Niharika Konidela: ಮೆಗಾ ಫ್ಯಾಮಿಲಿ ಮಗಳಿಗೆ ಮತ್ತೊಮ್ಮೆ ಲವ್? ನಿಹಾರಿಕಾ ಬದುಕಿಗೆ ಎಂಟ್ರಿ ಕೊಡ್ತಿರೋದು ಯಾರು?

Written by Soma Shekar

Published on:

---Join Our Channel---

Niharika Konidela: ಸೆಲೆಬ್ರಿಟಿಗಳ ಜೀವನದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಛೇದನ ಮತ್ತು ವಿಚ್ಚೇದನದ ನಂತರ ಮತ್ತೆ ಬೇರೆ ಅವರ ಮೇಲೆ ಲವ್ ಆಗೋದು ಸಹಾ ಸಾಮಾನ್ಯ ಅನ್ನೋ ತರ ಆಗಿದೆ. ಬಾಲಿವುಡ್ (Bollywood) ನಲ್ಲಾದರೇ ಸ್ಟಾರ್ ಗಳ ಮಕ್ಕಳ ವಿಚಾರದಲ್ಲೂ ಇಂತಹುದೇ ಬೆಳವಣಿಗೆಗಳು ತೀರಾ ಸಾಮಾನ್ಯ ಅನ್ನೋದು ಸಹಾ ಸುಳ್ಳಲ್ಲ. ಈಗ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ಮಗಳ ಜೀವನದಲ್ಲಿ ಕೂಡಾ ಇಂತಹುದೊಂದು ಬೆಳವಣಿಗೆ ಕಂಡು ಬಂದಿದೆ. ಹೌದು, ಮೆಗಾಸ್ಟಾರ್ ಚಿರಂಜೀವಿ ಅವರ ತಮ್ಮ ನಾಗ ಬಾಬು ಅವರ ಮಗಳು ನಿಹಾರಿಕ ಕೊನಿಡಾಲ ಜೀವನದ ಬಗ್ಗೆ ಆಗಾಗ ಸುದ್ದಿಗಳಾಗುತ್ತಲೇ ಇರುತ್ತದೆ.

ನಿಹಾರಿಕ (Niharika Konidela) ಕಿರುತೆರೆಯಲ್ಲಿ ನಿರೂಪಕಿಯಾಗಿ, ಹಿರಿತೆರೆಯಲ್ಲಿ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನಾಯಕಿಯಾಗಿ ಅವರಿಗೆ ದೊಡ್ಡ ಸ್ಟಾರ್ ಡಂ ದೊರೆತಿಲ್ಲವಾದರೂ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ನಿಹಾರಿಕ ಅವರು ವೆಬ್ ಸಿರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇವೆಲ್ಲವುಗಳ ನಡುವೆ ನಟಿಯ ಮದುವೆ ವಿಚಾರವು ಸುದ್ದಿಯಾಗ್ತಿದೆ.

ನಿಹಾರಿಕ ಪತಿ ಚೈತನ್ಯ ಅವರಿಗೆ ವಿಚ್ಛೇದನ ನೀಡಿ ದೂರಾದ ಮೇಲೆ ಸಿನಿಮಾಗಳು ಮತ್ತು ವೆಬ್ ಸಿರೀಸ್ ಗಳಲ್ಲೂ ಬ್ಯುಸಿಯಾಗಿದ್ದಾರೆ. ವಿಚ್ಛೇದನದ ಬಳಿಕ ನಿಹಾರಿಕ ಸೋಲೋ ಆಗಿ ವರ್ಲ್ಡ್ ಟೂರ್ ಮಾಡುತ್ತಿದ್ದಾರೆ. ತಮಿಳು ಸಿನಿಮಾ ರಂಗಕ್ಕೂ ಎಂಟ್ರಿಯನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಆಗಾಗ ಹಾಟ್ ಮತ್ತು ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಇತ್ತೀಚಿಗೆ ನಟಿಯೊಂದು ಫೋಟೋವನ್ನು ಶೇರ್ ಮಾಡಿದ್ದರು. ಅದು ಎರಡು ಆನೆಗಳು ಪ್ರೀತಿಯಿಂದ ಹತ್ತಿರವಾದಂತೆ ಕಾಣುವ ಚಿತ್ರ. ಇದನ್ನು ನೋಡಿದ ನೆಟ್ಟಿಗರು ಬಹುಶಃ ನಿಹಾರಿಕಾಗೆ ಮತ್ತೆ ಲವ್ ಆಗಿರಬೇಕು ಎಂದು ಅನುಮಾನವನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆದರೆ ನಟಿಯ ಅಭಿಮಾನಿಗಳು ಮಾತ್ರ ಇದೆಲ್ಲಾ ಕೇವಲ ಸುದ್ದಿಗಳಷ್ಟೇ ಇದರಲ್ಲಿ ಯಾವುದೂ ನಿಜವಿಲ್ಲ ಎನ್ನುತ್ತಿದ್ದಾರೆ.

Leave a Comment