Samantha: ಅಮಾಯಕ ಗಂಡನಿಗೆ ವಂಚಿಸಿದ್ಯಾಕೆ? ಎಂದವನಿಗೆ ತನ್ನದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಸಮಂತಾ

Written by Soma Shekar

Published on:

---Join Our Channel---

Samantha: ಸ್ಟಾರ್ ಜೋಡಿ ಸಮಂತಾ (Samantha) ಮತ್ತು ನಾಗಚೈತನ್ಯ (Naga Chaitanya) ವಿಚ್ಛೇದನ ಪಡೆದುಕೊಂಡು ಈಗಾಗಲೇ ಸಾಕಷ್ಟು ಸಮಯವಾಗಿದೆ. ಆದರೆ ಇವರ ವಿಚ್ಛೇದನಕ್ಕೆ ಅಸಲಿ ಕಾರಣ ಏನೆಂಬುದು ಮಾತ್ರ ಇಲ್ಲಿಯವರೆಗೂ ಎಲ್ಲೂ ಹೊರಗೆ ಬಂದಿಲ್ಲ. ಸಮಂತಾ ಅಥವಾ ನಾಗಚೈತನ್ಯ ಇಬ್ಬರಲ್ಲಿ ಯಾರೊಬ್ಬರೂ ಸಹಾ ಈ ವಿಚಾರವನ್ನ ಎಲ್ಲಿಯೂ ಮಾತನಾಡಿಲ್ಲ.‌ ಆದರೂ ಸಮಂತಾಗೆ ಮಾತ್ರ ಆಗಾಗ ಈ ವಿಚಾರವಾಗಿ ಒಂದಲ್ಲಾ ಒಂದು ಕಡೆ ಪ್ರಶ್ನೆಗಳು ಮಾತ್ರ ಎದುರಾಗುತ್ತಲೇ ಇರುತ್ತದೆ.‌

ಸಮಂತಾ ಮತ್ತು ನಾಗಚೈತನ್ಯ ಪ್ರೀತಿಸಿ ಮದುವೆಯಾದವರು.‌ ಮದುವೆಯ ನಂತರ ಸಂದರ್ಶನಗಳಲ್ಲಿ ಕೂಡಾ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡುವಾಗ ಇಬ್ಬರು ಮೇಡ್ ಫಾರ್ ಈಚ್ ಅದರ್ ಅನ್ನೋ ರೀತಿಯಲ್ಲಿ ಮಾತನಾಡುತ್ತಾ ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇವರು ವಿಚ್ಛೇದನವನ್ನು ಪಡೆದಿದ್ದು ಮಾತ್ರ ಎಲ್ಲರಿಗೂ ದೊಡ್ಡ ಶಾಕ್ ಅನ್ನು ನೀಡಿತ್ತು.

ಇನ್ನು ವಿಚ್ಚೇದನದ ನಂತರ ಸಮಂತಾ ಕುರಿತಾಗಿ ಒಂದಷ್ಟು ರೂಮರ್ ಗಳು ಹರಿದಾಡಿದವು. ನಟಿಯ ಬಗ್ಗೆ ಕೀಳು ಮಟ್ಟದಲ್ಲಿ ಕಾಮೆಂಟ್ ಗಳನ್ನು ಮಾಡಲಾಯಿತು ಮತ್ತು ಕೆಲವರು ನಟಿಯನ್ನು ಟೀಕಿಸುವ ವೀಡಿಯೋಗಳನ್ನ ಸಹಾ ಮಾಡಿದರು. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ನಟಿ ಮಾಡಿದ ಪೋಸ್ಟ್ ಒಂದಕ್ಕೆ ನೆಟ್ಟಿಗನೊಬ್ಬ ಮಾಡಿದ ಕಾಮೆಂಟ್ ವಿಚಾರ ಕೂಡಾ ಸುದ್ದಿಯಾಗಿದೆ.

ಸಮಂತಾ ಪೋಸ್ಟ್ ಗೆ ಕಾಮೆಂಟ್ ಮಾಡಿದ ವ್ಯಕ್ತಿಯೊಬ್ಬರು, ಅಮಾಯಕ ಗಂಡನಿಗೆ ಯಾಕೆ ಮೋಸ ಮಾಡಿದಿರಿ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾನೆ. ಇದಕ್ಕೆ ನಟಿ ಉತ್ತರವನ್ನು ನೀಡಿದ್ದಾರೆ. ಕ್ಷಮಿಸಿ, ನಿಮಗೆ ಈ ವಿಷಯಗಳೆಲ್ಲಾ ಬೇಕಾಗುವುದಿಲ್ಲ. ನನಗೆ ನನಗಿಂತ ಸ್ಟ್ರಾಂಗ್ ಆಗಿರುವುದು ಬೇಕಾಗಿದೆ. ನಿಮಗೆ ನಿಮ್ಮ ಜೀವನದಲ್ಲಿ ಎಲ್ಲಾ ಒಳ್ಳೆಯದೇ ಆಗ್ಲಿ ಎಂದು ನಟಿ ಬಹಳ ಸರಳವಾಗಿಯೇ ತಮ್ಮ ಮನಸ್ಸಿನ ನೋವನ್ನು ಶೇರ್ ಮಾಡಿದ್ದಾರೆ.

ನೆಟ್ಟಿಗನ ಕಾಮೆಂಟ್ ನೋಡಿದ ಬಹಳಷ್ಟು ಜನರು ಅದನ್ನು ಟೀಕೆ ಮಾಡಿದ್ದಾರೆ. ಅವರ ವೈಯಕ್ತಿಕ ಜೀವನದ ವಿಚಾರವನ್ನು ನಾವು ಪ್ರಶ್ನೆ ಮಾಡುವುದು ಸರಿಯಲ್ಲ, ಅವರ ಜೀವನದಲ್ಲಿ ಏನಾಗಿರುತ್ತೆ ಅನ್ನೋದು ನಮಗೆ ಗೊತ್ತಿರೋದಿಲ್ಲ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ನಟಿ ಸಮಂತಾ ಒಂದು ಸಣ್ಣ ಬ್ರೇಕ್ ನಂತರ ಮತ್ತು ನಟನೆಗೆ ಮರಳಿದ್ದು, ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್ ಘೋಷಣೆ ಆಗಲಿದೆ ಎನ್ನುವ ಸುದ್ದಿಗಳಿವೆ.

Leave a Comment