Bollywood Actress: ಮಾಜಿ ಮಿಸ್ ಯೂನಿವರ್ಸ್, ಸೆಲೆಬ್ರಿಟಿಗಳ ಜೊತೆ ಡೇಟಿಂಗ್, ಈಗ ರಾಮಾಯಣದಲ್ಲಿ ಪಾತ್ರ, ಯಾರೀ ನಟಿ ?

Written by Soma Shekar

Published on:

---Join Our Channel---

Bollywood Actress: ಭಾರತದಿಂದ ಮಿಸ್ ವರ್ಲ್ಡ್ ಪಟ್ಟವನ್ನು ಬಹಳಷ್ಟು ಜನರು ಗೆದ್ದಿರುವರಾದರೂ, ಮಿಸ್ ಯೂನಿವರ್ಸ್ (Miss Universe) ಕಿರೀಟವನ್ನು ಇದುವರೆಗೂ ಕೇವಲ ಮೂರು ಜನ ಮಾತ್ರ ಗೆದ್ದಿದ್ದಾರೆ. ಸುಷ್ಮಿತಾ ಸೇನ್ (Sushmita Sen), ಲಾರಾ ದತ್ತಾ (Lara Dutta) ಮತ್ತು ಹರ್ನಾಜ್ ಸಂದು (Harnaz Sandhu) ಈ ಮೂವರು ಮಾತ್ರವೇ ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದವರು. ಇವರಲ್ಲಿ ಸುಷ್ಮಿತಾ ಸೇನ್ ಮತ್ತು ಲಾರಾ ದತ್ತಾ ಬಾಲಿವುಡ್ ನಲ್ಲಿ ನಟಿಯರಾಗಿ ಹೆಸರನ್ನು ಮಾಡಿದ್ದಾರೆ. ನಟಿ ಲಾರಾದತ್ತಾ ಅಂದಾಜ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿಯನ್ನು ನೀಡಿದರು.

ಮೊದಲ ಸಿನಿಮಾದಲ್ಲಿನ ಅಭಿನಯಕ್ಕಾಗಿ ಪ್ರಶಸ್ತಿಯನ್ನು ಸಹಾ ಪಡೆದುಕೊಂಡವರು ಲಾರಾ ದತ್ತಾ. ಅನಂತರ ಬಾಲಿವುಡ್ ನ ಸ್ಟಾರ್ ಗಳ ಜೊತೆಗೆ ನಟಿ ತೆರೆಯನ್ನು ಹಂಚಿಕೊಂಡರಾದರೂ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುವುದು ಸಾಧ್ಯವಾಗಲಿಲ್ಲ. ಬಾಲಿವುಡ್ ಮಾತ್ರವೇ ಅಲ್ಲದೇ ನಟಿಯು ಬೇರೆ ಬೇರೆ ಭಾಷೆಗಳಲ್ಲೂ ಸಹಾ ನಟಿಸಿದ್ದಾರೆ‌.

ವೃತ್ತಿ ಜೀವನದಲ್ಲಿ ನಟಿ ಸಕ್ರಿಯರಾಗಿದ್ದ ದಿನಗಳಲ್ಲಿ ಅವರ ಹೆಸರು ನಟ ಕೆಲ್ಲಿ ದೋರ್ಜಿ, ಬಾಲಿವುಡ್ ನಟ ಡಿನೋ ಮೊರಿಯಾ ಮತ್ತು ಅಮೆರಿಕನ್ ಬೇಸ್ ಬಾಲ್ ಆಟಗಾರ ಡೆರಿಕ್ ಜೆಟರ್ ನೊಂದಿಗೆ ತಳಕು ಹಾಕಿಕೊಂಡಿತ್ತು. ನಟಿಯು ಇವರ ಜೊತೆಗೆ ಕೆಲವು ವರ್ಷಗಳ ಡೇಟಿಂಗ್ ಮಾಡಿ ಅನಂತರ ಬ್ರೇಕಪ್ ಮಾಡಿಕೊಂಡಿದ್ದರು.

ಕೊನೆಗೆ ಎಲ್ಲಾ ಡೇಟಿಂಗ್ ಸುದ್ದಿಗಳಿಗೆ ಪೂರ್ಣ ವಿರಾಮವನ್ನು ಹಾಕಿದ ನಟಿ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು, ಈಗ ಒಂದು ಮಗುವಿನ ತಾಯಿಯಾಗಿದ್ದಾರೆ ಲಾರಾ ದತ್ತಾ. ಪ್ರಸ್ತುತ ಸಿನಿಮಾಗಳಲ್ಲಿ ನಟಿಸುತ್ತಿರುವ ಇವರ ಹೆಸರು ಈಗ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ (Ramayana) ಸಿನಿಮಾದಲ್ಲಿ ಕೇಳಿ ಬಂದಿದೆ. ಈ ಸಿನಿಮಾದಲ್ಲಿ ಲಾರಾ ಕೈಕೇಯಿ ಪಾತ್ರವನ್ನ ಮಾಡಲಿದ್ದಾರೆ ಎನ್ನಲಾಗಿದೆ.

Leave a Comment