Thandel: ನಾಗಚೈತನ್ಯ ಕೆರಿಯರ್ ನಲ್ಲೇ ಇದೇ ಮೊದಲು, ಶಾಕ್ ನಲ್ಲಿ ತೆಲುಗು ಸಿನಿಮಾ ರಂಗ; ಸಾಯಿಪಲ್ಲವಿ ಜೊತೆ ನಾಗಚೈತನ್ಯ

Written by Soma Shekar

Published on:

---Join Our Channel---

Thandel Cinema : ಟಾಲಿವುಡ್ ನ ಯುವ ಸ್ಟಾರ್ ನಟ ನಾಗಚೈತನ್ಯ (Nagachaitanya) ಮತ್ತು ಲೇಡಿ ಪವರ್ ಸ್ಟಾರ್ ಖ್ಯಾತಿಯ ಸಹಜ ಸುಂದರಿ ಸಾಯಿ ಪಲ್ಲವಿ (Sai Pallavi) ಜೋಡಿಯಾಗಿ ಈ ಹಿಂದೆ ಲವ್ ಸ್ಟೋರಿ ಜೋಡಿಯಾಗಿ ನಟಿಸಿ ಎಲ್ಲರ ಮೇಲೆ ಮೋಡಿ ಮಾಡಿದ್ರು. ಈಗ ಮತ್ತೊಮ್ಮೆ ಹೊಸ ಸಿನಿಮಾ ‘ತಾಂಡೇಲ್’ (Thandel Cinema) ನಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳೋ ಮೂಲಕ ತಮ್ಮ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳನ್ನ ರಂಜಿಸೋಕೆ ಸಜ್ಜಾಗಿದ್ದಾರೆ. ಇನ್ನು ಈ ಸಿನಿಮಾ ಈಗ ಬಿಡುಗಡೆಗೆ ಮೊದಲೇ ದೊಡ್ಡ ಸದ್ದು ಮಾಡಿ ಶಾಕ್ ನೀಡಿದೆ.

ಹೌದು, ಬಿಡುಗಡೆಗೆ ಮೊದಲೇ ತಾಂಡೇಲ್ ಸಿನಿಮಾ ಬಿಡುಗಡೆಗೇ ಮೊದಲೇ ಭಾರೀ ದೊಡ್ಡ ಮೊತ್ತಕ್ಕೆ ಒಟಿಟಿಗೆ ಸೇಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಾಗಚೈತನ್ಯ ಅವರ ಸಿನಿ ಕೆರಿಯಲ್ ನಲ್ಲೇ ಇದೇ ಮೊದಲೇ ಬಾರಿಗೆ ಅವರ ಸಿನಿಮಾವೊಂದು ಇಷ್ಟೊಂದು ದುಬಾರಿ ಮೊತ್ತಕ್ಕೆ ಒಟಿಟಿಗೆ ಮಾರಾಟವಾಗಿದೆ. ತಾಂಡೇಲ್ ಸಿನಿಮಾ ಬಹು ಭಾಷೆಗಳಲ್ಲಿ ಪ್ರಸಾರವಾಗಲಿದ್ದು, ನೆಟ್ ಫ್ಲಿಕ್ಸ್ (Netflix) ಈ ಸಿನಿಮಾದ ಓಟಿಟಿ ಹಕ್ಕನ್ನು ಬರೋಬ್ಬರಿ 40 ಕೋಟಿ ರೂ.ಗೆ ಖರೀದಿ ಮಾಡಿದೆ.

ಓಟಿಟಿ ಹಕ್ಕು (OTT Rights) ಖರೀದಿಯ ವಿಚಾರ ಇನ್ನು ಚಿತ್ರತಂಡದಿಂದ ಅಧಿಕೃತವಾಗಿ ಹೊರಬೀಳಬೇಕಿದೆ. ತಾಂಡೇಲ್ ಸಿನಿಮಾವನ್ನು ನಿರ್ದೇಶಕ ಚಂದು ಮಾಂಡೇಟಿ ನಿರ್ದೇಶನ ಮಾಡಿದ್ದು, ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಸಾಯಿಪಲ್ಲವಿ ಮತ್ತು ನಾಗಚೈತನ್ಯ ಜೋಡಿಯಾಗಿ ನಟಿಸಿದ್ದ ಲವ್ ಸ್ಟೋರಿ ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯದೇ ಇದ್ದರೂ ಸಹಾ ಉತ್ತಮವಾದ ವಿಮರ್ಶೆಗಳನ್ನ ಪಡೆದುಕೊಂಡಿತ್ತು. ಸಿನಿ ಪ್ರೇಮಿಗಳ ಮನಸ್ಸನ್ನ ಗೆಲ್ಲುವಲ್ಲಿ ಲವ್ ಸ್ಟೋರಿ ಯಶಸ್ಸನ್ನ ಪಡೆದಿತ್ತು. ಈಗ ಮತ್ತೊಮ್ಮೆ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Comment