Mahesh Babu: ರಾಜಮೌಳಿ ಎಷ್ಟೇ ಎಚ್ಚರಿಕೆ ವಹಿಸಿದ್ರು ವಿಫಲವಾಯ್ತು ಪ್ರಯತ್ನ, ಇನ್ನು ಮುಚ್ಚಿಡೋಕೆ ಸಾಧ್ಯವೇ ಇಲ್ಲ

Written by Soma Shekar

Published on:

---Join Our Channel---

Mahesh Babu: ಎಸ್ ಎಸ್ ರಾಜಮೌಳಿ (S S Rajamouli) ಮತ್ತು ಮಹೇಶ್ ಬಾಬು (Mahesh Babu) ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಸದ್ಯಕ್ಕೆ SSMB 29 ಎನ್ನುವ ವರ್ಕಿಂಗ್ ಟೈಟಲ್ ನಲ್ಲಿ ಸುದ್ದಿ ಆಗುತ್ತಿರುವ ಸಿನಿಮಾ ಈಗಾಗಲೇ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸಿನಿಮಾದ ಹೊಸ ಅಪ್ಡೇಟ್ ಗಳು ಯಾವಾಗ ಬರುತ್ತದೆ ಅನ್ನೋದನ್ನ ತಿಳಿಯೋಕೆ ಅಭಿಮಾನಿಗಳು ಕಾಯ್ತಾನೇ ಇರ್ತಾರೆ. ಈ ಸಿನಿಮಾಕ್ಕಾಗಿ ನಟ ಮಹೇಶ್ ಬಾಬು ಅವರು ಒಂದು ವಿಭಿನ್ನವಾದ ಲುಕ್ ನಲ್ಲಿ ಕಾಣಿಸಿಕೊಳ್ತಾರೆ ಅನ್ನೋದು ಈಗಾಗಲೇ ಸಾಕಷ್ಟು ಸಲ ಸುದ್ದಿಗಳಾಗಿದೆ.

ಮಹೇಶ್ ಬಾಬು ಅವರ ಹೊಸ ಲುಕ್ ಹೊರಗಡೆ ರಿವೀಲ್ ಆಗಬಾರದು ಅನ್ನೋದು ರಾಜಮೌಳಿ ಅವರ ಉದ್ದೇಶವಾಗಿತ್ತು. ಅದರ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ಸಹಾ ವಹಿಸಿದ್ದರು. ಆದರೆ ಎಲ್ಲಾ ಎಚ್ಚರಿಕೆಗಳ ನಡುವೆಯೇ ಈಗ ಮಹೇಶ್ ಬಾಬು ಅವರ ಲುಕ್ ಬಹಿರಂಗವಾಗಿ ಹೋಗಿದೆ. ಹೊಸ ವೀಡಿಯೋ ತುಣುಕೊಂದು ವೈರಲ್ ಆಗುವ ಮೂಲಕ ಮಹೇಶ್ ಬಾಬು ಅವರ ಹೊಸ ಲುಕ್ ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಮಹೇಶ್ ಬಾಬು ಅವರು ತಮ್ಮ ಚಿತ್ರತಂಡದೊಂದಿಗೆ ಪ್ರೀ ಪ್ರೊಡಕ್ಷನ್ ವರ್ಕ್ ಸಲುವಾಗಿ ದುಬೈಗೆ ತೆರಳಿದ್ದರು. ಮಹೇಶ್ ಬಾಬು ಅವರು ತಮ್ಮ ಈ ಹೊಸ ಪಾತ್ರಕ್ಕಾಗಿ ತರಬೇತಿಯನ್ನು ಸಹಾ ಪಡೆದಿದ್ದಾರೆ ಎನ್ನಲಾಗಿದೆ. ದುಬೈನಲ್ಲಿ (Dubai) ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸಿಕೊಂಡು ನಟ ಹೈದರಾಬಾದ್ ಗೆ ಮರಳಿ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ ಮಹೇಶ್ ಬಾಬು.

SSMB 29 ನಲ್ಲಿ ಮಹೇಶ್ ಬಾಬು ಅವರದ್ದು ಉದ್ದ ಕೂದಲಿನ ಲುಕ್ ಅನ್ನೋದು ಈಗ ಅವರ ಲುಕ್ ನೋಡಿದವರಿಗೆ ಗೊತ್ತಾಗಿದೆ. ಸಿನಿಮಾದ ಪಾತ್ರಕ್ಕಾಗಿ ನಟ ಉದ್ದವಾಗಿ ಕೂದಲನ್ನು ಬಿಟ್ಟಿದ್ದಾರೆ. ರಾಜಮೌಳಿ ಸಿನಿಮಾದಲ್ಲಿ ನಾಯಕ ನಟನಿಗೆ ವಿಶೇಷವಾದ ಲುಕ್ ಇರುತ್ತೆ. ಈಗ ಮಹೇಶ್ ಬಾಬು ಅವರು ಸಹಾ ಹೊಸ ಲುಕ್ ನಲ್ಲಿ ಬಹಳ ಆಕರ್ಷಕವಾಗಿ ಕಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

Leave a Comment