Kodishree Prediction: ಎದುರಾಗಲಿದೆ ಪಂಚಘಾತಕಗಳು, ಕೋಡಿಶ್ರೀ ನುಡಿದ ಶಾಕಿಂಗ್ ಭವಿಷ್ಯವಾಣಿ

Written by Soma Shekar

Published on:

---Join Our Channel---

Kodishree Prediction: ಕೋಡಿಮಠದ ಸ್ವಾಮೀಜಿಗಳು (Kodishree Prediction) ಆಗಾಗ ದೇಶದ ಪರಿಸ್ಥಿತಿಗಳ ಕುರಿತಾಗಿ, ರಾಜಕೀಯ ಆಗುಹೋಗುಗಳು ಹಾಗೂ ಮಳೆಗೆ ಸಂಬಂಧಿಸಿದಂತೆ ಭವಿಷ್ಯವಾಣಿಗಳನ್ನು ನುಡಿಯುವ ಮೂಲಕ ಸುದ್ದಿಯಾಗುತ್ತಾರೆ. ಬಹಳಷ್ಟು ಜನರು ಕೋಡಿ ಮಠದ ಶ್ರೀಗಳ ಭವಿಷ್ಯವಾಣಿ ನಿಜವಾಗುತ್ತದೆ ಎಂದು ಬಲವಾಗಿ ನಂಬಿದ್ದಾರೆ. ಈಗ ಕೋಡಿಮಠದ ಶ್ರೀಗಳು ನುಡಿದಿರುವಂತಹ ಹೊಸ ಭವಿಷ್ಯವಾಣಿ ಸುದ್ದಿಯಾಗಿದ್ದು ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೋಡಿಮಠದ ಶಿವಾನಂದ ಸ್ವಾಮೀಜಿಯವರು (Shivananda Swamiji) ಕ್ರೋಧಿನಾಮ ಸಂವತ್ಸರದಲ್ಲಿ ಕ್ರೋಧ, ದ್ವೇಷ, ಮದ, ಅಸೂಯೆಗಳು ಉಲ್ಬಣವಾಗಲಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಅಲ್ಲದೇ ಪಂಚಘಾತಕಗಳು ಸಂಭವಿಸುವ ಸಾಧ್ಯತೆ ಇದೆ ಎನ್ನುವ ಶಾ ಕಿಂ ಗ್ ಭವಿಷ್ಯವಾಣಿಯನ್ನು ಅವರು ನುಡಿವ ಮೂಲಕ ಗಮನ ಸೆಳೆದಿದ್ದಾರೆ.

ಪಂಚಘಾತಕಗಳು ಯಾವುದು ಎನ್ನುವ ವಿಚಾರಕ್ಕೆ ಬಂದರೆ ಭೂಕಂಪ, ಅಗ್ನಿ, ಜಲಕಂಟಕ, ವಾಯುವಿನಿಂದಲೂ ಕೂಡಾ ಅಪಾಯವಿದೆ ಎನ್ನುವ ಸುಳಿವನ್ನ ಕೊಟ್ಟಿದ್ದಾರೆ. ಈ ಆಪತ್ತುಗಳು ದೇಶ ಮತ್ತು ರಾಜ್ಯಕ್ಕೆ ಎದುರಾಗಲಿವೆ. ಕ್ರೋಧಿನಾಮ ಸಂವತ್ಸರದಲ್ಲಿ ಗುರು-ಶಿಷ್ಯನಾದರೆ, ಶಿಷ್ಯ ಗುರುವಾಗುತ್ತಾನೆ. ದೇಶದಲ್ಲಿ ಹೆಣ್ಣು ಮಕ್ಕಳ ಪ್ರಾಬಲ್ಯವೂ ಹೆಚ್ಚಾಗುತ್ತದೆ. ಅದರಿಂದ ಸುಖ-ದುಃಖ ಎರಡು ಇದೆ ಎಂದು ಹೇಳಿದ್ದಾರೆ.

ಕೋಡಿಮಠದ ಶ್ರೀಗಳು ಈ ಹಿಂದೆಯೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಬೆಳವಣಿಗೆಗಳ ಕುರಿತಾಗಿ ಬಹಳ ಮಹತ್ವವಾದಂತಹ ಭವಿಷ್ಯವಾಣಿಗಳನ್ನು ನುಡಿದು ಸಾಕಷ್ಟು ಸುದ್ದಿಯಾಗಿದ್ದರು. ಕೊರೊನಾ ವಿಚಾರವಾಗಿ ಅವರು ಭವಿಷ್ಯವಾಣಿ ನುಡಿದಿದ್ದರು. ರಾಜಕೀಯ ಬೆಳವಣಿಗೆಗಳ ವಿಚಾರದಲ್ಲಿ ಹಾಗೂ ಮಳೆಯ ವಿಚಾರದಲ್ಲಿ ಅವರು ಹೇಳಿದಂತಹ ಭವಿಷ್ಯವಾಣಿಗಳು ನಿಜವಾಗಿದೆ ಎನ್ನುವುದು ಅನೇಕರ ವಾದವಾಗಿದೆ.

Leave a Comment