Darshan Fans: ಮಹಿಳೆಗೆ ಅಗೌರವ, ಕೆಟ್ಟ ಪದ ಬಳಕೆ, ಸಿಡಿದೆದ್ದ ಕಿಚ್ಚನ ಫ್ಯಾನ್ಸ್; ಕಿಡಿಗೇಡಿಯ ಪತ್ತೆಗೆ ಪ್ರಯತ್ನ

Written by Soma Shekar

Published on:

---Join Our Channel---

Darshan fans: ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಅವರ ಅಭಿಮಾನಿಗಳ (Darshan Fans) ವಿರುದ್ಧ ಬಹಳ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಸಾಕಷ್ಟು ಅಭಿಪ್ರಾಯಗಳು ಹರಿದು ಬರುತ್ತಿವೆ. ಒಂದು ಹೆಣ್ಣಿನ ಬಗ್ಗೆ ಮಾಡಿದ ನಿಂದನೆಯ ಮಾತುಗಳನ್ನ ನೋಡಿದ ನೆಟ್ಟಿಗರು ದರ್ಶನ್ ಅವರ ಅಭಿಮಾನಿಗಳ ಬಗ್ಗೆ ತೀವ್ರವಾಗಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಬಳಸಿರುವ ಕೆಟ್ಟ ಪದಗಳನ್ನು ನೋಡಿ ಅನೇಕರು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿರುವ ಪ್ರಸ್ತುತ ವೇಳೆಯಲ್ಲಿ ಆರ್ ಸಿ ಬಿ ಹೀನಾಯ ಸೋಲು ಗಳನ್ನು ಎದುರಿಸುತ್ತಿದ್ದು, ಇದಕ್ಕೆ ಕಾರಣ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneet Rajkumar) ಎನ್ನುವುದಾಗಿ ಆರೋಪವನ್ನು ಮಾಡುತ್ತಾ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡವನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾನೆ..

ಪೋಸ್ಟ್ ನಲ್ಲಿ, ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೀಬೇಕು. ಗಂಡ ಸತ್ತ ಮುಂ** ಯರನ್ನು ಕರೀಬಾರದು. ಆರ್‌ಸಿಬಿ ಅನ್‌ ಬಾಕ್ಸ್‌ ಈವೆಂಟ್ ಗೆ ಈ ಮುಂ**ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್‌ ಸೋಲ್ತಾ ಇದ್ದಾರೆ ಅಂತ ನೀಚ ಪದಗಳನ್ನು ಬಳಸಿ ಗಜಪಡೆ ಅ‌ನ್ನೋ‌ ಹೆಸರಿನ ಒಂದು ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ ಸ್ವಲ್ಪ ಸಮಯದಲ್ಲೇ ವೈರಲ್‌ ಆಗಿದ್ದು ಮಾತ್ರವೇ ಅಲ್ಲದೇ ದೊಡ್ಡ ಮಟ್ಟದಲ್ಲಿ ಟೀಕೆಗೆ ಕಾರಣವಾಗಿದೆ.‌

ಇನ್ನು ಈ ಪೋಸ್ಟ್ ವೈರಲ್ ಆಗಿ ಟೀಕೆಗಳು ಬಂದ ತಕ್ಷಣ ಗಜಪಡೆ ಅಂತ ಇದ್ದ ಅಕೌಂಟ್ ಹೆಸರು ಸುದೀಪ್ (Sudeep) ಅಭಿಮಾನಿ ಅಂತ ಬದಲಾಗಿದೆ. ಇದನ್ನು ಗಮನಿಸಿದ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಪೋಸ್ಟ್ ನಲ್ಲಿ ಆದ ಬದಲಾವಣೆಯನ್ನು ಎಲ್ಲಾ ಕಡೆ ಶೇರ್ ಮಾಡಿದ್ದು, ಹೀಗೆ ದರ್ಶನ್ ಅಭಿಮಾನಿ ಅಂತ ಹೇಳ್ಕೊಂಡು ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ಸರಿಯಾಗಿ ಉಗಿದಿದ್ದಾರೆ.‌

ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾದ ನಂತರ ಪೋಸ್ಟ್ ಹಾಕಿದ್ದವನು ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದ್ದು. ಈ ವಿಚಾರ ದರ್ಶನ್ ಅವರ ಗಮನಕ್ಕೂ ಬಂದಿದ್ದು, ಇದರ. ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಉತ್ತರವನ್ನು ನೀಡಬಾರದು ಎಂದು ಆಪ್ತರಿಗೆ ಸಲಹೆಯನ್ನು ನೀಡಿದ್ದಾರೆನ್ನಲಾಗಿದೆ. ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಈ ವಿಚಾರವಾಗಿ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.‌

Leave a Comment