಾದ (Legend Movie) ನಂತರ ಜಗಪತಿ ಬಾಬು ಅವರಿಗೆ ಪೋಷಕ ಪಾತ್ರಗಳಿಗೆ ಅದರಲ್ಲೂ ವಿಲನ್ ಪಾತ್ರಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಹರುದು ಬಂತು. ಒಂದು ಹೊಸ ಇಮೇಜ್ ನಟ ಪಡೆದುಕೊಂಡಿದ್ದರು. ಲೆಜೆಂಡ್ ಸಿನಿಮಾ ಬಂದು ಹತ್ತು ವರ್ಷಗಳಾದ ಹಿನ್ನಲೆಯಲ್ಲಿ ನಡೆದ ಸಮಾರಂಭದಲ್ಲಿ ಜಗಪತಿ ಬಾಬು ಭಾಗಿಯಾಗಿರಲಿಲ್ಲ. ಅನಂತರ ನಟ ತಮ್ಮ ಪಾತ್ರದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.‌

ಲೆಜೆಂಡ್ ಸಿನಿಮಾ ಖಂಡಿತ ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದಂತಹ ಸಿನಿಮಾ. ಆ ಚಿತ್ರಕ್ಕಿಂತ ಮೊದಲು ನನ್ನ ಬಳಿ ಒಂದೇ ಒಂದು ಸಿನಿಮಾ ಆಫರ್ ಕೂಡಾ ಇರ್ಲಿಲ್ಲ. ನನ್ನ ಜೊತೆ ಯಾರಾದ್ರೂ ಸಿನಿಮಾ ಮಾಡ್ತಾರಾ ಅಂತ ನಾನು ಕಾಯ್ತಿರೋವಾಗಲೇ ಲೆಜೆಂಡ್ ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಆಫರ್ ಬಂತು. ಆಗ ಜಗಪತಿ ಬಾಬು ವಿಲನ್ ಆಗಿ ನಟಿಸುತ್ತಾರೋ ಇಲ್ಲವೋ ಅನ್ನೋ ಅನುಮಾನ ಆ ಚಿತ್ರ ತಂಡದವರಿಗೆ ಇತ್ತು. ಆದರೆ ನಾನು ಒಪ್ಪಿಕೊಂಡೆ.

ಆ ಸಿನಿಮಾ ಆದ ಮೇಲೆ ನನಗೆ ಸಾಕಷ್ಟು ಆಫರ್‌ ಗಳು ಬಂದವು. ನಾನು ಸುಮಾರು ತೊಂಬತ್ತು ಚಿತ್ರಗಳನ್ನು ಮಾಡಿರಬೇಕು. ಆದರೆ ಅವುಗಳಲ್ಲಿ ಕೇವಲ ಐದಾರು ಸಿನಿಮಾಗಳಲ್ಲಿ ಮಾತ್ರವೇ ಗಮನಾರ್ಹ ಪಾತ್ರಗಳಿವೆ. ರಂಗಸ್ಥಲಂ, ಶ್ರೀಮಂತುಡು, ಅರವಿಂದ ಸಮೇತ ವೀರ ರಾಘವ ಹೀಗೆ ಒಳ್ಳೆಯ ಪಾತ್ರಗಳು ಬಂದವು. ಲೆಜೆಂಡ್ ನಿಂದ ಬಂದ ಕೀರ್ತಿಯನ್ನು ನಾನು ಸರಿಯಾಗಿ ಬಳಸಿಕೊಂಡಿದ್ದರೆ ನನ್ನ ಕೆರಿಯರ್ ಚೆನ್ನಾಗಿರುತ್ತಿತ್ತು ಎಂದಿದ್ದಾರೆ ಜಗಪತಿ ಬಾಬು.

Leave a Comment