Viral Video: ಕಾರಲ್ಲಿ ಲವ್ವರ್ ಜೊತೆ ಸರಸ ಆಡ್ತಿದ್ದ ಹೆಂಡ್ತಿಯನ್ನ ರೆಡ್ ಹ್ಯಾಂಡಾಗಿ ಹಿಡಿದ ಗಂಡ; ಮುಂದೆ ಆಗಿದ್ದು ಶಾಕಿಂಗ್ !

Written by Soma Shekar

Published on:

---Join Our Channel---

Viral Video: ಮದುಗೆ ಆಗಿದ್ರೂ ಕೂಡಾ ಅನೈತಿಕ ಸಂಬಂಧಗಳನ್ನು (Extra Marital Affairs) ಇಟ್ಟುಕೊಳ್ಳುವ ಮನಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಲೇ ಇದೆ. ಇಂತಹ ಸಂಬಂಧಗಳ ಕುರಿತಾಗಿ ಸುದ್ದಿಗಳು ಆಗುತ್ತಲೇ ಇರುತ್ತವೆ. ವೈಯಕ್ತಿಕ ಸ್ವಾತಂತ್ರ್ಯ ಎಂದು ಹೇಳಿಕೊಂಡು ಕೆಲವರು ಬೇಕಾಬಿಟ್ಟಿಯಾಗಿ ತಮಗೆ ಬೇಕಾದಂತೆ ಸ್ವೇಚ್ಛಾಚಾರವನ್ನು ನಡೆಸುವುದು ತೀರಾ ಸಾಮಾನ್ಯ ಎನ್ನುವಂತೆ ಆಗಿದೆ. ಮದುವೆ ಆಗಿದ್ದರೂ, ಮಕ್ಕಳಿದ್ದರೂ ಬೇರೆ ಅವರ ಜೊತೆ ಸುಖ ಪಡೋದಕ್ಕೆ ಹಿಂದೆ ಮುಂದೆ ಆಲೋಚನೆ ಮಾಡದಂತಹ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಇದ್ದಾರೆ.

ಈಗ ಹೊಸದೊಂದು ಅನೈತಿಕ ಸಂಬಂಧದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗಿದೆ.‌ ಗಂಡನಿಗೆ ಕಣ್ತಪ್ಪಿಸಿ, ಅವನಿಗೆ ತಿಳಿಯದ ಹಾಗೆ ಪ್ರಿಯನ ಜೊತೆಗೆ ಕಾರಿನಲ್ಲಿ ಸರಸವಾಡುತ್ತಿದ್ದ ಪತ್ನಿಯನ್ನು ಆಕೆಯ ಗಂಡ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆಯೊಂದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ವಿಚಾರಕ್ಕೆ ಬಂದರೆ ಹರ್ಯಾಣದಲ್ಲಿ ಪಾರ್ಕೊಂದರಲ್ಲಿ ಕಾರಿನಲ್ಲಿ ಜೋಡಿಯೊಂದು ಏಕಾಂತವಾಗಿ ಸಮಯವನ್ನು ಕಳೆಯುತ್ತಿತ್ತು.

ಆ ಸಮಯದಲ್ಲೇ ಅಲ್ಲಿಗೆ ಹಾಕಿ ಬ್ಯಾಟ್ ಹಿಡಿದು ಬಂದ ವ್ಯಕ್ತಿಯೊಬ್ಬರು ಕಾರಿನ ಮಿರರ್ ನಿಂದ ಒಳಗೆ ಇರೋರನ್ನ ನೋಡಿದ್ದು, ಅನಂತರ ಕಾರಿನ ಗಾಜನ್ನು ತಮ್ಮ ಬ್ಯಾಟ್ ನಿಂದ ಒಡೆದು ಹಾಕಿದ್ದಾರೆ. ನಂತರ ಕಾರಿನ ಡೋರ್ ತೆಗೆದು ಒಳಗಿದ್ದ ಮಹಿಳೆಯನ್ನು ಹೊರಗೆ ಎಳೆದುಕೊಂಡು ಬ್ಯಾಟ್ ನಿಂದ ಬಾರಿಸಿದ್ದಾನೆ, ಆಕೆಯ ಜೊತೆಗೆ ಇದ್ದ ವ್ಯಕ್ತಿ ಅದನ್ನು ತಡೆಯುವ ಬದಲಾಗಿ, ಪಾರ್ಕ್ ಗೆ ವಾಕಿಂಗ್ ಬಂದವನಂತೆ ತಿರುಗಾಡಿದ್ದಾನೆ.

ತನ್ನ ಹೆಂಡತಿ ಬೇರೊಬ್ಬನ ಜೊತೆಗೆ ಅಕ್ರಮ ಸಂಬಂಧವನ್ನು ಇಟ್ಕೊಂಡು ತನ್ನ ಕಣ್ತಪ್ಪಿಸಿ ಬಹಳ ದಿನಗಳಿಂದ ಈ ರೀತಿ ಸುತ್ತುತ್ತಾ ಇದ್ದಾಳೆಂದು ಆರೋಪ ಮಾಡುತ್ತಾ, ಅದೇ ಕಾರಣದಿಂದ ಅವಳ ಮೇಲೆ ಗಮನ ಇಟ್ಟು ಇಂದು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇನೆ ಎಂದು ಹೇಳಿರುವ ವ್ಯಕ್ತಿ ಪಂಚ್ ಕುಲಾ ಪೋಲಿಸ್ ಠಾಣೆಯಲ್ಲಿ ದೂರನ್ನ ದಾಖಲು ಮಾಡಿದ್ದಾರೆ. ಪ್ರಿಯ ಮತ್ತು ಪ್ರಿಯತಮೆಯ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ.

Leave a Comment