Bigg Boss: ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರಾಂತ್ಯದ ಎಪಿಸೋಡ್ ಬೆಂಕಿ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ ನೆಟ್ಟಿಗರು. ತಪ್ಪು ಮಾಡಿದ ಇಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ. ಇದೇ ವೇಳೆ ನಾವೇನು ತಪ್ಪೇ ಮಾಡಿಲ್ಲ ಅನ್ನೋ ಭ್ರಮೆಯಲ್ಲಿ ಮನೇಲಿ ಇರೋರಿಗೆ ಚಳಿ ಬಿಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಕಿಚ್ಚ ಸುದೀಪ್ (Kichcha Sudeep).
![](https://news9kannada.com/wp-content/uploads/2024/10/Bigg-Boss-kannada-Second-Promo-7-2024-10-1dc7081a833e08651f9e492231baf7c2.jpg)
ಮನೆಯಲ್ಲಿ ಜಗದೀಶ್ (Jagadish) ಅವರ ಜೊತೆಗೆ ಮಾತಿಗೆ ಮಾತು ಬೆಳೆದಾಗಲೆಲ್ಲಾ ಚೈತ್ರಾ ಕುಂದಾಪುರ ಅವರು ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಮಾತಾಡಲಿ ಎನ್ನುವ ಮಾತನ್ನು ಆಡಿದ್ದರು. ಈಗ ಕಿಚ್ಚ ಸುದೀಪ್ ಅವರು ಅದೇ ವಿಷಯವನ್ನು ಮಾತನಾಡಿದ್ದಾರೆ.
![](https://news9kannada.com/wp-content/uploads/2024/10/Bigg-Boss-kannada-Second-Promo-5-2024-10-f7013ec6d1fe06e533a1454f135d32b2.jpg)
ಚೈತ್ರಾ (Chaithra Kundapura) ಅವರೇ ಹೆಣ್ಣು ಮಕ್ಕಳ ಬಗ್ಗೆ ಹೀಗೆ ಮಾತನಾಡಬೇಡಿ ಎನ್ನುತ್ತೀರಿ. ಒಬ್ಬ ಅಪ್ಪನಿಗೆ ಹುಟ್ಟಿದ್ದಿ ಅಂತಿರಲ್ಲ.. ಅದು ಅಪ್ಪನಿಗೆ ಬೈತಾ ಇರೋದಲ್ಲ ಅದು ತಾಯಿಗೆ ಬೈತಾ ಇರೋದು ಮೇಡಂ! ಎಂದು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ.
![](https://news9kannada.com/wp-content/uploads/2024/10/InCollage_20241019_182119432-1024x768.jpg)
ಪ್ರಾಮಾಣಿಕತೆ ಬಗ್ಗೆ ಹೇಳಲು ಹೊರಟ ಹಂಸ ಅವರಿಗೆ, ಮಾನಸ ಅವರ ಮಾತಿನ ಧಾಟಿಯ ಬಗ್ಗೆ ಮತ್ತು ಆಡಿರುವ ಮಾತುಗಳ ಕುರಿತಾಗಿ ಕಿಚ್ಚ ಸುದೀಪ್ ಅವರು ಮನೆ ಮಂದಿಗೆ ಸರಿಯಾಗಿ ಕ್ಲಾಸ್ ಅನ್ನು ತೆಗೆದುಕೊಂಡಿದ್ದಾರೆ. ಈ ವೀಕೆಂಡ್ ಎಪಿಸೋಡ್ ಗಾಗಿ ಬಹಳಷ್ಟು ಜನ ಕಾಯ್ತಾ ಇದ್ದಾರೆ.
Bigg Boss Kannada ಇದು ಶೋ ಅಷ್ಟೇ, ತಾಳಿ ತೋರಿಸೋ ಅವಶ್ಯಕತೆ ಇಲ್ಲ ಅಂತ ಮಾನಸ ಮೇಲೆ ಸಿಟ್ಟಾದ ಜನ