Deepika Das: ಟರ್ಕಿಯಲ್ಲಿ ಹನಿಮೂನ್ ಮೂಡ್ ನಲ್ಲಿ ದೀಪಿಕಾ ದಾಸ್; ಸುಂದರ ಫೋಟೋಗಳನ್ನು ಶೇರ್ ಮಾಡಿದ ನಟಿ

Written by Soma Shekar

Published on:

---Join Our Channel---

Deepika Das: ನಾಗಿಣಿ (Nagini) ಖ್ಯಾತಿಯ ಕಿರುತೆರೆಯ ನಟಿ, ಬಿಗ್ ಬಾಸ್ ಮೂಲಕ ಸಿಕ್ಕಾಪಟ್ಟೆ ಸದ್ದು ಸುದ್ದಿಯನ್ನು ಮಾಡಿದ ನಟಿ ದೀಪಿಕಾ ದಾಸ್ ಅವರು ದೀಪಕ್ ಎನ್ನುವವರ ಜೊತೆಗೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡು ಅದರ ಫೋಟೋಗಳನ್ನು ಶೇರ್ ಮಾಡಿಕೊಂಡಾಗ ಎಲ್ಲರೂ ಅಚ್ಚರಿಯನ್ನು ಪಟ್ಟಿದ್ದರು. ಅನಂತರ ಅದ್ದೂರಿಯಾಗಿ ಆರತಕ್ಷತೆಯನ್ನು ಮಾಡಿ ಆಪ್ತರಿಗೆ ಆಹ್ವಾನವನ್ನು ನೀಡಿ ಸಂಭ್ರಮಿಸಿದ್ದರು ದೀಪಿಕಾ ದಾಸ್.

ದೀಪಿಕಾ ದಾಸ್ (Deepika Das) ಅವರು ಮದುವೆ ನಂತರ ಇದೀಗ ಹನಿಮೂನ್ ಮೂಡ್ ನಲ್ಲಿದ್ದಾರೆ. ಪತಿಯೊಡನೆ ನಟಿ ವಿದೇಶ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಅಂದವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ದೀಪಿಕಾ ದಾಸ್ ಅವರು ತಮ್ಮ ಪತಿಯೊಡನೆ ಸಂತೋಷದಿಂದ ದಿನಗಳನ್ನು ಕಳೆಯುತ್ತಿದ್ದು, ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಖುಷಿಯನ್ನು ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ. ನಟಿಯ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಹನಿಮೂನ್ ಗಾಗಿ ನಟಿಯು ಪತಿಯೊಡನೆ ಟರ್ಕಿ ದೇಶಕ್ಕೆ ಹಾರಿದ್ದು, ಅಲ್ಲಿನ ಸುಂದರವಾದ ತಾಣಗಳಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದು, ಆ ಅಂದವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೆಲವು ಸೀರಿಯಲ್ ಗಳಲ್ಲಿ ನಟಿಸಿರುವ ನಟಿ, ಸಿನಿಮಾದಲ್ಲೂ ನಟಿಸಿದ್ದಾರೆ. ಬಿಗ್ ಬಾಸ್ ನಂತರ ನಟಿಯು ನಟನೆಯಿಂದ ದೂರ ಉಳಿದಿದ್ದರೂ, ಸೋಶಿಯಲ್ ಮೀಡಿಯಾಗಳಲ್ಲಿ ಅವರು ಸಾಕಷ್ಟು ಸಕ್ರಿಯವಾಗಿದ್ದಾರೆ.

Leave a Comment