Karthik Mahesh: ಗೆದ್ದಿದ್ದು 50 ಲಕ್ಷ ಆದ್ರೆ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ; ಬಿಗ್ ಬಾಸ್ ಹಣದ ಅಸಲಿ ಕಥೆ ಹೇಳಿದ ಕಾರ್ತಿಕ್

Written by Soma Shekar

Published on:

---Join Our Channel---

Karthik Mahesh: ಸಾಕಷ್ಟು ಸದ್ದು ಸುದ್ದಿಯನ್ನು ಮಾಡಿದ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (Bigg Boss Kannada 10) ಮುಗಿದು ಈಗಾಗಲೇ ಸಾಕಷ್ಟು ದಿನಗಳಾಗಿದೆ. ಈ ಬಾರಿ ಕಾರ್ತಿಕ್ ಮಹೇಶ್ (Karthik Mahesh) ಅವರು ಬಿಗ್ ಬಾಸ್ ಗೆದ್ದು, ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಿಗ್ ಬಾಸ್ ನ ಗೆಲುವು ಕಾರ್ತಿಕ್ ಅವರಿಗೆ ಇನ್ನಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಅವರಿಗೆ ಹೊಸ ಅವಕಾಶಗಳು ಸಹಾ ಅರಸಿ ಬರುತ್ತಿವೆ‌. ಈಗಾಗಲೇ ಆಭರಣ ಜಾಹೀರಾತೊಂದರಲ್ಲಿ ಅವರು ಕಾಣಿಸಿಕೊಂಡಿದ್ದಾರೆ.‌ ಕಾರ್ತಿಕ್ ಅವರ ಈ ಜರ್ನಿಯನ್ನು ನೋಡಿ ಅವರ ಅಭಿಮಾನಿಗಳಂತೂ ಬಹಳ ಖುಷಿಯಾಗಿದ್ದಾರೆ. ಇವೆಲ್ಲವುಗಳ ನಡುವೆಯೇ ನಟ ಬಿಗ್ ಬಾಸ್ ನಲ್ಲಿ ಗೆದ್ದು ಗಳಿಸಿದ ಹಣದ ಬಗ್ಗೆ ಕೆಲವು ವಿಚಾರಗಳನ್ನು ಶೇರ್ ಮಾಡಿದ್ದಾರೆ.‌

ಈ ಬಾರಿ ಬಿಗ್ ಬಾಸ್ (Bigg Boss) ವಿನ್ ಆದವರಿಗೆ 50 ಲಕ್ಷ ರೂ. ನಗದು, ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬ್ರೆಜಾ ಕಾರು ಬಹುಮಾನವಾಗಿತ್ತು. ಬಿಗ್ ಬಾಸ್ ಸೀಸನ್ ಟ್ರೋಫಿ ಹಿಡಿದ ಕಾರ್ತಿಕ್ ಮಹೇಶ್ ಅವರಿಗೆ ಎಲೆಕ್ಟ್ರಿಕ್ ಸ್ಕೂಟರ್ ದೊರೆತಿದೆ. ಆದರೆ ಅವರಿಗೆ ಬ್ರೆಜಾ ಕಾರು ಇನ್ನೂ ಕೂಡಾ ಅವರ ಕೈ ಸೇರಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಕಾರ್ತಿಕ್ ಮಹೇಶ್ ಅವರು ಮಾತನಾಡಿದ್ದು, ಎಷ್ಟು ಹಣ ಕೈಸೇರುತ್ತೆ ಎಂದು ತಿಳಿಸಿದ್ದಾರೆ.

ಕಾರ್ತಿಕ್ ಮಹೇಶ್ ಅವರು, ಬ್ರೇಜಾ ಕಾರು ಬರೋಕೆ ಇನ್ನೂ ಐದಾರು ತಿಂಗಳು ಕಾಯಬೇಕಾಗುದೆ ಅಂತ ಹೇಳಿದ್ದು, ಇದಕ್ಕೆ ಇನ್ನೂ ಟೈಮ್‌ ತಗೊಳ್ಳುತ್ತೆ ಎಂದಿದ್ದಾರೆ. ಇನ್ನು ಮನೆ ನೋಡ್ತಾ ಇದ್ದೇನೆ. ಆದರೆ ಬಿಗ್ ಬಾಸ್ ನಿಂದ ಸಿಗೋ ಹಣದಲ್ಲಿ ಮನೆಯನ್ನ ಕಟ್ಟೋದಕ್ಕೆ ಆಗೋದಿಲ್ಲ. ಬೆಂಗಳೂರಲ್ಲಿ ಮನೆ ಕಟ್ಟಬೇಕಂದ್ರೆ ಬಿಗ್ ಬಾಸ್ ಹಣ ಎಲ್ಲಿಗೂ ಸಾಕಾಗಲ್ಲ ಆ ಹಣದ ಜೊತೆಗೆ ನಾನು ಸಹಾ ದುಡಿಬೇಕು ಅಂತ ಕಾರ್ತಿಕ್‌ ಹೇಳಿದ್ದಾರೆ.

ಬಿಗ್ ಬಾಸ್ ನಲ್ಲಿ  50 ಲಕ್ಷ ಗೆದ್ದಿದ್ದೀನಿ ಅನ್ನೋದು ನಿಜ. ಅದ್ರೆ ಅದರಲ್ಲಿ ಪೂರ್ತಿ 50 ಲಕ್ಷ ನಮ್ಮ ಕೈ ಸೇರೋದಿಲ್ಲ. 35 ಲಕ್ಷ ರೂಪಾಯಿ ಮಾತ್ರ ನಮಗೆ ಬರುತ್ತೆ ಇನ್ನುಳಿದ 15 ಲಕ್ಷ ರೂಪಾಯಿ ಟ್ಯಾಕ್ಸ್​ ಅಂತ ಡಿಡೆಕ್ಟ್‌ ಆಗುತ್ತೆ ಮತ್ತು ಹಂತ ಹಂತವಾಗಿ ಹಣ ಬಂದು ಕೈ ಸೇರುತ್ತೆ ಅಂತ ಹೇಳಿದ್ದಾರೆ. ಬಿಗ್ ಬಾಸ್ ನಂತರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರೋ ಕಾರ್ತಿಕ್ ಅವರು ಮುಂದೆ ಯಾವ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ನಿರೀಕ್ಷೆ ಖಂಡಿತ ಅವರ ಅಭಿಮಾನಿಗಳಲ್ಲಿ ಇದೆ.

Leave a Comment