Rakshak Bullet: ಮೊದಲ ಸಿನಿಮಾದಲ್ಲೇ ಮಾಸ್ ಆಗಿ ಮಚ್ಚು ಹಿಡಿಯಲಿದ್ದಾರೆ ರಕ್ಷಕ್ ಬುಲೆಟ್; ಪೋಸ್ಟರ್ ರಿಲೀಸ್

Written by Soma Shekar

Published on:

---Join Our Channel---

Rakshak Bullet: ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ (Bigg Boss Kannada 10) ಸ್ಪರ್ಧಿಯಾಗಿ ಗಮನ ಸೆಳೆದಿದ್ದ ರಕ್ಷಕ್ ಬುಲೆಟ್ ಅವರು ಈ ಹಿಂದೆ ಗುರುಶಿಷ್ಯರು ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡಿದ್ದರು. ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಹೊಸ ಅಧ್ಯಾಯವನ್ನು ಆರಂಭಿಸಲು ರಕ್ಷಕ್ ಸಜ್ಜಾಗಿದ್ದಾರೆ. ರಕ್ಷಕ್ ಬುಲೆಟ್ ಸ್ಯಾಂಡಲ್ವುಡ್ ನಲ್ಲಿ ಹೀರೋ ಆಗಿ ಲಾಂಚ್ ಆಗಲಿದ್ದು, ಅವರ ಹೊಸ ಸಿನಿಮಾ ಘೋಷಣೆ ಆಗಿದೆ.

ರಕ್ಷಕ್ ಬುಲೆಟ್ (Rakshak Bullet) ಅವರು ತಾವು ನಾಯಕನಾಗುತ್ತಿರುವ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶೇರ್ ಮಾಡಿಕೊಂಡಿದ್ದು ಅದನ್ನು ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ರಕ್ಷಕ್ ತಮ್ಮ ಪೋಸ್ಟ್ ನಲ್ಲಿ, ಬುಲೆಟ್’ ಪ್ರಕಾಶ್ (Bullet Prakash) ಅವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು.

ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡಾ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕೂ ಹರಸಿ, ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆಂದು ರಕ್ಷಕ್ ತಮ್ಮ ಪೋಸ್ಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಹೊಸ ಸಿನಿಮಾದಲ್ಲಿ ರಕ್ಷಕ್ ಮಾಸ್ ಆಗಿ ಕಾಣಿಸಿಕೊಳ್ತಾರೆ ಅನ್ನೋದು ಪೋಸ್ಟ್ ನಲ್ಲಿರೋ ಡೈಲಾಗ್ ಗಳ ಮೂಲಕ ಗೊತ್ತಾಗ್ತಿದೆ.

ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದುನ್ನೆ. ‘ಬುಲೆಟ್… ಇನ್ಮುಂದೆ ನಂದೆ ರೌಂಡು, ನನ್ನದೇ ಸೌಂಡು ಎಂಬ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಇನ್ನು ಸಿನಿಮಾದಲ್ಲಿ ರಕ್ಷಕ್ ಲುಕ್ ಮತ್ತು ಪಾತ್ರದ ಬಗ್ಗೆ ತಿಳಿಯಲು ಅವರ ಅಭಿಮಾನಿಗಳು ಈಗ ಕುತೂಹಲದಿಂದ ಕಾಯುತ್ತಿದ್ದಾರೆ.

Leave a Comment