Bollywood Actress: ಅಪ್ಪು ಜೊತೆ ಹೀರೋಯಿನ್ ಆಗಿದ್ದ ನಟಿ 8 ವರ್ಷಗಳ ನಂತರ ಮತ್ತೆ ಸಿನಿಮಾಕ್ಕೆ ಕಮ್ ಬ್ಯಾಕ್

Written by Soma Shekar

Published on:

---Join Our Channel---

Bollywood Actress : ಮುಂಬೈ ಮೂಲಕ ನಟಿ ಅನಿತಾ ಹಸ್ ನಂದಾನಿ (Anita Hassnandani) ಬಾಲಿವುಡ್ ಸಿನಿಮಾ ಮತ್ತು ಸೀರಿಯಲ್ ಗಳಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಟಿ. ಹಿಂದಿಯ ನಾಗಿನ್ ಸೀರಿಯಲ್ ನಲ್ಲಿ ನೆಗೆಟಿವ್ ರೋಲ್ ನ ನಾಗಿಣಿಯಾಗಿ ಎರಡು ಸೀಸನ್ ಗಳಲ್ಲಿ ಮಿಂಚಿದ್ದ ಅನಿತಾ ದಕ್ಷಿಣದಲ್ಲೂ ಕೂಡಾ ಹೆಸರನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ (Bollywood Actress). ಅದರಲ್ಲೂ ಟಾಲಿವುಡ್ ನಲ್ಲಿ ಅನಿತಾ ಸಿನಿ ಪ್ರೇಮಿಗಳಿಗೆ ಸಾಕಷ್ಟು ಚಿರಪರಿಚಿತ ನಟಿಯಾಗಿದ್ದಾರೆ ಅನ್ನೋದ್ರಲ್ಲಿ ಖಂಡಿತ ಎರಡು ಮಾತಿಲ್ಲ.

ಬಾಲಿವುಡ್ ನ ತಾಲ್ ಸಿನಿಮಾದ ಹಾಡೊಂದರ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ನೀಡಿದ ಅನಿತಾ, ತೆಲುಗಿನಲ್ಲಿ ನುವ್ವು ನೇನು (Nuvvu Nenu) ಸಿನಿಮಾ ಮೂಲಕ ನಾಯಕಿಯಾಗಿ ಕಾಣಿಸಿಕೊಂಡರು. ಕನ್ನಡದಲ್ಲಿ ಸಹಾ ಈ ನಟಿ ನಟಿಸಿದ್ದಾರೆ. ವೀರ ಕನ್ನಡಿಗ ಸಿನಿಮಾದಲ್ಲಿ ಅನಿತಾ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅನಿತಾ ಅವರಿಗೆ ನುವ್ವು ನೇನು ಸಿನಿಮಾ ದೊಡ್ಡ ಬ್ರೇಕ್ ಅನ್ನು ನೀಡಿತ್ತು. ಅಲ್ಲಿಂದ ಶುರುವಾದ ಅವರ ಸಿನಿ ಜರ್ನಿ 25 ವರ್ಷ ಮುಗಿಸಿದೆ.

ವೀರ ಕನ್ನಡಿಗ ನಂತರ ಅನಿತಾ ಗಂಡುಗಲಿ ಕುಮಾರರಾಮ ಮತ್ತು ಹುಡುಗ ಹುಡುಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ನಟಿ ಸ್ಯಾಂಡಲ್ವುಡ್ ನಲ್ಲಿ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.‌ ರೋಹಿತ್ ರೆಡ್ಡಿ ಜೊತೆಗೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟ ನಂತರ ನಟಿ ಕುಟುಂಬ, ಮಗುವಿನ ಆರೈಕೆ ಎಂದು ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿ ಸಿನಿಮಾ ಮತ್ತು ಕಿರುತೆರೆಯಿಂದ ದೂರವೇ ಉಳಿದಿದ್ದರು.

2016 ರಲ್ಲಿ ತೆಲುಗಿನ ಮನಲೋ ಒಕ್ಕಡು ದಕ್ಷಿಣದಲ್ಲಿ ಅನಿತಾ ನಟಿಸಿದ ಕೊನೆಯ ಸಿನಿಮಾ ಆಗಿತ್ತು. ಈಗ ಬರೋಬ್ಬರಿ 8 ವರ್ಷಗಳ ನಂತರ ನಟಿ ಮತ್ತೆ ಕಮ್ ಬ್ಯಾಕ್ ಮಾಡಲು ಸಿದ್ಧತೆಗಳನ್ನು ನಡೆಸಿದ್ದಾರೆ. ತೆಲುಗಿನಲ್ಲಿ ನಟ ಸುಹಾಸ್ ಅವರ ಹೊಸ ಸಿನಿಮಾದಲ್ಲೊಂದು ಪ್ರಮುಖ ಪಾತ್ರವನ್ನು ಅನಿತಾ ಹಸ್ ನಂದಾನಿ ನಿಭಾಯಿಸುತ್ತಾರೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ. ವಯಸ್ಸು 43 ಆದರೂ ಅನಿತಾ ಯುವ ನಟಿಯರನ್ನು ನಾಚಿಸುವಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.

Leave a Comment