Sapthami Gowda: ಕಾಂತಾರಾ ಚಾಪ್ಟರ್ 1 ನಲ್ಲಿ ಸಪ್ತಮಿ ಗೌಡ? ಸ್ವತಃ ನಟಿ ಕೊಟ್ಟ ಶಾಕಿಂಗ್ ಪ್ರತಿಕ್ರಿಯೆಗೆ ಫ್ಯಾನ್ಸ್ ತಬ್ಬಿಬ್ಬು

Written by Soma Shekar

Published on:

---Join Our Channel---

Sapthami Gowda: ಸ್ಯಾಂಡಲ್ವುಡ್ ನಟಿ ಸಪ್ತಮಿ ಗೌಡ (Sapthami Gowda) ಅವರು ಕಾಂತಾರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವನ್ನು ಸಾಧಿಸಿತ್ತು. ಈ ಸಿನಿಮಾದ ಮೂಲಕ ಸಪ್ತಮಿ ಗೌಡ ಅವರ ಜನಪ್ರಿಯತೆ ಕೂಡಾ ಹೆಚ್ಚಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಟಿ ಗುರುತಿಸಲ್ಪಟ್ಟರು. ಈಗ ಕಾಂತರಾ ಚಾಪ್ಟರ್ 1 (Kantara Chapter 1) ಸಿನಿಮಾ ಸೆಟ್ಟೇರಲು ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ಈ ಚಿತ್ರದಲ್ಲಿ ರಿಷಿಬ್ ಶೆಟ್ಟಿಯವರು ನಾಯಕನಾಗಿದ್ದಾರೆ ಅನ್ನೋದು ಖಚಿತವಾಗಿದೆ.

ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನೂ ರಿಷಬ್ ಶೆಟ್ಟಿ (Rishab Shetty) ಅವರೇ ವಹಿಸಿಕೊಂಡಿದ್ದಾರೆ. ಇನ್ನುಳಿದಂತೆ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದುವರೆಗೂ ರಿವಿಲ್ ಆಗಿಲ್ಲ. ಕಾಂತಾರ ಸಿನಿಮಾದಲ್ಲಿ ನಾಯಕಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅವರು ನಟಿಸಿದ್ದರು. ಆದ್ದರಿಂದಲೇ ಅನೇಕರು ಬಹುಶಃ ಕಾಂತಾರಾ ಚಾಪ್ಟರ್ ಒನ್ ನಲ್ಲಿಯೂ ಸಪ್ತಮಿ ನಟಿಸ್ತಾರೆ ಅನ್ನೋ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಈ ವಿಚಾರಕ್ಕೆ ಸಪ್ತಮಿ ಗೌಡ ಅವ್ರೇ ಸ್ಪಷ್ಟನೆಯನ್ನು ನೀಡಿದ್ದಾರೆ.

ಇತ್ತೀಚಿಗಷ್ಟೇ ಬಿಡುಗಡೆಯಾಗಿ ದೊಡ್ಡ ಯಶಸ್ಸನ್ನ ಪಡೆದುಕೊಂಡಂತಹ ಯುವರಾಜ್ ಕುಮಾರ್ ನಟನೆಯ ಯುವ (Yuva) ಸಿನಿಮಾ ದಲ್ಲಿ ಸಪ್ತಮಿ ಗೌಡ ನಾಯಕಿಯಾಗಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕೆಲವೇ ದಿನಗಳ ಹಿಂದೆಯಷ್ಟೇ ಸಿನಿಮಾದ ಸಕ್ಸಸ್ ಮೀಟ್ ನಡೆದಿದ್ದು, ಅದರಲ್ಲಿ ಸಪ್ತಮಿ ಗೌಡ ಅವರು ಭಾಗವಹಿಸಿದ್ದರು. ಈ ವೇಳೆ ಕಾಂತರಾ ಚಾಪ್ಟರ್ ಒನ್ ನಲ್ಲಿ ನಟಿಸುತ್ತಾರೆ ಎನ್ನುವ ಮಾತಿಗೆ ತಮ್ಮ ಉತ್ತರ ಕೊಟ್ಟಿದ್ದಾರೆ.

ನಾನು ನಟಿಸುತ್ತಿಲ್ಲ, ಆ ಪಾತ್ರಕ್ಕೆ ಬೇರೆಯವರು ಬಂದಿದ್ದಾರೆ. ಈಗ ನಿರ್ಮಾಣ ಆಗ್ತಾ ಇರೋದು ಸಿನಿಮಾದ ಪ್ರೀಕ್ವೆಲ್. ಆ ಪಾತ್ರವೇ ಇಲ್ಲ ಅಂದಾಗ ನಾನು ನಟಿಸೋದು ಹೇಗೆ ಎಂದು ಸಪ್ತಮಿ ಗೌಡ ಹೇಳಿದ್ದಾರೆ. ಅಲ್ಲಿಗೆ ಕಾಂತರಾ ಚಾಪ್ಟರ್ ಒನ್ ನಲ್ಲಿ ತಾನು ನಟಿಸುತ್ತಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದೆ ವೇಳೆ ನಟಿ ನನಗೆ ಏನೇ ಸಿಕ್ಕಿದರೂ ಕೂಡಾ ಅದು ಕಾಂತಾರದಿಂದ. ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಕಳೆದರೂ ಜನ ಈಗಲೂ ಅದರ ಬಗ್ಗೆ ಮಾತಾಡ್ತಾ ಇದ್ದಾರೆ.

ಆ ಸಿನಿಮಾದ ಶೂಟಿಂಗ್ ಇನ್ನೇನು ಶುರುವಾಗಲಿದೆ ಕಾಂತರಾ ಫ್ರಿಕ್ವೆಲ್ ನಿಮಗೆ ಇಷ್ಟ ಆಗುತ್ತದೆ ಎನ್ನುವ ಮಾತುಗಳನ್ನು ಸಪ್ತಮಿ ಗೌಡ ಹೇಳಿದ್ದಾರೆ. ನಟಿ ಈ ಸಿನಿಮಾದಲ್ಲಿ ಮಾಡುತ್ತಿಲ್ಲವಾದರೂ ಸಿನಿಮಾ ಕುರಿತಾಗಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬಹಳ ಉತ್ಸುಕರಾಗಿದ್ದಾರೆ. ಕಾಂತಾರ ತಂಡ ನಮ್ಮ ಚಿತ್ರತಂಡ ಎನ್ನುವ ಭಾವನೆ ಸಪ್ತಮಿ ಗೌಡ ಅವರಲ್ಲಿದೆ. ಕಾಂತಾರಾದ ಗೆಲುವಿನ ನಂತರ ಈಗಾಗಲೇ ಸಪ್ತಮಿ ಗೌಡ ಅವರು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ.

Leave a Comment