Bollywood Actress: ಬಹಳಷ್ಟು ಜನ ಸಿನಿಮಾ ನಟಿಯರು ತಮ್ಮ ಮಾತೃಭಾಷೆಯ ಹೊರತಾಗಿ ಅನ್ಯ ಭಾಷೆಗಳಲ್ಲೂ ನಟಿಸುತ್ತಾರೆ. ಕೆಲವು ನಟಿಯರಿಗೆ ತಮ್ಮದೇ ಭಾಷೆಯಲ್ಲಿ ಸಿಗದ ಯಶಸ್ಸು ಅನ್ಯ ಭಾಷೆಯ ಸಿನಿಮಾಗಳಲ್ಲಿ ಸಿಗುವುದು ಸಹಾ ಸಾಮಾನ್ಯವಾದ ವಿಚಾರವೇ ಆಗಿದೆ. ಅದರಲ್ಲೂ ಬಾಲಿವುಡ್ ನಲ್ಲಿ ಸಿನಿಮಾ ಮಾಡಿದ್ದರೂ ಹೆಚ್ಚು ಯಶಸ್ಸು ಸಿಗದ ಅದೆಷ್ಟೋ ನಟಿಯರಿಗೆ ಸೌತ್ ಸಿನಿಮಾ ಇಂಡಸ್ಟ್ರಿ ಪ್ರೀತಿಯ ಆಹ್ವಾನವನ್ನು ನೀಡಿದೆ ಮತ್ತು ಹಲವು ನಟಿಯರು ಇಲ್ಲಿ ಸ್ಟಾರ್ ಗಳಾಗಿದ್ದಾರೆ.
ಹೀಗೆ ಬಾಲಿವುಡ್ ನಿಂದ (Bollywood Actress) ಸೀತಾರಾಮಂ ಸಿನಿಮಾ ಮೂಲಕ ದಕ್ಷಿಣ ಸಿನಿಮಾ ರಂಗಕ್ಕೆ ಎಂಟ್ರಿಯನ್ನು ಕೊಟ್ಟವರು ನಟಿ ಮೃಣಾಲ್ ಠಾಕೂರ್ (Mrunal Thakur). ಮೊದಲ ಸಿನಿಮಾ ಮೂಲಕವೇ ತೆಲುಗು ಸಿನಿ ಪ್ರೇಮಿಗಳ ಮನಸ್ಸಿಗೆ ಲಗ್ಗೆ ಇಟ್ಟ ನಟಿ ಈಗಾಗಲೇ ಬಹಳಷ್ಟು ಜನರಿಗೆ ಅಚ್ಚು ಮೆಚ್ಚಿನ ನಟಿಯಾಗಿದ್ದಾರೆ. ಹಿಂದಿ ಕಿರುತೆರೆಯಲ್ಲಿ ನಟಿಯಾಗಿ, ಅನಂತರ ಸಿನಿಮಾಗಳಿಗೆ ಎಂಟ್ರಿ ನೀಡಿದ ಮೃಣಾಲ್ ಠಾಕೂರ್ ದಕ್ಷಿಣದಲ್ಲಿ ನಟಿಸಿರುವುದು ಮೂರು ಸಿನಿಮಾಗಳಲ್ಲಿ ಮಾತ್ರ.
ಅವರ ಮೂರನೇ ಸಿನಿಮಾ ಫ್ಯಾಮಿಲಿ ಸ್ಟಾರ್ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಆದ ಎರಡೇ ಸಿನಿಮಾಗಳ ಮೂಲಕ ಟಾಲಿವುಡ್ ನಲ್ಲಿ ಮೃಣಾಲ್ ಸ್ಟಾರ್ ನಟಿಯರ ಸಾಲಿಗೆ ಸೇರಿದ್ದಾರೆ. ಬಾಲಿವುಡ್ ನಲ್ಲಿ ಸಿಗದ ಮನ್ನಣೆ ನಟಿಗೆ ಇಲ್ಲಿ ಸಿಕ್ಕಿದೆ. ಇತ್ತೀಚಿಗೆ ನಟಿ ಫ್ಯಾಮಿಲಿ ಸ್ಟಾರ್ (Family Star) ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಭಾಗಿಯಾಗಿದ್ದ ವೇಳೆಯಲ್ಲಿ ತೆಲುಗಿನ ಸಿನಿಮಾ ಪ್ರೇಕ್ಷಕರಿಗೆ ಶಿರಭಾಗಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ ನಟಿ.
ನಟಿ ಮಾತನಾಡುತ್ತಾ, ತನ್ನನ್ನು ‘ತೆಲುಗು ಹುಡುಗಿಯನ್ನಾಗಿ ಮಾಡಿದ್ದಕ್ಕೆ ತೆಲುಗು ಪ್ರೇಕ್ಷಕರಿಗೆ ತಲೆ ಬಾಗಿ ಧನ್ಯವಾದಗಳನ್ನು ಹೇಳಿದ್ದಾರೆ. ನಟಿಯ ಇಂತಹುದೊಂದು ಕೃತಜ್ಞತೆ ಸಲ್ಲಿಸಿದ ರೀತಿ ಈಗ ಕೇವಲ ತೆಲುಗು ಜನರು ಮಾತ್ರವೇ ಅಲ್ಲದೇ ಎಲ್ಲರ ಮನಸನ್ನು ಗೆದ್ದಿದೆ. ತನಗೆ ಅವಕಾಶ ಕೊಟ್ಟು ಬೆಳೆಸಿದ ಭಾಷೆಯ ಇಂಡಸ್ಟ್ರಿ ಅಲ್ಲಿನ ಜನರಿಗೆ ನಟಿ ಗೌರವ ತೋರಿಸಿದ ರೀತಿ ಸಾಕಷ್ಟು ಮೆಚ್ಚುಗೆ ಪಡೆದಿದೆ.
ದುಲ್ಕರ್ ಸಲ್ಮಾನ್ ಜೊತೆಯಲ್ಲಿ ಮೃಣಾಲ್ ಠಾಕೂರ್ ಸೀತಾರಾಮಂ (Sita Ramam) ಸಿನಿಮಾದಲ್ಲಿ ಕಾಣಿಸಿಕೊಂಡ ಮೇಲೆ ನಟಿಗೆ ಒಂದರ ನಂತರ ಮತ್ತೊಂದು ಅವಕಾಶಗಳು ಅರಸಿ ಬರುತ್ತಿವೆ. ಸೀತಾರಾಮಂನ ಸೀತಾ ಮಹಾಲಕ್ಷ್ಮಿ ಪಾತ್ರಕ್ಕೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದರು. ಇಂದಿಗೂ ನಟಿಯನ್ನು ಸೀತಾ ಮಹಾಲಕ್ಷ್ಮಿ ಪಾತ್ರದ ಮೂಲಕವೇ ಪ್ರೇಕ್ಷಕರು ಗುರ್ತಿಸುತ್ತಿದ್ದಾರೆ.