Amrutadhare Serial: ಗೌತಮ್ ಭೂಮಿಕಾ ಜಾತಕ ದೋಷ, ದೂರ ಇರಬೇಕು, ಶಾಸ್ತ್ರಿಗಳ ಮಾತು, ಛೇ ಬೋರಿಂಗ್ ಅಂದ್ರು ನೆಟ್ಟಿಗರು

Written by Soma Shekar

Published on:

---Join Our Channel---

Amruthadhare : ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಮೃತಧಾರೆ (Amrutadhare) ಟಾಪ್ ಐದರಲ್ಲಿ ಸ್ಥಾನವನ್ನು ಪಡೆದಿರುವಂತಹ ಸೀರಿಯಲ್ ಆಗಿದೆ. ಇದೇ ವೇಳೆ ಈ ಸೀರಿಯಲ್ ನ ವಿಭಿನ್ನವಾದ ಕಥಾಹಂದರವನ್ನು ನೋಡಿದ ಪ್ರೇಕ್ಷಕರು ಸಹಾ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದರು. ಈಗ ಝೀ ಕನ್ನಡ ವಾಹಿನಿಯು ಇಂದಿನ ಎಪಿಸೋಟ್ ನ ಪ್ರೊಮೋವನ್ನು ಶೇರ್ ಮಾಡಿಕೊಂಡಿದ್ದು, ಗೌತಮ್ ಮತ್ತು ಭೂಮಿಕಾ ಹತ್ತಿರವಾಗೋದನ್ನ ತಡೆಯೋದಕ್ಕೆ ಶಕುಂತಲಾ ದೇವಿ ಹೂಡಿರುವ ಹೊಸ ತಂತ್ರ, ಖತರ್ನಾಕ್ ಪ್ಲಾನ್ ನೋಡಿ ನೆಟ್ಟಿಗರು ಬೇಸರವನ್ನು ಹೊರ ಹಾಕುತ್ತಿದ್ದಾರೆ.

ಅಮೃತಧಾರೆ ಸೀರಿಯಲ್ ನ ಈ ಹೊಸ ಟ್ವಿಸ್ಟ್ ಅನ್ನು ನೋಡಿದ ನೆಟ್ಟಿಗರು ಅಮೃತಧಾರೆ ಸೀರಿಯಲ್ ಕೂಡಾ ಎಲ್ಲಾ ಸೀರಿಯಲ್ ಗಳ ದಾರಿಗೆ ಬರ್ತಿರೋ ಹಾಗೆ ಕಾಣಿಸ್ತಿದೆ ಅಂತ ಅಸಮಾಧಾನ ಹೊರ ಹಾಕ್ತಾ ಇದ್ದಾರೆ. ಮನೆಗೆ ಬಂದ ಶಾಸ್ತ್ರಿಗಳು ಗೌತಮ್ ಮತ್ತು ಭೂಮಿಕಾ ಜಾತಕದಲ್ಲಿ ದೋಷವಿದೆ, ಅಸಲಿಗೆ ಅವರು ಮದುವೇನೇ ಆಗಬಾರದಾಗಿತ್ತು ಅನ್ನೋ ಮಾತನ್ನು ಹೇಳೋ ಮೂಲಕ ದೊಡ್ಡ ಶಾಕ್ ಅನ್ನು ನೀಡಿದ್ದಾರೆ.

ಇತ್ತೀಚಿಗಷ್ಟೇ ಗೌತಮ್ (Gowtham) ಮತ್ತು ಭೂಮಿಕಾ (Bhumika) ನಡುವೆ ಪ್ರೀತಿ ಅರಳುವುದನ್ನು ನೋಡುತ್ತಾ, ಅದನ್ನು ಮೆಚ್ಚಿದ್ದ ಪ್ರೇಕ್ಷಕರಿಗೆ ಈ ಹೊಸ ಟ್ವಿಸ್ಟ್ ಶಾಕ್ ನೀಡಿದೆ. ಜ್ಯೋತಿಷಿಯು ಗೌತಮ್ ಮತ್ತು ಭೂಮಿಕಾ ಜಾತಕ ಹೊಂದಾಣಿಕೆ ಆಗುವುದಿಲ್ಲ, ಅವು ಒಂದಕ್ಕೊಂದು ವಿರುದ್ಧವಾಗಿದೆ ಹಾಗೂ ನೀವಿಬ್ಬರೂ ಮದುವೇನೇ ಆಗಬಾರದಿತ್ತು ಎಂದು ಹೇಳಿದ್ದಾರೆ. ಇಷ್ಟು ಸಾಲದು ಎನ್ನವಂತೆ ದೈಹಿಕವಾಗಿ ನೀವಿಬ್ರು ದೂರವೇ ಇರಬೇಕು ಎನ್ನುವ ಎಚ್ಚರಿಕೆಯನ್ನು ಸಹಾ ನೀಡಿದ್ದಾರೆ.

ಒಂದು ವೇಳೆ ಇದನ್ನ ಪಾಲಿಸದೇ ಹೋದ್ರೆ ಹೆಂಡತಿಯನ್ನ ಕಳೆದುಕೊಳ್ಳಬಹುದು ಅನ್ನೋ ಮಾತನ್ನು ಹೇಳಿದ್ದಾರೆ. ಭೂಮಿಕಾ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಇರೋ ಡುಮ್ಮ ಸರ್ ಇನ್ನು ಹೆಂಡತಿಯಿಂದ ದೂರ ಉಳಿಯೋದು ಪಕ್ಕಾ. ಇದನ್ನೆಲ್ಲಾ ನೋಡಿದ ಪ್ರೇಕ್ಚಕರಿಗೆ ಇದು ಶಕುಂತಲಾ ದೇವಿಯ ಪ್ಲಾನ್ ಅನ್ನೋದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಲ್ಲಿಗೆ ಕಥೆ ಮುಂದೇನಾಗುತ್ತೆ ಅನ್ನೋದನ್ನ ಜನ ಗೆಸ್ ಮಾಡಿ ಎಲ್ಲಾ ಸೀರಿಯಲ್ ಗಳ ಕಥೆ ಕೂಡಾ ಇದೇ ಅಂತ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಗೌತಮ್ ಭೂಮಿಕಾಗೆ ಪ್ರಪೋಸ್ ಮಾಡಲು ಸಜ್ಜಾಗಿದ್ದರೆ, ಮತ್ತೊಂದು ಕಡೆ ಭೂಮಿಕಾ ಗೌತಮ್ ಗಾಗಿ ಲವ್ ಲೆಟರ್ ಅನ್ನು ಬರೆದಿದ್ದು ಈ ವಿಷಯ ಮಗಳಿಂದ ತಿಳಿದುಕೊಂಡ ಶಕುಂತಲಾ ದೇವಿ ಅವರಿಬ್ಬರು ಒಂದಾದ್ರೆ ತನಗೆ ಉಳಿಗಾಲವಿಲ್ಲ ಎಂದು ಅರ್ಥ ಮಾಡಿಕೊಂಡು, ಇಂತದೊಂದು ಕುತಂತ್ರವನ್ನು ಮಾಡಿ ಗೌತಮ್ ಮತ್ತು ಭೂಮಿಕಾನ ದೂರ ಇಡೋ ಪ್ರಯತ್ನಕ್ಕೆ ಮುಂದಾಗಿದ್ದು, ಬಹಳಷ್ಟು ಜನರಿಗೆ ಬೇಸರ ಮೂಡಿಸಿದೆ.

Leave a Comment