Tanisha Kuppanda ಸೀರೆ ಕೂಡಾ ನಾಚುವಂತ ಅಂದಗಾತಿ ತನೀಷಾ ಸೀರೆ ಲುಕ್ ಗೆ ಫ್ಯಾನ್ಸ್ ಫಿದಾ! 

ಕನ್ನಡ ಕಿರುತೆರೆ ಮಾತ್ರವೇ ಅಲ್ಲದೇ ಸ್ಯಾಂಡಲ್ವುಡ್ ನಲ್ಲಿ ಸಹಾ ಜನಪ್ರಿಯತೆ ಪಡೆದಿರುವ ನಟಿ ತನೀಷಾ ಕುಪ್ಪಂಡ

ಸದ್ಯಕ್ಕಂತೂ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಭರ್ಜರಿ ಆಟವನ್ನು ಆಡುವ ಮೂಲಕ ಪ್ರೇಕ್ಷಕರ ಮತ್ತು ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ

ತನೀಷಾ ಅವರು ಹಾಟ್ ಮತ್ತು ಬೋಲ್ಡ್ ಲುಕ್ ನಲ್ಲಿ ಪಡ್ಡೆಗಳ ನಿದ್ದೆ ಕದ್ದ ನಟಿ. ಆದರೆ ಸೀರೆಯ ಲುಕ್ ನಲ್ಲಿ ಸಹಾ ನಟಿ ತನೀಷಾ ಅವರು ಅಂದವಾಗಿ ಮಿಂಚುತ್ತಾರೆ.

ತನೀಷಾ ಅವರು ಬಿಗ್ ಬಾಸ್ ಗೆ ಬಂದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ.

ನ್ಯೂಯಾರ್ಕ್ ನ ಟೈಮ್ ಸ್ಕ್ವೇರ್ ನಲ್ಲಿ ನಟಿಗೆ ಫೋಟೋ ಸಹಿತ ವಿಶ್ ಮಾಡಿದ್ದು ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕನ್ನಡದ ನಟಿಯೊಬ್ಬರ ಫೋಟೋ ಟೈಮ್ ಸ್ಕ್ವೇರ್ ನಲ್ಲಿ ಪ್ರದರ್ಶನಗೊಂಡಿದ್ದು ಇದೇ ಮೊದಲಾಗಿದ್ದು, ಇಂತಹುದೊಂದು ಹೆಗ್ಗಳಿಕೆಗೆ ತನೀಷಾ ಪಾತ್ರವಾಗಿದ್ದಾರೆ.

ಬಿಗ್ ಬಾಸ್ ನಲ್ಲಿ ತನಿಷಾ ಫಿನಾಲೆ ತಲುಪ್ತಾರಾ? ಅನ್ನೋದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಅದರ ಉತ್ತರಕ್ಕಾಗಿ ಎಲ್ರೂ ಕಾದು ನೋಡಬೇಕಾಗಿದೆ.