RamyaKrishna: ಈ ವಯಸ್ಸಲ್ಲಿ ನೀಲಿ ತಾರೆಯಾದ ರಮ್ಯಕೃಷ್ಣ, ಶಾಕ್ ಆದ ಫ್ಯಾನ್ಸ್, ಆದರೆ ಸಿನಿಮಾಕ್ಕೆ ಸಿಕ್ತು ಭರ್ಜರಿ ರೇಟಿಂಗ್

Written by Soma Shekar

Published on:

---Join Our Channel---

Ramya Krishna: ದಕ್ಷಿಣ ಸಿನಿಮಾ ರಂಗದಲ್ಲಿ ಹಿರೋಯಿನ್ ಆಗಿ ಸ್ಟಾರ್ ನಟಿಯಾಗಿ ಮಿಂಚಿದ್ದವರು ನಟಿ ರಮ್ಯಕೃಷ್ಣ (Ramya Krishna), ಟಾಲಿವುಡ್ ನಲ್ಲಿ (Tollywood) ನಂಬರ್ ಒನ್ ಆಗಿದ್ದ ಈ ನಟಿ ಏಕಕಾಲದಲ್ಲಿ ದೇವತೆಯ ಪಾತ್ರದಲ್ಲಿ, ಗ್ಲಾಮರಸ್ ನಾಯಕಿಯಾಗಿ ಮತ್ತು ಮದ್ಯಮ ವರ್ಗದ ಕುಟುಂಬದ ಹೆಣ್ಣಾಗಿ ವೈವಿದ್ಯಮಯ ಪಾತ್ರಗಳಿಗೆ ಜೀವ ನೀಡಿ ತನಗೆ ತಾನೇ ಸಾಟಿ ಎನ್ನುವಂತೆ ಬಹುಬೇಡಿಕೆ ನಟಿಯಾಗಿದ್ದರು. ವರ್ಷಗಳು ಕಳೆದ ಹಾಗೆ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ರಮ್ಯಕೃಷ್ಣ ರಾಜಮಾತೆ ಶಿವಗಾಮಿ ಪಾತ್ರದ ಮೂಲಕ ಅಬ್ಬರಿಸಿದ ನಟಿ ಈಗ ಅಮ್ಮನ ಪಾತ್ರದಲ್ಲಿ, ಅತ್ತೆಯ ಪಾತ್ರದಲ್ಲಿ ಖಡಕ್ ಪಾತ್ರಗಳನ್ನು ಮಾಡುತ್ತಾ ಮಿಂಚುತ್ತಿದ್ದಾರೆ.

ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿಯಾಗಿದ್ದಾರೆ ರಮ್ಯಕೃಷ್ಣ. ಕೆಲವೊಂದು ಪಾತ್ರಗಳಿಗೆ ರಮ್ಯಕೃಷ್ಣ ಅವರೇ ಸರಿ ಬೇರೆ ಅವರಿಂದ ಅದು ಸಾಧ್ಯವೇ ಇಲ್ಲ ಎನ್ನುವಂತೆ ನಟಿಸಿರುವ ರಮ್ಯಕೃಷ್ಣ ಅವರ ಶಿವಗಾಮಿ ಪಾತ್ರ, ರಜನೀಕಾಂತ್ ಅವರ ಪಡೆಯಪ್ಪ ಸಿನಿಮಾದ ನೀಲಾಂಬರಿ ಪಾತ್ರ, ಅಮ್ಮೋರು ಸಿನಿಮಾದಲ್ಲಿ ಶಕ್ತಿ ದೇವತೆಯ ಪಾತ್ರ ಹೀಗೆ ಅಂತಹ ಪಾತ್ರಗಳಿಗೆ ರಮ್ಯಕೃಷ್ಣ ಬಿಟ್ಟು ಬೇರೆ ಅವರು ಹೊಂದುವುದೇ ಇಲ್ಲ ಎನ್ನುವಂತೆ ಪ್ರೇಕ್ಷಕರಿಂದ ಮೆಚ್ಚುಗೆಯನ್ನ ಪಡೆದುಕೊಂಡಿದ್ದಾರೆ ಈ ನಟಿ‌.

ರಮ್ಯಕೃಷ್ಣ ಅವರ ಸಿನಿಮಾ ರಂಗದಲ್ಲಿ ಆರಂಭದ ದಿನಗಳಲ್ಲಿ ವಿಫಲತೆಯನ್ನು ಎದುರಿಸಬೇಕಾಯಿತು. ರಮ್ಯಕೃಷ್ಣ ನಟಿಸುವ ಸಿನಿಮಾಗಳು ಸೋಲಿನ ಹಾದಿ ಹಿಡಿಯುತ್ತದೆ ಎನ್ನುವ ಮಾತೊಂದು ಹರಡಿದ್ದ ದಿನಗಳೂ ಸಹಾ ಇತ್ತು. ಆದರೆ ತೆಲುಗಿನ ಸ್ಟಾರ್ ನಿರ್ದೇಶಕ ಕೆ. ರಾಘವೇಂದ್ರ ರಾವ್ (K Raghavendra Rao) ಅವರು ತಮ್ಮ ಸಿನಿಮಾಗಳಲ್ಲಿ ರಮ್ಯಕೃಷ್ಣ ಅವರನ್ನು ನಾಯಕಿಯಾಗಿ ಮಾಡಿ, ನಟಿಯ ಅದೃಷ್ಟವನ್ನೇ ಬದಲಿಸಿ ಹಾಕಿದರು.

ಹೀಗೆ ಸಿನಿ ರಂಗದ ಪಯಣದಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿರುವ ನಟಿ ಈಗ ಮೊದಲ ಬಾರಿಗೆ ಪೊರ್ನ್ ಸ್ಟಾರ್ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು ವಿಶೇಷ ಏನೆಂದರೆ ಒಳ್ಳೆಯ ರೇಟಿಂಗ್ ಸಹಾ ದಕ್ಕಿದೆ. ಹೌದು, ಸೂಪರ್ ಡೀಲಕ್ಸ್ (Super Deluxe) ಹೆಸರಿನ ಈ ಸಿನಿಮಾಕ್ಕೆ IMDB ನಲ್ಲಿ 8.3. ರೇಟಿಂಗ್ ದೊರೆತಿದೆ ಎಂದರೆ ಸುಳ್ಳಲ್ಲ.

Leave a Comment