Viral Video: ಮದುವೆಯಲ್ಲಿ ಊಟದ ಹತ್ರ.. ಇಂತ ಏರ್ಪಾಟ ಎಲ್ಲಾದ್ರು ನೋಡಿದ್ದೀರಾ? ಸೂಪರ್ ಐಡಿಯಾ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

Viral Video: ಮದುವೆ (Marriage) ಸಮಾರಂಭಗಳು ಎಂದಾಗ ಅಲ್ಲಿ ಆಹಾರಕ್ಕೆ ವಿಶೇಷವಾದ ಪ್ರಾಧಾನ್ಯತೆ ಇರುತ್ತದೆ. ಅದರಲ್ಲೂ ಅನೇಕ ಜನರು ಮದುವೆ ಸಮಾರಂಭಗಳಲ್ಲಿ ಆಹಾರಕ್ಕಾಗಿ ಎಷ್ಟೇ ಹಣವನ್ನಾದರೂ ಖರ್ಚು ಮಾಡಲು ಮತ್ತು ಅನೇಕ ವಿಧದ ಭಕ್ಷ್ಯಗಳನ್ನು ಅತಿಥಿಗಳಿಗೆ ಉಣ ಬಡಿಸಲು ತಯಾರಿಯನ್ನು ನಡೆಸುವುದಕ್ಕೆ ಎಳ್ಳಷ್ಟೂ ಕೂಡಾ ಹಿಂಜರಿಯುವುದಿಲ್ಲ. ಆದರೆ ಇದೇ ವೇಳೆ ಇಂತಹ ಸಮಾರಂಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರವೂ ವ್ಯರ್ಥವಾಗುವುದು (Food waste) ಸಹಾ ಸಾಮಾನ್ಯ ಎನಿಸಿದೆ.

ಬಹಳಷ್ಟು ಜನರು ಮದುವೆ ಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಆಹಾರವನ್ನ ಬಡಿಸಿಕೊಂಡು ಅದನ್ನು ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಹಾಗೆ ಬಿಟ್ಟು ಬಿಡುತ್ತಾರೆ. ಕೊನೆಗೆ ಅದು ಕಸದ ತೊಟ್ಟಿಯನ್ನು ಸೇರುತ್ತದೆ. ಜನರಲ್ಲಿ ಹೀಗೆ ಆಹಾರವನ್ನು ವ್ಯರ್ಥ ಮಾಡಬೇಡಿ ಎಂದು ಜಾಗೃತಿ ಮೂಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಹಾ ಅವರ ಪ್ರತಿಫಲ ಮಾತ್ರ ನಿರಾಶಾದಾಯಕವಾಗಿಯೇ ಇದೆ.

ಆದರೆ ಈಗ ಇದನ್ನೇ ಗಮನದಲ್ಲಿಟ್ಟುಕೊಂಡು ಮದುವೆಯೊಂದರಲ್ಲಿ ಆಯೋಜಕರು ಮದುವೆ ವಿನೂತನವಾದ ಆಲೋಚನೆಯೊಂದನ್ನು ಮಾಡಿದ್ದಾರೆ. ಊಟ ಮಾಡುವವರು ಪ್ಲೇಟ್‌ಗಳನ್ನು ಹಾಕುವ ಸ್ಥಳದಲ್ಲಿ ಒಂದು ಟೇಬಲ್ ಹಾಕಲಾಗಿದ್ದು, ಅದರ ಮೇಲೆ ಅನ್ನ, ಸಿಹಿತಿಂಡಿ, ಮೇಲೋಗರಗಳಿಗೆ ಪ್ರತ್ಯೇಕವಾಗಿ ಖಾಲಿ ಬಟ್ಟಲುಗಳನ್ನು ಇಡಲಾಗಿದೆ. ತಟ್ಟೆಗಳನ್ನು ತೊಳೆಯುವ ಕಡೆ ಇಡಲು ಹೋಗುವವರನ್ನು ತಡೆದು ಅವರನ್ನು ಪಕ್ಕಕ್ಕೆ ಕಳುಹಿಸಲಾಗುತ್ತದೆ.

ನಂತರ ಆಹಾರವನ್ನು ತಟ್ಟೆಗಳಲ್ಲಿ ಉಳಿಸಿದವರಿಂದಲೇ ಅನ್ನ, ಕರಿ, ಸಿಹಿತಿಂಡಿಯನ್ನು ಬಟ್ಟಲುಗಳಿಗೆ ಹಾಕಿಸಿ, ಅವರಿಗೆ ಹೂವನ್ನು ನೀಡಿ ಧನ್ಯವಾದ ಅರ್ಪಿಸಿದರು. ಆಹಾರವು ಕಸದ ತೊಟ್ಟಿಗೆ ಸೇರುವುದನ್ನು ತಡೆಯಲು ಅವರು ಮಾಡಿರುವ ವ್ಯವಸ್ಥೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಈ ವೀಡೀಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, “ಇದು ತುಂಬಾ ಒಳ್ಳೆಯ ಉಪಾಯ” ಎಂದಿದ್ದು, ವೀಡಿಯೋಗೆ ಈಗಾಗಲೇ 4.50 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.

Leave a Comment