Tanisha kuppanda: ಎಲ್ರೂ ಬಂದ್ರೂ ಆದ್ರೆ ಸಂಗೀತಾ ಬರಲೇ ಇಲ್ಲ ಯಾಕೆ? ಕಾರ್ತಿಕ್, ತನೀಷಾ ಹೇಳಿದ್ದೇನು

Written by Soma Shekar

Published on:

---Join Our Channel---

Tanisha Kuppanda: ಬಿಗ್​ಬಾಸ್ ಸ್ಪರ್ಧಿ, ಸ್ಯಾಂಡಲ್ವಡ್ ಮತ್ತು ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕೂಡಾ ಆಗಿರುವಂತಹ ತನಿಷಾ ಕುಪ್ಪಂಡ (Tanisha Kuppanda) ಅವರು ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮ ಹೊಸ ಜ್ಯುವೆಲ್ಲರಿ ಶಾಪ್ ಅನ್ನು ಬಹಳ ಅದ್ದೂರಿಯಾಗಿ ಆರಂಭ ಮಾಡಿದ್ದಾರೆ. ಈ ಬ್ರ್ಯಾಂಡ್ ಗೆ ಕುಪ್ಪಂಡಾಸ್ ಜ್ಯುವೆಲ್ಲರಿ ಎನ್ನುವ ಹೆಸರನ್ನು ನೀಡಿದ್ದಾರೆ‌. ಆಭರಣ ಮಳಿಗೆಯ ಅದ್ದೂರಿ ಉದ್ಘಾಟನೆಯಲ್ಲಿ ಬಿಗ್ ಬಾಸ್ ಮನೆ ಮಂದಿ ಎಲ್ಲರೂ ಬಹಳ ಸಂತೋಷದಿಂದ ಭಾಗಿಯಾಗಿದ್ದರು.

ತನೀಷಾ ಅವರ ಹೊಸ ಉದ್ಯಮಕ್ಕೆ ಶುಭವನ್ನು ಹಾರೈಸುವ ಸಲುವಾಗಿ ವಿನಯ್ , ನಮ್ರತಾ, ಕಾರ್ತಿಕ್, ರಕ್ಷಕ್, ನೀತು, ವರ್ತೂರು ಸಂತೋಷ್, ಸಿರಿ ಅವರು ಸೇರಿದಂತೆ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ತನೀಷಾ ಅವರಿಗೆ ಶುಭವನ್ನು ಹಾರೈಸಿದ್ದಾರೆ. ಆದರೆ ಈ ವೇಳೆ ಎಲ್ಲರ ಗಮನ ಸೆಳೆದ ವಿಚಾರ ಸಂಗೀತಾ ಶೃಂಗೇರಿ ಅವರ ಅನುಪಸ್ಥಿತಿಯಾಗಿತ್ತು. ಹೌದು, ಸಂಗೀತಾ ಅವರು ಈ ಈವೆಂಟ್ ನಲ್ಲಿ ಕಾಣಿಸಿಕೊಂಡಿಲ್ಲ.

ಸಂಗೀತಾ (Sangeetha Sringeri) ಅವರು ಈ ಕಾರ್ಯಕ್ರಮಕ್ಕೆ ಬರದೇ ಇರುವುದನ್ನು ಗಮನಿಸಿದವರು, ಸಂಗೀತಾ ಯಾಕೆ ಬಂದಿಲ್ಲ ಅವರನ್ನು ಇನ್ವೈಟ್ ಮಾಡಿಲ್ವಾ ಅಂತ ಪ್ರಶ್ನೆಯನ್ನು ಕೇಳಲಾಗಿದೆ. ಬಿಗ್ ಬಾಸ್ ಮುಗಿದ ನಂತರ ಸಂಗೀತಾ ಅವರು ವರ್ತೂರು ಸಂತೋಷ್ ಅವರ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಬಿಟ್ರೆ ಬೇರೆ ಎಲ್ಲೂ ಕೂಡಾ ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಕಾಣಿಸಿಕೊಂಡಿಲ್ಲ. ಬಿಗ್ ಬಾಸ್ ನಂತರ ನಡೆದ ಕೆಲವು ಕಾರ್ಯಕ್ರಮಗಳಲ್ಲಿಯೂ ಸಂಗೀತಾ ಕಾಣಿಸಿಕೊಂಡಿಲ್ಲ.

ಕಾರ್ತಿಕ್ (Karthik) ಅವರು ಸಂಗೀತಾ ಯಾಕೆ ಬರಲಿಲ್ಲ ಅನ್ನೋ ವಿಚಾರವಾಗಿ ಪ್ರತಿಕ್ರಿಯ ಕೊಡ್ತಾ, ಸಂಗೀತಾ ಬಂದಿದ್ರೆ ಸಂತೋಷ ಆಗ್ತಿತ್ತು, ಆದರೆ ಅವರು ತುಂಬಾ ಬ್ಯುಸಿಯಾಗಿರೋದ್ರಿಂದ ಬರೋಕ್ಕಾಗಿಲ್ಲ ಎಂದಿದ್ದಾರೆ. ಇನ್ನು ತನೀಷಾ ಅವರು ಮಾತನಾಡ್ತಾ, ನಾನು ಫೋನ್ ಮಾಡಿದ್ದೆ. ಇನ್ವಿಟೇಷನ್ ಕೊಡೋಕೆ ಅಂತ ಫೋನ್ ಮಾಡಿದ್ದೆ. ಬ್ಯುಸಿ ಇದ್ದೀನಿ ಆಮೇಲೆ ಕಾಲ್ ಮಾಡ್ತೀನಿ ಅಂತ ಹೇಳಿದ್ರು, ಇನ್ವೈಟ್ ಮಾಡಿದ್ದೀನಿ, ಫ್ರೀ ಇದ್ದರೆ ಬರ್ತೀ‌ನಿ ಅಂದಿದ್ರು ಎಂದು ಹೇಳಿದ್ದಾರೆ.‌

Leave a Comment