Namratha Gowda: ಬಿಗ್ ಬಾಸ್ ಸ್ನೇಹಿತರ ಜೊತೆಗೆ ಬರ್ತಡೇ ಸಂಭ್ರಮಿಸಿದ ನಮ್ರತಾ ಗೌಡ ಫೋಟೋಗಳು

Written by Soma Shekar

Published on:

---Join Our Channel---

Namratha Gowda: ನಾಗಿಣಿ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda), ಬಿಗ್ ಬಾಸ್ ನಂತರ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರೋ ನಮ್ರತಾ ಅವ್ರನ್ನ ಫಾಲೋ ಮಾಡೋರ ಸಂಖ್ಯೆ ಮಿಲಿಯನ್ ನಲ್ಲಿ ಇದೆ ಅಂದ್ರೆ ಸುಳ್ಳಲ್ಲ. ತಮ್ಮ ಡ್ಯಾನ್ಸ್ ವೀಡಿಯೋಗಳ ಮೂಲಕ ನಟಿ ಧೂಳೆಬ್ಬಿಸಿ, ಡ್ಯಾನ್ಸ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡ್ತಾ, ಅವರ ಮನಸ್ಸುಗಳನ್ನು ಗೆದ್ಧಿದ್ದಾರೆ.

ನಿನ್ನೆಯಷ್ಟೇ ನಟಿ ತಮ್ಮ ಜನ್ಮದಿನವನ್ನು (Birthday) ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದಾರೆ. ಜನ್ಮದಿನದಂದು ನಟಿ ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈಗ ನಟಿಯ ಹುಟ್ಟು ಹಬ್ಬದ ಸೆಲೆಬ್ರೇಷನ್ ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಮ್ರತಾ ತಮ್ಮ ಜನ್ಮದಿನವನ್ನು ತಮ್ಮ ಆಪ್ತರು, ಬಿಗ್ ಬಾಸ್ ಸ್ನೇಹಿತರ ಜೊತೆಗೆ ಖುಷಿಯಿಂದ ಸಂಭ್ರಮಿಸಿದ್ದಾರೆ. ಜನ್ಮದಿನದ ಸಂಭ್ರಮದಲ್ಲಿ ವಿನಯ್ ಗೌಡ, ಇಶಾನಿ, ಕಾರ್ತಿಕ್, ಮೈಕಲ್, ಕಿಶನ್ ಬಿಳಗಲಿ, ಅನುಪಮಾ, ನಿರಂಜನ್ ದೇಶಪಾಂಡೆ, ಕವಿತಾ ಗೌಡ, ಪವಿ ಪೂವಪ್ಪ, ನೇಹಾ ಗೌಡ ಇನ್ನೂ ಮುಂತಾದವರು ಭಾಗಿಯಾಗಿ ನಮ್ರತಾಗೆ ವಿಶ್ ಮಾಡಿದ್ದಾರೆ.

ನಮ್ರತಾ ಅವರ ಜನ್ಮದಿನದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ನೋಡಿದ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ. ನಟಿಯ ಇನ್ಸ್ಟಾಗ್ರಾಂ ನಲ್ಲೂ ಅನೇಕರು ಕಾಮೆಂಟ್ ಗಳನ್ನು ಮಾಡಿ ನಟಿ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.

ಬಿಗ್ ಬಾಸ್ (Bigg Boss) ನಂತರ ನಟಿ ಆಭರಣ ಜಾಹೀರಾತೊಂದರಲ್ಲಿ ಕಾರ್ತಿಕ್ ಮಹೇಶ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಮುಂದೆ ನಟಿ ಸಿನಿಮಾ ಅಥವಾ ಸೀರಿಯಲ್ ಯಾವ ಹೊಸ ಪ್ರಾಜೆಕ್ಟ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ ಅವರ ಅಭಿಮಾನಿಗಳು.

Leave a Comment