Viral Video: ಸ್ಟಾರ್ ನಟಿ ಆದ್ರೆ ನಂಗೇನು? ಪಕ್ಕದಲ್ಲೇ ಇದ್ರು ಕೇರ್ ಮಾಡದ ಸ್ವಿಗ್ಗಿ ಡಿಲೆವರಿ ಬಾಯ್; ಹರಿದು ಬರ್ತಿದೆ ಮೆಚ್ಚುಗೆ

Written by Soma Shekar

Published on:

---Join Our Channel---

Viral Video: ಸಿನಿಮಾ ಸೆಲೆಬ್ರಿಟಿಗಳನ್ನು (Cinema Celebrities) ನೋಡಬೇಕು ಅವರ ಜೊತೆ ಮಾತನಾಡಬೇಕು ಮತ್ತು ಅವರ ಜೊತೆಗೆ ಒಂದು ಫೋಟೋ ಆದ್ರೂ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋದು ಬಹಳಷ್ಟು ಜನ ಸಿನಿ ಪ್ರೇಮಿಗಳ ಆಸೆ ಮತ್ತು ಕನಸಾಗಿರುತ್ತೆ. ಅದರಲ್ಲೂ ತಮ್ಮ ಅಭಿಮಾನ ನಟ ಮತ್ತು ನಟಿಯನ್ನು ಹತ್ತಿರದಿಂದ ನೋಡೋ ಒಂದು ಅವಕಾಶ ಸಿಕ್ಕರೆ ಸಾಕು ಅಂತ ಕಾಯೋ ಸಹಸ್ರಾರು ಅಭಿಮಾನಿಗಳು ಇದ್ದಾರೆ ಅನ್ನೋದು ಸುಳ್ಳಲ್ಲ. ಅದಕ್ಕೆ ಸ್ಟಾರ್ ನಟರು ವಾಸ ಮಾಡುವಂತಹ ಬಂಗಲೆಗಳು, ಫ್ಲ್ಯಾಟ್ ಗಳ ಹತ್ತಿರ ಅಭಿಮಾನಿಗಳು ಹೊರಗೆ ನಿಂತು ಕಾಯೋ ದೃಶ್ಯಗಳನ್ನು ನಾವು ಸೋಶಿಯಲ್ ಮೀಡಿಯಾ ಗಳಲ್ಲಿ ನೋಡಬಹುದು.

ಇನ್ನು ಬಾಲಿವುಡ್ ನಲ್ಲಂತೂ ಸಿನಿಮಾ ಸೆಲೆಬ್ರಿಟಿಗಳ ಫೋಟೋಗಳನ್ನು ತೆಗೆಯೋದಕ್ಕೆ ಪಾಪುರಾಜಿಗಳು ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಶೂಟಿಂಗ್ ಸ್ಪಾಟ್ ಗಳು, ಸೆಲೆಬ್ರಿಟಿಗಳು ಭೇಟಿ ನೀಡೋ ಜಿಮ್ ಗಳು, ಅವರ ಮನೆಗಳ ಮುಂಭಾಗ ಮತ್ತು ಪಾರ್ಟಿ ನಡೆಯುವಂತಹ ಸ್ಥಳಗಳು, ಶೋ ಗಳು ಪಡೆಯೋ ಕಡೆ ಬಳಿ ಕ್ಯಾಮರಗಳನ್ನು ಹಿಡ್ಕೊಂಡು ಕಾಯ್ತಾ ಇರ್ತಾರೆ ಮತ್ತು ಸೆಲೆಬ್ರಿಟಿಗಳು ಬಂದಾಗ ಪೋಸ್ ನೀಡುವಂತೆ ಬೇಡಿಕೊಳ್ಳುವುದನ್ನ ನಾವು ನೋಡಬಹುದು.

ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ವೈರಲ್ (Viral Video) ಆಗಿದ್ದು, ಇದರಲ್ಲಿ ಒಬ್ಬ ಫುಡ್ ಡಿಲೆವರಿ ಬಾಯ್ (Food Delivery Boy) ತನ್ನ ಕೆಲಸಕ್ಕಿಂತ ಸ್ಟಾರ್ ನಟಿ ಮುಖ್ಯವೇನಲ್ಲ ಅಂತ ತನ್ನ ಕೆಲಸದ ಕಡೆಗೆ ಗಮನ ನೀಡಿರೋದು ಎಲ್ಲರ ಗಮನವನ್ನು ಸೆಳೆದಿದೆ ಮತ್ತು ಅಚ್ಚರಿಯನ್ನು ಮೂಡಿಸಿದ್ದು, ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ. ಹೌದು, ವೈರಲ್ ಆಗಿರೋ ವಿಡಿಯೋದಲ್ಲಿ ಡೆಲಿವರಿ ಬಾಯ್ ತನ್ನ ಮುಂದೆಯೇ ಬಂದ ನಟಿ, ತನ್ನ ಪಕ್ಕದಲ್ಲೇ ನಡೆದು ಹೋದರೂ ನಟಿಯ ಕಡೆ ತಿರುಗಿ ಸಹಾ ನೋಡಿಲ್ಲ. ಈ ವಿಡಿಯೋ ಈಗ ವೈರಲ್ ಆಗ್ತಿದೆ.

ಮುಂಬೈನ ಕಟ್ಟಡವೊಂದರ ಗೇಟ್ ಮುಂದೆ ಸ್ವಿಗ್ಗಿ ಡೆಲಿವರಿ ಬಾಯ್ ನಿಂತಿದ್ದಾನೆ. ಹೊರಗಡೆ ಪಾಪರಾಜಿಗಳು ಯಾರಿಗಾಗಿಯೋ ನಿರೀಕ್ಷೆ ಮಾಡ್ತಿರೋವಾಗ ಎಲ್ಲಾ ಪಾಪರಾಜಿಗಳು (Paparazzi) ಜೋರಾಗಿ ಅರಚುತ್ತಾ ಸ್ವಿಗ್ಗಿ ಡಿಲೆವರಿ ಬಾಯ್ ನ ತಮ್ಮ ಫ್ರೇಮ್ ನಿಂದ ಹೊರಗಡೆ ಬರುವಂತೆ ಹೇಳಿದ್ದಾರೆ. ಆದರೆ ಡೆಲಿವರಿ ಬಾಯ್ ಗೆ ಅವರು ಯಾಕೆ ಹಾಗೆ ಹೇಳುತ್ತಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಆಗ ಪಾಪವಾಜಿಗಳು ಜೋರಾಗಿ ಅರಚಿ ಪಕ್ಕಕ್ಕೆ ಹೋಗು ಅಂದಿದ್ದಾರೆ.

ಆಗ ಡೆಲಿವರಿ ಬಾಯ್ ಕಟ್ಟಡದೊಳಕ್ಕೆ ಪ್ರವೇಶ ಮಾಡಿದ್ದು, ಈ ವೇಳೆ ಸ್ಟಾರ್ ನಟಿ ತಾಪ್ಸಿ ಪನ್ನು (Taapsi Pannu) ಕಟ್ಟಡದಿಂದ ಹೊರಗೆ ಬಂದಿದ್ದು, ಡಿಲೆವರಿ ಬಾಯ್ ಮುಂದೆ ಆತನಿಗೆ ಬಹಳ ಹತ್ತಿರದಿಂದ ಹಾದು ಹೋಗುತ್ತಾರೆ. ಆದರೆ ಡೆಲಿವರಿ ಬಾಯ್ ಮಾತ್ರ ಆರ್ಡರ್ ಕೊಟ್ಟಿದ್ದ ಗ್ರಾಹಕರು ಎಲ್ಲಿದ್ದಾರೆ ಅಂತ ಹುಡುಕುವ ಕಡೆಗೆ ಗಮನ ಕೊಟ್ಟಿದ್ದಾನೆ ಹೊರತು ಬ್ಲಾಕ್ ಡ್ರೆಸ್, ಕಪ್ಪು ಕನ್ನಡಕದೊಂದಿಗೆ ತನ್ನ ಮುಂದೆ ಬಂದಂತಹ ನಟಿಯ ಕಡೆಗೆ ತಿರುಗಿ ಕೂಡ ನೋಡಿಲ್ಲ.

ನಟಿಯು ಕಟ್ಟಡದಿಂದ ಹೊರಗೆ ಬರುತ್ತಿದ್ದ ಹಾಗೆ ಪಾಪರಾಜಿಗಳು ಫೋಟೋಗಳನ್ನು ಕ್ಲಿಕ್ ಮಾಡೋದಕ್ಕೆ ಶುರು ಮಾಡಿದ್ದಾರೆ. ವೈರಲ್ ವೀಡಿಯೋವನ್ನು ನೋಡಿದ ನೆಟ್ಟಿಗರು, ಡಿಲೆವರಿ ಬಾಯ್ ಕೆಲಸದ ಬಗ್ಗೆ ನೀಡಿರುವ ಶ್ರದ್ಧೆಗೆ ಮೆಚ್ಚುಗೆ ನೀಡಿದ್ದಾರೆ. ಕೆಲವರು, ಎಂಥಾ ಚಾನ್ಸ್ ಮಿಸ್ ಮಾಡ್ಕೊಂಡ್ ಬಿಟ್ಟೆ, ವೀಡಿಯೋ ವೈರಲ್ ಆದಾಗ ಅದನ್ನ ನೋಡು, ಆಗ ನಿನಗೆ ಗೊತ್ತಾಗುತ್ತೆ. ಪಕ್ಕದಲ್ಲೇ ಅಪ್ಸರೆ ಇದ್ರು ಯಾಕೆ ನೋಡ್ಲಿಲ್ಲ ಅಂತೆಲ್ಲಾ ಕಾಮೆಂಟ್ ಗಳನ್ನು ಮಾಡಿದ್ದಾರೆ.

Leave a Comment