Naga Chaitanya: ಸಮಂತಾನ ಬಿಟ್ಮೇಲೆ ನಾಗಚೈತನ್ಯ ಸೀಕ್ರೇಟ್ ಅಫೇರ್ : ಈಗ ಸಾಕ್ಷಿ ಸಮೇತ ತಗ್ಲಾಕ್ಕೊಂಡ ನಟ

Written by Soma Shekar

Published on:

---Join Our Channel---

Naga Chaitanya: ಸ್ಟಾರ್ ನಟಿ ಸಮಂತಾಗೆ (Samantha) ವಿಚ್ಚೇದನ ನೀಡಿ ಅವರಿಂದ ದೂರಾದ ನಟ ನಾಗಚೈತನ್ಯ (Naga Chaitanya) ಅವರ ಹೆಸರ ಅನಂತರ ಮತ್ತೊಬ್ಬ ನಟಿ ಶೋಭಿತಾ ಧೂಳೀಪಾಳ ಜೊತೆಗೆ ತಳಕು ಹಾಕಿಕೊಂಡಿತ್ತು. ನಾಗಚೈತನ್ಯ ಮತ್ತು ಶೋಭಿತಾ (Shobhita) ವಿಚಾರವಾಗಿ ಒಂದಷ್ಟು ಸುದ್ದಿಗಳಾದವು. ಈಗ ಮತ್ತೊಮ್ಮೆ ಇವರ ವಿಚಾರ ಮುನ್ನೆಲೆಗೆ ಬಂದಿದೆ. ಈ ಹಿಂದೆ ಹರಡಿದ್ದ ಅವರ ಡೇಟಿಂಗ್ ಸುದ್ದಿಗೆ ಈಗ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ. ನಾಗಚೈತನ್ಯ ಮತ್ತು ಶೋಭಿತಾ ಒಟ್ಟಿಗೆ ಓಡಾಡ್ತಿರೋ ಫೋಟೋಗಳು ಈಗ ಬಹಿರಂಗವಾಗಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ನಾಗಪುರದ ತಿಪೇಶ್ವರ್ ವನ್ಯ ಜೀವಿ ಧಾಮಕ್ಕೆ ಶೋಭಿತಾ ಅವರು ಭೇಟಿ ನೀಡಿದ್ದರು, ಆ ಫೋಟೋಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾ (Social Media) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ರು. ನಟಿ ಕಾಡನ್ನು ಸುತ್ತಾಡುತ್ತಿರುವ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಈಗ ನಾಗಚೈತನ್ಯ ಅವರು ಒಂದು ಫೋಟೋ ಪೋಸ್ಟ್ ಅನ್ನು ಶೇರ್ ಮಾಡಿದ್ದು, ಇದರಲ್ಲೂ ಕಾಡಿನ ಬ್ಯಾಕ್ ಗ್ರೌಂಡ್ ಕಾಣಿಸಿದೆ.

ಶೋಭಿತಾ ಮತ್ತು ನಾಗಚೈತನ್ಯ ಶೇರ್ ಮಾಡಿದಂತಹ ಫೋಟೋಗಳನ್ನು ನೋಡಿದ ನಂತರ ನೆಟ್ಟಿಗರು ಇವರಿಬ್ಬರೂ ಸಹಾ ಜೊತೆಯಾಗಿ, ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ನಾಗಚೈತನ್ಯ ಮತ್ತು ಶೋಭಿತಾ ಲಂಡನ್ ಗೆ ತೆರಳಿದ್ದರು. ಆಗ ಹೊಟೇಲ್ ಒಂದರಲ್ಲಿ ಶೆಫ್ ನಾಗಚೈತನ್ಯ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಲ್ಲಿ ಹಿಂದೆ ಚೇರ್ ಮೇಲೆ ಶೋಭಿತಾ ಕುಳಿತಿರುವುದು ಕಂಡಿತ್ತು.

ಆ ಫೋಟೋ ವೈರಲ್ ಆದ ಮೇಲೆ ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಲು ಆರಂಭಿಸಿತ್ತು. ಇವರಿಬ್ಬರ ನಡುವಿನ ಡೇಟಿಂಗ್ ವಿಚಾರವಾಗಿ ಈಗಾಗಲೇ ಸಾಕಷ್ಟು ಸಾಕ್ಷಿಗಳು ಸಿಕ್ಕಿದ್ದರೂ ಸಹಾ ಇವರು ಮಾತ್ರ ತಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹೀಗೆ ಫ್ರೆಂಡ್ಸ್ ಎಂದು ಹೇಳಿಕೊಂಡೇ ಸೈಲೆಂಟಾಗಿ ಮದುವೆ ಸುದ್ದಿ ಸಹಾ ಕೊಟ್ಟು ಬಿಡ್ತಾರಾ ಅನ್ನೋ ಅನುಮಾನ ಖಂಡಿತ ಇದೆ.

Leave a Comment