Jr NTR: ಇಬ್ಬರು ಮಕ್ಕಳು ಹೀರೋ ಗಳಾಗೋದು ಬೇಡ; Jr. NTR ಆರು ನೂರಾದ್ರು ಮಕ್ಕಳನ್ನ ಆ ವೃತ್ತಿಗೆ ಕಳಿಸ್ತಾರಂತೆ

Written by Soma Shekar

Published on:

---Join Our Channel---

Jr NTR : ಪ್ರಸ್ತುತ ಸಿನಿಮಾ ಇಂಡಸ್ಟ್ರಿ (cinema industry) ಪರಿಸ್ಥಿತಿಯನ್ನು ನೋಡಿದಾಗ ನಮಗೆ ಅರ್ಥವಾಗೋದು ಏನಂದ್ರೆ ಸ್ಟಾರ್ ನಟನ ಮಗ ಅಥವಾ ಮಗಳು ಮುಂದೆ ಹೀರೋ ಅಥವಾ ಹೀರೋ, ನಿರ್ದೇಶಕನ ಮಕ್ಕಳು ಮುಂದೆ ಹೀರೋ ಅಥವಾ ಹಿರೋಯಿನ್ ಆಗ್ತಾರೆ ಅನ್ನೋ ಹಾಗಿದೆ. ಬೇರೆಲ್ಲಾ ಕ್ಷೇತ್ರಗಳಲ್ಲಿ ಇದು ಭಿನ್ನವಾಗಿರಬಹುದು ಆದರೆ ಸಿನಿಮಾ ರಂಗದಲ್ಲಿ ಮಾತ್ರ ಇದು ಸಾಮಾನ್ಯವಾಗಿದೆ. ಸಿನಿಮಾ ಸೆಲೆಬ್ರಿಟಿಗಳ ವಾರಸುದಾದರ ಬಹುತೇಕ ಮೊದಲ ಆಯ್ಕೆ ಸಿನಿಮಾ ರಂಗವೇ ಆಗ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಇಂತಹುದೊಂದು ವಾಡಿಕೆಯಿಂದಾಗಿ ಅನುಭವ, ತರಬೇತಿ ಇಲ್ಲದೇ ಹೋದರೂ ಬಹಳಷ್ಟು ಜನ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದು, ಪ್ರತಿಭಾವಂತರಿಗೆ ಸರಿಯಾದ ಅವಕಾಶವೇ ಸಿಗ್ತಿಲ್ಲ. ಆದರೆ ಈ ವಿಚಾರದಲ್ಲಿ ಟಾಲಿವುಡ್ ನ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ (Jr. NTR) ಅವರ ಆಲೋಚನೆ ಮಾತ್ರ ಬೇರೆಯವರಿಗಿಂತ ಭಿನ್ನವಾಗಿದೆ ಎಂದರೆ ಆಶ್ಚರ್ಯ ಆಗಬಹುದು. ಹಾಗಾದರೆ ಏನಿದು ವಿಚಾರ ಅಂತ ತಿಳಿಯೋಣ ಬನ್ನಿ.

ಜೂ. ಎನ್ ಟಿ ಆರ್ ಅವ್ರು ವಾರಸತ್ವ ಅನ್ನೋ ತರ ತಮ್ಮ ಇಬ್ಬರು ಮಕ್ಕಳು ಸಿನಿಮಾ ರಂಗಕ್ಕೆ ಬರಬೇಕು ಎನ್ನುವ ಒತ್ತಡ ಏನಿಲ್ಲ. ಯಾಕಂದ್ರೆ ಅವರು ತಮ್ಮ ಇಷ್ಟದ ಪ್ರಕಾರ, ತಮ್ಮ ಆಸಕ್ತಿ ಇರುವ ಕ್ಷೇತ್ರದಲ್ಲಿ ಗಮನ ನೀಡೋದಕ್ಕೆ ಮೊದಲ ಆದ್ಯತೆಯನ್ನು ಕೊಡ್ತೀನಿ. ತಮ್ಮ ಇಬ್ಬರು ಮಕ್ಕಳಾದ ಅಭಯ್ ರಾಮ್ (Abhay Ram) ಮತ್ತು ಭಾರ್ಗವ್ ರಾಮ್ ರನ್ನು (Bhargav Ram) ನಟರ ಬದಲಾಗಿ ಜನರಿಗೆ ಉಪಯೋಗ ಆಗುವಂತೆ ಡಾಕ್ಟರ್ ಗಳನ್ನಾಗಿ ಮಾಡಬೇಕೆನ್ನುವ ಆಲೋಚನೆ ಸಹಾ ನಟನಿಗೆ ಇದೆ ಎನ್ನಲಾಗಿದೆ.

ವಿಶೇಷ ಏನೆಂದರೆ ಎನ್ ಟಿ ಆರ್ ಅವರ ಇಬ್ಬರು ಮಕ್ಕಳು ಸಹಾ ತಾವು ನಟನೆಗೆ ಆಸಕ್ತಿ ತೋರದೇ ಡಾಕ್ಟರ್ ಗಳಾಗಬೇಕೆಂಬ ಕಡೆಗೆ ಆಸಕ್ತಿಯನ್ನು ಹೊಂದಿದ್ದಾರಂತೆ. ಜೂ. ಎನ್ ಟಿ ಆರ್ ಅವರ ಪತ್ನಿ ಲಕ್ಷ್ಮೀ ಪ್ರಣತಿ ಇಬ್ಬರೂ ಕೂಡಾ ಪತಿಯ ರೀತಿಯಲ್ಲೇ ನಿರ್ಧಾರವನ್ನು ಮಾಡಿದ್ದು, ಮಕ್ಕಳಿಬ್ಭರು ಸಿನಿಮಾ ನಟರೇ ಆಗಬೇಕು ಎನ್ನುವ ಆಸೆಯನ್ನು ಹೊಂದಿಲ್ಲ ಎನ್ನಲಾಗಿದೆ. ಈ ವಿಷಯ ಕೇಳಿ ಎನ್ ಟಿ ಆರ್ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

Leave a Comment