Chattisgarh: OYO ಮುಚ್ಚಿಸಿದ್ದೀರಾ, ಈಗ ನೀವೇ ರೂಮ್ ಕೊಡ್ಸಿ: ಶಾಸಕರ ಮುಂದೆ ಲವರ್ಸ್ ಶಾಕಿಂಗ್ ಬೇಡಿಕೆ

Written by Soma Shekar

Published on:

---Join Our Channel---

Chattisgarh : ಪಾರ್ಕ್​ ಅನ್ನೋದು ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳಿಗೆ (Lovers) ಸರಸ ಸಲ್ಲಾಪ ನಡೆಸುತ್ತಾ ಏಕಾಂತವಾಗಿ ಸಮಯ ಕಳೆಯುವ ತಾಣವಾಗಿ ಬದಲಾಗಿದೆ. ಏಕಾಂತವನ್ನು ಬಯಸುವ ಜೋಡಿಗಳು ಪಾರ್ಕ್ ನಲ್ಲಿ ಸಮಯ ಕಳೆಯೋದು ಸಾಮಾನ್ಯವಾದ ವಿಚಾರವೇ ಆಗಿದೆ. ಆದರೆ ಹೀಗೆ ಲವರ್ಸ್​​​​​​ ಏಕಾಂತದಲ್ಲಿ ಸಮಯವನ್ನು ಕಳೆಯೋವಾಗ ಸ್ಥಳೀಯ ಶಾಸಕರೊಬ್ಬರು ಪಾರ್ಕ್ ವೊಂದರ ಮೇಲೆ ದಾಳಿಯನ್ನು ನಡೆಸಿದ್ದಾರೆ.

ಶಾಸಕರು ಪಾರ್ಕ್ ನಲ್ಲಿ ಸಮಯ ಕಳೆಯುತ್ತಿದ್ದ ಪ್ರೇಮಿಗಳಿಗೆ ಅಲ್ಲಿಂದ ಹೊರಡುವಂತೆ ಸೂಚನೆಯನ್ನು ನೀಡಿದ್ದಾರೆ. ಆದರೆ ಅವರ ಈ ಕ್ರಮದಿಂದ ಒಬ್ಬ ಪ್ರೇಮಿ ರೊಚ್ಚಿಗೆದ್ದು, OYO ರೂಮ್ ಗಳನ್ನ ಮುಚ್ಚಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವೇ OYO ರೂಮ್ ಗಳನ್ನು ಮಾಡಿ ಎಂದು ಹೇಳಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಈಗ ವೈರಲ್ ಆಗಿದೆ.

ಛತ್ತೀಸ್​​​ಗಢದ (Chattisgarh) ಶಾಸಕ ರಿಕೇಶ್​ ಸೇನ್​​​ (Rikesh Sen) ಅವರು ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಭಾರೀ ವೈರಲ್ ಆಗಿದೆ. ಶಾಸಕರು ಕಾರಿನಲ್ಲಿ ಬಂದು ಪಾರ್ಕ್ ಹತ್ತಿರ ಇಳಿದು, ತಮ್ಮ ಸಹಾಯಕನಿಗೆ ಎಲ್ಲವನ್ನೂ ವೀಡಿಯೋ ಮಾಡುವಂತೆ ಹೇಳಿದ್ದಾರೆ. ಅನಂತರ ಅವರು ಪಾರ್ಕ್ ನಲ್ಲಿ ಇದ್ದ ಪ್ರೇಮಿಗಳಿಗೆ ಅಲ್ಲಿಂದ ಹೊರಡುವಂತೆ ಸೂಚನೆಯನ್ನು ನೀಡಿದ್ದಾರೆ. ಆಗಲೇ ಯುವಕನೊಬ್ಬ ಶಾಸಕರ ನಡೆಯನ್ನು ಪ್ರಶ್ನೆ ಮಾಡಿದ್ದಾನೆ.

ನಾವು ಏಲ್ಲಿಗೆ ಹೋಗ್ಬೇಕು. ಈಗಾಗಲೇ ನೀವು OYO ಮುಚ್ಚಿಸಿದ್ದೀರಾ? ನಮಗೆ OYO ವ್ಯವಸ್ಥೆ ಮಾಡಿ ಎಂದು ಕೇಳಿದ್ದಾನೆ. ಇದರಿಂದ ಕೋಪಗೊಂಡ ಶಾಸಕರು OYO ಬದಲು ನಿಮ್ಮ ಮನೆಯಲ್ಲೇ ಟೈಮ್​​ ಪಾಸ್​​ ಮಾಡಿ ಎಂದು ಉತ್ತರ ಕೊಟ್ಟಿದ್ದಾರೆ. ಈ ಘಟನೆ ಬಿಲಾಯಿ ನಗರದಲ್ಲಿರುವ ಪಾರ್ಕ್ ನಲ್ಲಿ ನಡೆದಿದೆ. ಪಾರ್ಕ್ ನಲ್ಲಿ ಪ್ರೇಮಿಗಳ ಹಾವಳಿಯಿಂದ ಬೇಸತ್ತ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದರು ಎನ್ನಲಾಗಿದೆ.

Leave a Comment