Lakshmi Nivasa: ಕಮಲಿ ಹಿಂದೆ ಬಿದ್ದ ಸಿದ್ಧೇಗೌಡ್ರು, ಲಕ್ಷ್ಮೀ ನಿವಾಸದ ಲವರ್ ಬಾಯ್ ಬಗ್ಗೆ ಆಸಕ್ತಿಕರ ಮಾಹಿತಿ ಇಲ್ಲಿದೆ

Written by Soma Shekar

Published on:

---Join Our Channel---

Lakshmi Nivasa: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಾ ಟಾಪ್ ಸೀರಿಯಲ್ ಗಳಲ್ಲಿ ಸ್ಥಾನವನ್ನು ಪಡೆದುಕೊಂಡಿರೋ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡುತ್ತಿದೆ. ಈಗಾಗಲೇ ನಂಬರ್ ಒನ್ ಸ್ಥಾನದಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಭರ್ಜರಿ ಪೈಪೋಟಿಯನ್ನು ಲಕ್ಷ್ಮೀ ನಿವಾಸ ನೀಡುತ್ತಿದ್ದು, ಈ ವಾರ ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಜೊತೆಗೆ ನಂಬರ್ ವನ್ ಸ್ಥಾನವನ್ನು ಲಕ್ಷ್ಮಿ ನಿವಾಸ ಸೀರಿಯಲ್ ಕೂಡಾ ಹಂಚಿಕೊಂಡಿರುವುದು ಬಹಳ ವಿಶೇಷವಾಗಿದೆ.

ಈ ಸೀರಿಯಲ್ ನ ಪ್ರತಿಯೊಂದು ಪಾತ್ರವೂ ಕೂಡಾ ಬಹಳ ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆದಿದ್ದು, ಅಂತಹ ಪಾತ್ರಗಳಲ್ಲಿ ಪ್ರೇಕ್ಷಕರ ವಿಶೇಷ ಗಮನವನ್ನು ಸೆಳೆದಿರುವ ಒಂದು ಪಾತ್ರ ಸಿದ್ದೇಗೌಡ್ರ (Siddegowdru) ಪಾತ್ರವಾಗಿದೆ. ಗ್ರಾಮೀಣ ಶೈಲಿಯಲ್ಲಿ ಮಾತನಾಡೋ ಸಿದ್ದೇಗೌಡರ ಪಾತ್ರ ಜನರ ಅಪಾರವಾದ ಮೆಚ್ಚುಗೆಯನ್ನ ಪಡೆದುಕೊಂಡಿದೆ. ರಾಜಕಾರಣಿಯ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರೋ, ಸಿದ್ದೇಗೌಡ್ರ ಪಾತ್ರ ಒಂದು ಕಡೆ ಸೀರಿಯಸ್ ಆಗಿ ಮತ್ತೊಂದು ಕಡೆ ಲವರ್ ಬಾಯ್ ಆಗಿ ಮನರಂಜನೆಯನ್ನು ನೀಡುತ್ತಿದೆ.

ಸಿದ್ದೇಗೌಡ್ರ ಪಾತ್ರದ ಮೂಲಕ ಮನೆ ಮನೆ ಮಾತಾಗಿರುವ ನಟನ ಹೆಸರು ಧನಂಜಯ್ (Dhananjay) ಆಗಿದ್ದು, ತಮ್ಮ ಅದ್ಭುತವಾದ ನಟನೆ ಮತ್ತು ಮಾತನಾಡುವ ಶೈಲಿಯ ಮೂಲಕವೇ ಪ್ರೇಕ್ಷಕರ ಮೇಲೆ ಭರ್ಜರಿ ಮೋಡಿಯನ್ನು ಮಾಡುತ್ತಿದ್ದಾರೆ. ಧನಂಜಯ್ ಅವರು ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಯನ್ನು ನೀಡಿದ್ದಾರೆ. ಆದರೆ ಧನಂಜಯ್ ಅವರಿಗೆ ನಟನೆ ಅನ್ನೋದು ಅವರಿಗೆ ಖಂಡಿತ ಹೊಸತಲ್ಲ.

ಧನಂಜಯ್ ಅವರು ನಟ ಮಾತ್ರವೇ ಅಲ್ಲದೇ ಡಬ್ಬಿಂಗ್ ಆರ್ಟಿಸ್ಟ್ ಕೂಡಾ ಆಗಿ ಕೆಲಸವನ್ನು ಮಾಡಿದ್ದಾರೆ ಅನ್ನೋದು ವಿಶೇಷ. ಈಗಾಗಲೇ ಅವರು ಜಿಲ್ ಜಿಲ್, ವಾಸಂತಿ ನಲಿದಾಗ, ತಗ್ಸ್ ಆಫ್ ರಾಮಘಡ, ಖಾಸಗಿ ಪುಟಗಳು ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಲಕ್ಷ್ಮೀ ನಿವಾಸ ಧಾರಾವಾಹಿಯ ಸಿದ್ದೇಗೌಡ್ರ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರೋ ಧನಂಜಯ್ ಅವರ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ಪೇಜ್ ಗಳು ಆರಂಭವಾಗಿದೆ.

Leave a Comment