Actress Urvashi: ಗಂಡನಿಂದಲೇ ಕುಡಿತದ ಚಟಕ್ಕೆ ಒಳಗಾದ್ರಾ ಊರ್ವಶಿ; ನಟಿ ಬಹಿರಂಗಪಡಿಸಿದ ಶಾಕಿಂಗ್ ಸತ್ಯ

Written by Soma Shekar

Published on:

---Join Our Channel---

Actress Urvashi : ಚತುರ್ಭಾಷಾ ತಾರೆಯಾಗಿ ದೊಡ್ಡ ಹೆಸರನ್ನು ಮಾಡಿರುವ ಒಂದು ಕಾಲದ ಸ್ಟಾರ್ ನಟಿ ಆಗಿದ್ದವರು ನಟಿ ಊರ್ವಶಿ (Actress Urvashi). ವೃತ್ತಿ ಜೀವನದಲ್ಲಿ ವೈವಿದ್ಯಮಯ ಪಾತ್ರಗಳಿಗೆ ಜೀವ ತುಂಬಿದ ನಟಿ ಊರ್ವಶಿ ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಪೋಷಕ ನಟಿಯಾಗಿ, ಹಾಸ್ಯ ನಟಿಯಾಗಿ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಈಗ ನಟಿಯ ವೈಯಕ್ತಿಕ ಜೀವನದ ಒಂದು ವಿಚಾರ ಸುದ್ದಿಯಾಗಿ ವೈರಲ್ ಆಗಿದೆ ಹಾಗೂ ಇದನ್ನು ಕೇಳಿ ಅನೇಕರು ಅಚ್ಚರಿಯನ್ನು ಸಹಾ ವ್ಯಕ್ತಪಡಿಸಿದ್ದಾರೆ.

ಊರ್ವಶಿ ಅವರು 2000 ರಲ್ಲಿ ಮಲೆಯಾಳಂನ (Malayalam) ಜನಪ್ರಿಯ ನಟ ಮನೋಜ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಆದರೆ ಈ ಮದುವೆಗೆ ಕಾರಣವೇ ಕುಡಿತದ ಚಟ ಎನ್ನುವ ಮಾತೊಂದನ್ನು ನಟಿ ಹೇಳಿದ್ದಾರೆ. ನಟಿ ಊರ್ವಶಿ ಅವರ ಕುಡಿತದ ಚಟದಿಂದಾಗಿಯೇ ಪತಿಯ ಜೊತೆಗೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದ್ದು, ಇದರಿಂದಲೇ ಮನೋಜ್ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದರಂತೆ.

2009 ರಲ್ಲಿ ನಟಿಗೆ ವಿಚ್ಚೇದನ (Divorce) ಆಯ್ತು. ಅದಾದ ನಂತರ ನಟಿ ಮತ್ತೆ ಸಿನಿಮಾಗಳ ಕಡೆಗೆ ಗಮನವನ್ನು ಹರಿಸಿದರು. ಆ ವೇಳೆಗೆ ನಟಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ನಂತರ 2013 ರಲ್ಲಿ ನಟಿ ಶಿವಪ್ರಸಾದ್ ಎನ್ನುವವರ ಜೊತೆಗೆ ಎರಡನೇ ಮದುವೆಯಾದರು. ಈ ದಂಪತಿಗೆ ಒಬ್ಬ ಗಂಡು ಮಗನಿದ್ದಾನೆ. ನಟಿ ಖಾಸಗಿ ಜೀವನದಲ್ಲಿ ಸಮಸ್ಯೆಗಳಿದ್ದರೂ ಸಹಾ ಅದನ್ನೆಲ್ಲಾ ಮರೆತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಊರ್ವಶಿ ಅವರು, ನಾನು ಮನೋಜ್ ದೂರಾಗೋದಕ್ಕೆ ಒಂದೇ ಒಂದು ಕಾರಣ ಅಂದ್ರೆ ಅದು ಕುಡಿತವಾಗಿತ್ತು. ಅವರ ಮನೆಯಲ್ಲಿ ಎಲ್ಲರೂ ಮದ್ಯ ಸೇವನೆಯನ್ನ ಮಾಡ್ತಾ ಇದ್ದರು. ಅವರು ನನಗೂ ಸಹಾ ಕುಡಿ ಅಂತ ಬಲವಂತವನ್ನು ಮಾಡ್ತಾ ಇದ್ದರು. ಇದ್ರಿಂದ ಪ್ರತಿದಿನ ನಾನು ಕುಡಿದು ಆ ಚಟಕ್ಕೆ ದಾಸಿ ಆಗಿದ್ದೆ ಅನ್ನೋ ಮಾತನ್ನು ಹೇಳಿದ್ದಾರೆ. ಊರ್ವಶಿ ಅವರು ಹೇಳಿದ ಈ ವಿಚಾರಗಳೀಗೆ ಸುದ್ದಿಯಾಗಿದೆ.

Leave a Comment