Rakesh Adiga: ಜೈಲಿನಲ್ಲಿ ಸೋನು, ಸಾಂತ್ವನ ಹೇಳಲು ಹೋದ ರಾಕೇಶ್ ಅಡಿಗ

Written by Soma Shekar

Published on:

---Join Our Channel---

Rakesh Adiga: ಮಗ ಒಂದನ್ನು ಅಕ್ರಮವಾಗಿ ದತ್ತು ಪಡೆದಿರುವ ಪ್ರಕರಣದ ವಿಚಾರವಾಗಿ ಬಿಗ್ ಬಾಸ್ ಖ್ಯಾತಿಯ, ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಜೈಲು ಸೇರಿರುವ ವಿಚಾರವು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಸೋನು ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಈ ವೇಳೆ ಸೋನು ಅವರನ್ನು ಭೇಟಿ ಮಾಡಲು ನಟ ರಾಕೇಶ್ ಹೋಗಿದ್ದು, ಸೋನುಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.

ಹೌದು, ಬಿಗ್ ಬಾಸ್ ಸೀಸನ್ ಒಂಬತ್ತರ ಖ್ಯಾತಿಯ ನಟ ರಾಕೇಶ್ ಅಡಿಗೆ (Rakesh Adiga) ಸೋನುನ ಭೇಟಿ ಮಾಡಿ ಧೈರ್ಯ ಹೇಳಿದ್ದು, ತಾನು ಸಹಾ ನಡೆದಿರುವ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುವುದಾಗಿ ಸಹಾ ಹೇಳಿದ್ದಾರೆ. ಮಗುವೊಂದನ್ನು ದತ್ತು ಪಡೆದಿರುವ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದೇನೆ, ಅದು ಟ್ರೋಲ್ ಮಾಡೋರಿಗೆ ಕೌಂಟರ್ ಕೊಡೋ ಉದ್ದೇಶ ಆಗಿತ್ತು.
ಆದರೆ ಈಗ ನೋಡಿದರೆ ಆ ವಿಚಾರವಾಗಿ ಇಂತಹ ಶಿಕ್ಷೆ ಆಗಿದೆ ಅಂತ ಸೋನು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಎಂದು ರಾಕೇಶ್ ತಿಳಿಸಿದ್ದಾರೆ.

ಪ್ರಕರಣ ಹೊರ ಬಂದ ಮೇಲೆ ಅರೆಸ್ಟ್ ಆಗಿದ್ದ ಸೋನು ಅವರಿಗೆ ಕೆಲವೇ ದಿನಗಳ ಹಿಂದೆಯಷ್ಟೇ ಸಿಜೆಎಂ ಕೋರ್ಟ್ ನ್ಯಾಯಾಧೀಶರು ಹದಿನಾಲ್ಕು ದಿನಗಳ‌ ಅವಧಿಗೆ ನ್ಯಾಯಾಂಗ ಬಂಧನ (Judicial custody) ವಿಧಿಸಿದ್ದಾರೆ. ಸೋನು ಕಾನೂನುಬಾಹಿರವಾಗಿ ಮಗುವನ್ನು ದತ್ತು ತೆಗೆದುಕೊಂಡಿದ್ದ ಸೋನು ಅವರನ್ನು ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ರಾಯಚೂರಿಗೆ ಸ್ಥಳ ಮಹಜರಿಗೆ ಹೋಗಿದ್ದರು.

ಪೋಲಿಸರು ಬಾಲಕಿಯ ಚಿಕ್ಕಪ್ಪನ ಮನೆಗೆ ಬಂದಂತಹ ಪೋಲಿಸರು ಸ್ವಲ್ಪಮಟ್ಟಿಗೆ ಸಮಯದಲ್ಲೇ ಮಾಹಿತಿಯನ್ನು ಸಂಗ್ರಹಿಸಿ ಅಲ್ಲಿಂದ ಅವಸರವಾಗಿಯೇ ಹೊರಟು ಬಂದಿದ್ದರು. ಅಲ್ಲದೇ ಸೋನು ಗೌಡ ಅವರ ಜೊತೆಗೆ ಪೋಲಿಸರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು, ಸೋನು ಅವರಿದ್ದ ಕಾರಿಗೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಮಾಡಿದ್ದರು.

Leave a Comment