Vijaya Devarakonda: ರಿಲೇಶಿನ್ ಶಿಪ್ ನಲ್ಲಿದ್ದೇನೆಂತ ಒಪ್ಕೊಂಡ ವಿಜಯ ದೇವರಕೊಂಡ; ಆದ್ರೆ ರಶ್ಮಿಕಾ ಜೊತೆ ಅಲ್ಲ

Written by Soma Shekar

Published on:

---Join Our Channel---

Vijaya Devarakonda: ಟಾಲಿವುಡ್ ನ (Tollywood) ಸ್ಟಾರ್ ನಟ ವಿಜಯ ದೇವರಕೊಂಡ (Vijaya Devarakonda) ಸದ್ಯಕ್ಕಂತೂ ತಮ್ಮ‌ ಮುಂದಿನ ಸಿನಿಮಾ ಫ್ಯಾಮಿಲಿ ಸ್ಟಾರ್ ನ ಪ್ರಮೋಷನ್ ಕೆಲಸಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಈ ಹಿಂದೆ ವಿಜಯ ದೇವರಕೊಂಡ ನಟಿಸಿದ್ದ ಲೈಗರ್ ಹೀನಾಯ ಸೋಲು ಕಂಡರೆ, ಸಮಂತಾ ಜೊತೆಗೆ ನಟಿಸಿದ್ದ ಖುಷಿ ಸಿನಿಮಾ ಸಾಧಾರಣ ಗೆಲುವನ್ನ ಕಂಡಿತ್ತು‌. ಆದ್ದರಿಂದಲೇ ನಟ ಈಗ ಒಂದು ದೊಡ್ಡ ಸೂಪರ್ ಹಿಟ್ ನ ನಿರೀಕ್ಷೆಯಲ್ಲಿದ್ದು, ಫ್ಯಾಮಿಲಿ ಸ್ಟಾರ್ (Family Star) ಸಿನಿಮಾ ಬಗ್ಗೆ ನಟ ಮತ್ತು ನಟನ ಅಭಿಮಾನಿಗಳು ಕೂಡಾ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.

ವಿಜಯ್ ದೇವರಕೊಂಡ ತಮ್ಮ ಹೊಸ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಿರುವಾಗಲೇ ತಮ್ಮ ರಿಲೇಶನ್ ಶಿಪ್ ಬಗ್ಗೆ ಸಹಾ ಮಾತನಾಡಿದ್ದಾರೆ. ನಟ ವಿಜಯ ದೇವರಕೊಂಡ ಮತ್ತು ರಶ್ಮಿಕಾ (Rashmika) ನಡುವಿನ ಸ್ನೇಹದ ಕುರಿತಾಗಿ ಆಗಾಗ ಸುದ್ದಿಗಳು ಆಗ್ತಾನೇ ಇರುತ್ತೆ. ಅಲ್ಲದೇ ಅವರ ನಡುವೆ ಸ್ನೇಹಕ್ಕಿಂತ ಬೇರೇನೋ ಇದೆ ಅನ್ನೋ ಗಾಸಿಪ್ ಗಳು ಆಗಾಗ ಹರಿದಾಡುತ್ತಾ ಚರ್ಚೆಗಳಾಗುತ್ತಲೇ ಇರುತ್ತವೆ.

ಇನ್ನು ಸಿನಿಮಾ ಪ್ರಮೋಷನ್ ವೇಳೆಯಲ್ಲಿ ನಿರೂಪಕರು ವಿಜಯ್ ದೇವರಕೊಂಡ ಅವರನ್ನ ನೀವು ರಿಲೇಶನ್ ಶಿಪ್ ನಲ್ಲಿ ಇದ್ದೀರಾ? ಯಾರ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇದ್ದೀರಾ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ವಿಜಯ್ ಸಹಾ ಸಖತ್ ಉತ್ತರವನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹಾಗಾದ್ರೆ ವಿಜಯ ದೇವರಕೊಂಡ ಹೇಳಿದ್ದಾದ್ರು ಏನು? ಅನ್ನೋದನ್ನ ನೋಡೋಣ ಬನ್ನಿ.

ವಿಜಯ್ ದೇವರಕೊಂಡ ನಿರೂಪಕನ ಪ್ರಶ್ನೆಗೆ ಉತ್ತರವನ್ನು ನೀಡಿದ್ದು, ಹೌದು ನಾನು ರಿಲೇಶನ್ ಶಿಪ್ ನಲ್ಲಿ ಇದ್ದೇನೆ, ನಾನು ನನ್ನ ತಂದೆ ತಾಯಿ ಜೊತೆಗೆ, ನನ್ನ ಸಹೋದರನ ಜೊತೆಗೆ ಮತ್ತು ನಿಮ್ಮೆಲ್ಲರ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇದ್ದೀನಿ ಎಂದು ತಮ್ಮ ಹೇಳಿಕೆಯಲ್ಲೇ ಒಂದು ಟ್ವಿಸ್ಟ್ ಅನ್ನು ನೀಡಿದ್ದಾರೆ. ಇನ್ನು ವಿಜಯ ದೇವರಕೊಂಡ ಹೊಸ ಸಿನಿಮಾ ವಿಚಾರವಾಗಿ ಟ್ವೀಟ್ ಮಾಡಿದ್ದ ರಶ್ಮಿಕಾ ವಿಜಯ್ ನ ಡಾರ್ಲಿಂಗ್ ಅಂದಿದ್ದ ವಿಚಾರ ಕೂಡಾ ವೈರಲ್ ಆಗಿತ್ತು.

Leave a Comment