Naga Chaitanya: ಅಮ್ಮ ಅಮೆರಿಕಾದಲ್ಲಿ, ಮಗ ಇಲ್ಲಿ; ನಾಗಚೈತನ್ಯ ತಮ್ಮ ತಾಯಿಯಿಂದ ದೂರ ಇರೋದ್ಯಾಕೆ?

Written by Soma Shekar

Published on:

---Join Our Channel---

Naga Chaitanya: ಟಾಲಿವುಡ್ ನ ಯುವ ಸ್ಟಾರ್ ಅಕ್ಕಿನೇನಿ ನಾಗಚೈತನ್ಯ (Naga Chaitanya) ಹಿರಿಯ ಸ್ಟಾರ್ ನಟ ಅಕ್ಕಿನೇನಿ ನಾಗರ್ಜುನ (Akkineni Nagarjuna) ಅವರ ಮಗ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ನಾಗಾರ್ಜುನ ಮತ್ತು ಅವರ ಮೊದಲ ಪತ್ನಿ ಲಕ್ಷ್ಮೀ ದಗ್ಗುಬಾಟಿ ಅವರ ಸಂತಾನವೇ ನಾಗಚೈತನ್ಯ. ಲಕ್ಷ್ಮೀ ದಗ್ಗುಬಾಟಿ ಅವರು ಅಮೆರಿಕಾದಲ್ಲಿ ನೆಲಸಿದ್ದು, ನಾಗಚೈತನ್ಯ ತಮ್ಮ ತಾಯಿಯಿಂದ ದೂರದಲ್ಲಿ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ. ಹೀಗೆ ನಾಗಚೈತನ್ಯ ತಾಯಿಯಿಂದ ದೂರ ಇರುವುದಕ್ಕೆ ಕಾರಣವೇನು?

ಲಕ್ಷ್ಮಿ ದಗ್ಗುಬಾಟಿ (Lakshmi Daggubati) ಯಾರು ಎನ್ನುವುದಾದರೆ ಇವರು ಟಾಲಿವುಡ್ ನ ದಿಗ್ಗಜ ನಿರ್ಮಾಪಕ ರಾಮನಾಯ್ಡು ಅವರ ಪುತ್ರಿ. ತೆಲುಗಿನ ಸ್ಟಾರ್ ನಟ ವೆಂಕಟೇಶ್ ಅವರ ಸಹೋದರಿ. ನಾಗಾರ್ಜುನ ಅವರು ಲಕ್ಷ್ಮೀ ದಗ್ಗುಬಾಟಿ ಅವರ ಜೊತೆಗೆ 1984 ರಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ನಾಗಚೈತನ್ಯ ಹುಟ್ಟಿದ ನಾಲ್ಕು ವರ್ಷಗಳ ನಂತರ ವೈಯಕ್ರಿಕ ಕಾರಣಗಳಿಂದ ನಾಗಾರ್ಜುನ ಲಕ್ಷ್ಮೀ ದಗ್ಗುಬಾಟಿ ಅವರಿಗೆ ವಿಚ್ಛೇದನ ನೀಡಿದರು.

ವಿಚ್ಛೇದನದ ನಂತರ ಲಕ್ಷ್ಮೀ ದಗ್ಗುಬಾಟಿ ಅವರು ಮಗನ ಜೊತೆಗೆ ಚೆನ್ನೈಗೆ ತೆರಳಿದರು. ನಾಗಚೈತನ್ಯ ಅವರು ಸಹಾ ಹದಿನೆಂಟು, ಹತ್ತೊಂಬತ್ತನೆಯ ವಯಸ್ಸಿನವರೆಗೆ ತಮ್ಮ ತಾಯಿಯ ಜೊತೆಗೆ ಬೆಳೆದರು. ಬಾಲ್ಯದಲ್ಲಿ ತನ್ನ ತಾಯಿಯ ನಿರ್ಧಾರಗಳಿಂದಲೇ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾದವು ಎಂದಿರುವ ನಾಗಚೈತನ್ಯ ತಮ್ಮ ತಾಯಿ ಬಹಳ ಪ್ರಾಮಾಣಿಕರು, ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತೆ ಎಂದಿದ್ದಾರೆ.

ನಾಗಾರ್ಜುನ ಅವರಿಂದ ವಿಚ್ಛೇದನ ಪಡೆದ ಮೇಲೆ ಲಕ್ಷ್ಮೀ ದಗ್ಗುಬಾಟಿ ಅವರು ಸುಂದರಂ ಮೋಟಾರ್ಸ್‌ನ ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಶರತ್ ವಿಜಯರಾಘವನ್ ಅವರ ಜೊತೆಗೆ ಎರಡನೇ ಬಾರಿಗೆ ವಿವಾಹ ಜೀವನಕ್ಕೆ ಅಡಿಯಿಟ್ಟರು. ಲಕ್ಷ್ಮೀ ದಗ್ಗುಬಾಟಿ ಅವರು ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದು ತಮ್ಮದೇ ಆದ ಲಕ್ಷ್ಮಿ ಇಂಟೀರಿಯರ್ಸ್ ಸಂಸ್ಥಾಪಕಿಯಾಗಿದ್ದಾರೆ.‌

ಲಕ್ಷ್ಮೀ ದಗ್ಗುಬಾಟಿ ಅವರು ಎರಡನೇ ಮದುವೆಯ ನಂತರ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಆದರೆ ನಾಗಚೈತನ್ಯ ಅವರು ಮಾತ್ರ ಹೈದರಾಬಾದ್ ನಲ್ಲೇ ನೆಲೆಸಿದ್ದಾರೆ. ತನಗೆ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆಯಿಂದಲೇ ತಾನು ತಾಯಿಯಿಂದ ದೂರದಲ್ಲಿ ಹೈದರಾಬಾದ್ ನಲ್ಲಿ ಉಳಿದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಸದ್ಯಕ್ಕೆ ಸಮಂತಾಗೆ ವಿಚ್ಛೇದನ ಕೊಟ್ಟ ನಂತರ ನಾಗಚೈತನ್ಯ ಒಂಟಿಯಾಗಿಯೇ ಇದ್ದಾರೆ.

Leave a Comment