Tanisha Kuppanda: ತನೀಷಾ ಮಾಲೀಕತ್ವದ ಆಭರಣ ಮಳಿಗೆ ಅದ್ದೂರಿ ಉದ್ಘಾಟನೆ, BB ಸ್ಪರ್ಧಿಗಳು ಹಾಜರು

Written by Soma Shekar

Published on:

---Join Our Channel---

Tanisha Kuppanda: ಬಿಗ್ ಬಾಸ್ ಕನ್ನಡ 10 ರ ಸ್ಪರ್ಧಿ, ಜನಪ್ರಿಯ ನಟಿ ತನೀಷಾ ಕುಪ್ಪಂಡ (Tanisha Kuppanda) ಅವರ ಒಡೆತನದ ಕುಪ್ಪಂಡಾಸ್ ಆಭರಣ ಮಳಿಗೆಯ ಉದ್ಘಾಟನೆ ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಹತ್ತರ ಸ್ಪರ್ಧಿಗಳು ಭಾಗಿಯಾಗಿದ್ದರು. ಆ ಫೋಟೋಗಳೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ತನ್ನ ಮಾತು, ನಡೆ, ದಿಟ್ಟತನಗಳಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಎಂದು ಹೆಸರನ್ನ ಪಡೆದುಕೊಂಡ ತನೀಷಾ ಅವರು ಬೆಂಗಳೂರು ಮಹಾನಗರದಲ್ಲಿ ಅಪ್ಪುಸ್ ಕಿಚನ್ ಹೆಸರಿನ ರೆಸ್ಟೋರೆಂಟ್ ಹೊಂದಿದ್ದಾರೆ.

ಈಗ ರೆಸ್ಟೋರೆಂಟ್ ಉದ್ಯಮದಿಂದ ನಟಿ ಆಭರಣ ಉದ್ಯಮದ ಕಡೆಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದು, ತಮ್ಮ ಕುಪ್ಪಂಡಾಸ್ ನ ಒಂದು ಬ್ರ್ಯಾಂಡ್ ಮಾಡಲು ಕುಪ್ಪಂಡಾಸ್ ಹೆಸರಿನ ಆಭರಣ ಮಳಿಗೆಯನ್ನು ಅವರು ತೆರೆದಿದ್ದು, ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.

ಬೆಳ್ಳಿ ಆಭರಣಗಳ ಉದ್ಯಮಕ್ಕೆ ಅಡಿಯಿಟ್ಟಿರುವ ತನೀಷಾ ಕುಪ್ಪಂಡ ಅವರು ತಮ್ಮದೇ ಬ್ರ್ಯಾಂಡ್ ಅನ್ನು ಕುಪ್ಪಂಡಾಸ್ ಹೆಸರಿನಲ್ಲಿ ಆರಂಭ ಮಾಡಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿ ನೂತನ ಆಭರಣ ಮಳಿಗೆಯನ್ನು ತೆರೆದಿದ್ದಾರೆ ತನೀಷಾ ಅವರು.

ಮಾರ್ಚ್ 29 ಶುಕ್ರವಾರದಂದು ತನೀಷಾ ಅವರ ಕುಪ್ಪಂಡಾಸ್ ಆಭರಣ ಮಳಿಗೆಯನ್ನು ಬಹಳ ಅದ್ದೂರಿಗೆ ಉದ್ಘಾಟನೆ ಮಾಡಲಾಗಿದೆ. ಈ ವೇಳೆ ತನೀಷಾ ಅವರ ಆಪ್ತರು ಮತ್ತು ಬಿಗ್ ಬಾಸ್ ಸ್ಪರ್ಧಿಗಳು ಹಾಜರಿದ್ದು ತನೀಷಾ ಅವರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ.

ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ‘ಗೀತಾ’ ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ, ಬಿಗ್ ಬಾಸ್ 10 ರ ಸ್ಪರ್ಧಿಗಳಾದ ವಿನಯ್ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ, ಕಾರ್ತಿಕ್ ಮಹೇಶ್, ಪವಿ ಪೂವಪ್ಪ, ರಕ್ಷಕ್ ಬುಲೆಟ್ ಮುಂತಾದವರು ಪಾಲ್ಗೊಂಡಿದ್ದರು.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ತನೀಷಾ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ತನೀಷಾ ಅವರು ತಮ್ಮ ರೆಸ್ಟೋರೆಂಟ್ ಮತ್ತು ಈಗ ಆಭರಣ ಉದ್ಯಮದಲ್ಲಿ ಬ್ಯುಸಿಯಾಗಿದ್ದು, ಮತ್ತೆ ನಟನೆಯಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.‌

ತನೀಷಾ ಕುಪ್ಪಂಡ ಅವರ ಆಭರಣ ಮಳಿಗೆಯ ಉದ್ಘಾಟನೆ ಸಾಕಷ್ಟು ಅದ್ದೂರಿಯಾಗಿ ನಡೆದಿದ್ದು, ಈ ವೇಳೆ ತೆಗೆದಂತಹ ಹಲವು ಫೋಟೋಗಳನ್ನು ತನೀಷಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತನೀಷಾ ಅವರು ಶೇರ್ ಮಾಡಿದ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಬಹಳಷ್ಟು ಜನರು ನಟಿಗೆ ತಮ್ಮ ಹೊಸ ಉದ್ಯಮದಲ್ಲಿ ಗೆಲುವು ಸಿಗಲೆಂದು ಶುಭವನ್ನು ಹಾರೈಸುವ ಮೂಲಕ ಖುಷಿ ಹಂಚಕೊಂಡಿದ್ದಾರೆ.

Leave a Comment