Ramya Krishna: ಮದ್ವೆಗೆ ಮೊದ್ಲು ಅಫೇರ್, ಅಬಾರ್ಷನ್ ಗಾಗಿ 75 ಲಕ್ಷ ಡಿಮ್ಯಾಂಡ್: ಏನಿದು ರಮ್ಯಕೃಷ್ಣ ಸ್ಟೋರಿ?

Written by Soma Shekar

Published on:

---Join Our Channel---

Ramya Krishna: ಪಂಚಭಾಷಾ ತಾರೆಯಾಗಿ ಹೆಸರನ್ನು ಪಡೆದಿರುವ ಖ್ಯಾತ ನಟಿ ರಮ್ಯಕೃಷ್ಣ (Ramya Krishna) ಅವರು ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತೊಂಬತ್ತರ ದಶಕದಲ್ಲಿ ಬಹು ಬೇಡಿಕೆಯ ಸ್ಟಾರ್ ಹಿರೋಯಿನ್ ಆಗಿದ್ದ ರಮ್ಯಕೃಷ್ಣ ಈಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬಹುಬೇಡಿಕೆಯ ಪೋಷಕ ನಟಿಯಾಗಿ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ರಂಗದಲ್ಲಿ ತನ್ನ ವರ್ಚಸ್ಸನ್ನ ಉಳಿಸಿಕೊಂಡಿರುವ ನಟಿ ಸಂಭಾವನೆ ಪಡೆಯುವ ವಿಚಾರದಲ್ಲಿ ಸಹಾ ಹಿಂದೇನಿಲ್ಲ. ಇಂದಿಗೂ ನಟಿ ಕೋಟಿ ಕೋಟಿ ಮೊತ್ತದಲ್ಲಿ ಸಂಭಾವನೆ ಪಡೆಯುತ್ತಾರೆ.

ವೃತ್ತಿ ಜೀವನದಲ್ಲಿ ಉನ್ನತವಾದ ಸ್ಥಾನದಲ್ಲಿ ಇರೋವಾಗಲೇ ನಟಿ ರಮ್ಯಕೃಷ್ಣ ಅವರ ಬಗ್ಗೆ ಒಂದಷ್ಟು ಗಾಸಿಪ್ ಗಳು ಹರಿದಾಡಿದ್ದವು. ಅಲ್ಲದೇ ನಟಿ ಅಫೇರ್ ಕುರಿತಾಗಿ ಸಹಾ ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ರಮ್ಯಕೃಷ್ಣ ವಿವಾಹಿತ ನಿರ್ದೇಶಕನ ಜೊತೆಗೆ ಸಂಬಂಧವನ್ನು ಹೊಂದಿದ್ದರು. ಅದು ಮಾತ್ರವೇ ಅಲ್ಲದೇ ನಟಿ ಆಗ ಆ ನಿರ್ದೇಶಕನಿಂದ ಗರ್ಭಿಣಿ ಸಹಾ ಆಗಿದ್ದರು ಎನ್ನುವ ವಿಷಯ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು.

ಆದರೆ ವಿಷಯ ಅಷ್ಟಕ್ಕೇ ಮುಗಿಯೋದಿಲ್ಲ. ರಮ್ಯಕೃಷ್ಣ ಅವರು ತಮಿಳಿನ ಖ್ಯಾತ ನಿರ್ದೇಶಕ ರವಿಕುಮಾರ್ (Ravikumar) ಸಿನಿಮಾಗಳಲ್ಲಿ ನಟಿಸುವಾಗಲೇ ಅವರ ನಡುವೆ ಸ್ನೇಹ ಮೂಡಿ, ಆ ಸ್ನೇಹ ಪ್ರೀತಿಯಾಗಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಯ್ತು ಎನ್ನಲಾಗಿದೆ. ಈ ಆತ್ಮೀಯತೆಯ ಫಲ ವಾಗಿಯೇ ನಟಿ ಗರ್ಭಿಣಿಯಾದರು. ಇವರ ಕುರಿತಾಗಿ ಮಾದ್ಯಮಗಳಲ್ಲಿ ಒಂದಷ್ಟು ಸುದ್ದಿಯಾಯ್ತು. ಅಲ್ಲದೇ ರವಿಕುಮಾರ್ ಗೆ ಅದಾಗಲೇ ಮದುವೆಯಾಗಿದ್ದ ಕಾರಣ ಅವರ ದಾಂಪತ್ಯ ಜೀವನಕ್ಕೆ ಇದು ಮುಳುವಾಯಿತು.

ಕೊನೆಗೆ ರಮ್ಯಕೃಷ್ಣ ಹೊಟ್ಟೆಯಲ್ಲಿ ಇದ್ದ ಮಗುವನ್ನು ಅಬಾರ್ಷನ್ ಮಾಡೋಕೆ ನಿರ್ಧಾರ ಮಾಡಿದ ರವಿಕುಮಾರ್ ಅವರು ನಟಿಗೆ ಮಗುವನ್ನು ತೆಗೆಸುವ ಸೂಚನೆ ನೀಡಿದ್ದು ಮಾತ್ರವೇ ಅಲ್ಲದೇ ನಟಿ ರಮ್ಯಕೃಷ್ಣ ಆಗ ಬರೋಬ್ಬರಿ 75 ಲಕ್ಷ ರೂ.ಗಳ ಬೇಡಿಕೆಯನ್ನು ಇಟ್ಟಿದ್ದರು ಎನ್ನುವುದಾಗಿ ಸುದ್ದಿಗಳಾಗಿತ್ತು. ಆದರೆ ಈ ಎಲ್ಲಾ ವಿಷಯಗಳು ಕೇವಲ ಗಾಳಿ ಸುದ್ದಿಗಳು ಮಾತ್ರವೇ ಎಂದು ರವಿಕುಮಾರ್ ಮತ್ತು ರಮ್ಯಕೃಷ್ಣ ಈ ವಿಚಾರಕ್ಕೆ ಫುಲ್ ಸ್ಟಾಪ್ ಹಾಕಿದ್ದರು.

Leave a Comment